Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
 • Results
 • Related
 • Featured
No results found for: "".
 • Weighted Relevancy
 • Content Sequence
 • Relevancy
 • Earliest First
 • Latest First

  ಅಧ್ಯಾಯ-50 — ಜಗತ್ತಿನ ಎಲ್ಲಾ ಕ್ರೈಸ್ತರು ಕ್ರಿಸ್ತನಲ್ಲಿ ಒಂದಾಗಬೇಕು

  (ವಿವಿಧ ದೇಶಗಳಿಂದ, ವಿವಿಧ ಭಾಷೆಗಳನ್ನಾಡುವ ಅಡ್ವೆಂಟಿಸ್ಟ್ ಸುವಾರ್ತಾಸೇವಕರುಭಾಗವಹಿಸಿದ್ದ ಒಂದು ಕೂಟದಲ್ಲಿ ಶ್ರೀಮತಿ ವೈಟಮ್ಮನವರು ಈ ಅಧ್ಯಾಯದಲ್ಲಿತಿಳಿಸಿರುವ ಹೆಚ್ಚಿನ ಹಿತವಚನಗಳನ್ನು ಕೊಟ್ಟಿದ್ದಾರೆ. ಇವರಲ್ಲಿ ಕೆಲವು ಸೇವಕರು ಶ್ರೀಮತಿವೈಟಮ್ಮನವರು ದೇವರ ಪ್ರೇರಣೆಯಿಂದ ನೀಡಿದ ಈ ಹಿತವಚನಗಳು ಅವರಸ್ವಂತದೇಶವಾದ ಅಮೇರಿಕಾದ ಜನರಿಗೆ ಮಾತ್ರ ಅನ್ವಯಿಸುತ್ತದೆಂದು ತಪ್ಪಾಗಿತಿಳಿದುಕೊಂಡಿದ್ದರು).KanCCh 363.1

  ಮಕ್ಕಳು ತಮ್ಮ ತಂದೆ-ತಾಯಿಯರ ಬಳಿಗೆ ಸರಳ ಸ್ವಭಾವದಿಂದ ಬರುವಂತೆ ನಾವುಕ್ರಿಸ್ತನ ಬಳಿಗೆ ಬಂದು, ಆತನು ವಾಗ್ದಾನ ಮಾಡಿದವುಗಳನ್ನು ಬೇಡಿಕೊಂಡು ಅವುಗಳನ್ನುಖಂಡಿತವಾಗಿ ಪಡೆದುಕೊಳ್ಳುತ್ತೇವೆಂಬ ನಂಬಿಕೆಹೊಂದಿದ್ದಲ್ಲಿ, ನಾವು ಕೇಳಿಕೊಂಡವುಗಳನ್ನುಆತನು ಕೊಡುತ್ತಾನೆ. ನಾವು ದೃಢವಿಶ್ವಾಸ ವ್ಯಕ್ತಪಡಿಸಿದಲ್ಲಿ ಈಗ ನಡೆಯುತ್ತಿರುವಸುವಾರ್ತಾ ಕೂಟಗಳಲ್ಲಿ ಅಧಿಕವಾದಆಶೀರ್ವಾದವನ್ನು ದೇವರಾತ್ಮನಿಂದ ಹೊಂದುತ್ತೇವೆ.ಈ ಸುವಾರ್ತಾಕೂಟವು ಇನ್ನೂ ಅನೇಕ ದಿನಗಳು ನಡೆಯುತ್ತದೆಂದು ತಿಳಿದು ಶ್ರೀಮತಿವೈಟಮ್ಮನವರು ಸಂತೋಷ ವ್ಯಕ್ತಪಡಿಸಿದರು. ಆದರೆ ಆತ್ಮೀಕ ವರದ ಬುಗ್ಗೆಯ ಬಳಿಗೆಬಂದು ನಾವು ಕುಡಿಯುತ್ತೇವೆಯೇ? ಎಂಬುದು ಈಗಿರುವ ಪ್ರಶ್ನೆ. ಸತ್ಯವನ್ನು ಸಾರುವದೇವಸೇವಕರು ಮಾದರಿ ತೋರಿಸುವರೇ? ನಾವು ದೇವರ ವಾಕ್ಯದಲ್ಲಿ ವಿಶ್ವಾಸವಿಟ್ಟಲ್ಲಿ.ದೇವರುನಮಗಾಗಿ ಅದ್ಭುತಕಾರ್ಯಗಳನ್ನು ಮಾಡುವನು. ನಾವು ನಮ್ರವಾದ ಹೃದಯದಿಂದನಮ್ಮನ್ನು ತಗ್ಗಿಸಿಕೊಂಡು ಆತನ ಮುಂದೆ ಇಲ್ಲಿ ಬರಬೇಕಲ್ಲವೇ?KanCCh 363.2

  ಶ್ರೀಮತಿ ವೈಟಮ್ಮನವರು ಈ ಕೂಟಗಳು ಆರಂಭವಾದಾಗಿನಿಂದಲೂ, ಪ್ರೀತಿ ಹಾಗೂನಂಬಿಕೆಯ ಬಗ್ಗೆ ಹೆಚ್ಚಾಗಿ ಮಾತಾಡಬೇಕೆಂದು ಪ್ರಾರ್ಥಿಸುತ್ತಿದ್ದರು. ಯಾಕೆಂದರೆ ಈಸಾಕ್ಷಿಯು ಆ ಕೂಟದಲ್ಲಿ ವಿವಿಧ ದೇಶಗಳಿಂದ ಬಂದ ಸೇವಕರಿಗೆ ಅಗತ್ಯವಾಗಿತ್ತು.ಕೆಲವು ಸುವಾರ್ತಾಸೇವಕರು ಫ್ರಾನ್ಸ್ ಹಾಗೂ ಜರ್ಮನ್‌ದೇಶದ ಜನರನ್ನು ನೀವುಇದನ್ನು ಅರ್ಥಮಾಡಿಕೊಳ್ಳಲಾರಿರಿ ಎಂದು ಹೇಳುತ್ತಿದ್ದರು.KanCCh 363.3

  ಆದರೆ ಶ್ರೀಮತಿ ವೈಟಮ್ಮನವರು ಆ ಸುವಾರ್ತಾಸೇವಕರಿಗೆ ದೇವರು ಅವರನ್ನುಅರ್ಥಮಾಡಿಕೊಳ್ಳಲಾರನೇ? ಆತನೇ ಅಲ್ಲವೇ ತನ್ನ ಸೇವಕರ ಮೂಲಕ ಜನರಿಗೆಸಂದೇಶ ಕೊಡುವವನು? ಫ್ರೆಂಚರಿಗೂ, ಜರ್ಮನರಿಗೂ ಏನು ಅಗತ್ಯವಿದೆ ಎಂದುದೇವರಿಗೆ ತಿಳಿದಿದೆ. ತನ್ನ ಸೇವಕರ ಮೂಲಕ ಜನರಿಗೆ ದೇವರು ನೇರವಾಗಿಸಂದೇಶ ಕಳುಹಿಸಿದಲ್ಲಿ, ಅದು ಕಳುಹಿಸಲ್ಪಟ್ಟ ಉದ್ದೇಶವು ನೆರವೇರಲ್ಪಡುವುದು.KanCCh 363.4

  ಈಸಂದೇಶವು ಕ್ರಿಸ್ತನಲ್ಲಿ ಎಲ್ಲರನ್ನೂ ಒಂದು ಮಾಡುವುದು. ಕೆಲವರು ಫ್ರೆಂಚರಾಗಿರಲಿ,ಜರ್ಮನ್ನರಾಗಿರಲಿ ಬೇರೆ ಕೆಲವರು ಅಮೇರಿಕನ್ನರಾಗಿರಲಿ, ಅವರೆಲ್ಲರೂ ಖಂಡಿತವಾಗಿಯೂಕ್ರಿಸ್ತನಂತಿರುವರು.KanCCh 364.1

  ಯೆಹೂದ್ಯರ ದೇವಾಲಯವು ಕಲ್ಲು ಗಣಿಗಳಲ್ಲಿ ದೊರೆತ ಕೆತ್ತಲ್ಪಟ್ಟ ಕಲ್ಲುಗಳಿಂದಕಟ್ಟಲ್ಪಟ್ಟಿತ್ತು. ಯೆರೂಸಲೇಮಿಗೆ ತರಲಿಕ್ಕೆ ಮೊದಲೇ ಆ ಪ್ರತಿಯೊಂದು ಕಲ್ಲುಗಳುದೇವಾಲಯಕ್ಕೆ ಸರಿಯಾಗಿ ಹೊಂದಿಕೊಳ್ಳುವಂತೆ, ಕೆತ್ತಲ್ಪಟ್ಟು ನಯಗೊಳಿಸಿ ಪರೀಕ್ಷಿಸಲ್ಪಟ್ಟಿದ್ದವು.ಈ ಕಾರಣದಿಂದ ದೇವಾಲಯ ಕಟ್ಟುವಾಗ ಉಳಿ ಅಥವಾ ಸುತ್ತಿಗೆಯ ಶಬ್ದವು ಕೇಳಿಬರಲಿಲ್ಲ.ಈ ಕಟ್ಟಡವು ದೇವರ ಆತ್ಮೀಕ ಆಲಯವಾಗಿದ್ದು, ಎಲ್ಲಾ ಜನಾಂಗ ಭಾಷೆ, ದೇಶಗಳಿಂದತಂದ ಸಾಮಗ್ರಿಗಳಿಂದ ಕಟ್ಟಲ್ಪಟ್ಟಿತ್ತು. ಬಡವರು, ಬಲ್ಲಿದರು, ಮೇಲುಕೀಳು, ಶಿಕ್ಷಿತಅಶಿಕ್ಷಿತ ಎಂಬ ಯಾವುದೇ ಭೇದಭಾವ ಅಲ್ಲಿರಲಿಲ್ಲ. ಇವು ಉಳಿ ಹಾಗೂ ಸುತ್ತಿಗೆಗಳಿಂದಕೆತ್ತಲ್ಪಟ್ಟ ನಿರ್ಜಿವ ವಸ್ತುಗಳಾಗಿರಲಿಲ್ಲ. ಬದಲಾಗಿ ಸತ್ಯದಿಂದ ಈ ಲೋಕದಿಂದ ತೆಗೆಯಲ್ಪಟ್ಟಸಜೀವ ಕಲ್ಲುಗಳಾಗಿದ್ದವು. ಈಗ ಮಹಾನ್ ಶಿಲ್ಪಿಯಾಗಿರುವ ಹಾಗೂ ದೇವಾಲಯದಕರ್ತನಾಗಿರುವಾತನು ಸಜೀವ ಕಲ್ಲುಗಳಾದ ನಮ್ಮನ್ನು ಆತ್ಮೀಕ ದೇವಾಲಯದಲ್ಲಿ ಆಯಾಸ್ಥಳದಲ್ಲಿ ಸೂಕ್ತವಾಗಿ ಹೊಂದಿಕೊಳ್ಳುವಂತೆ ಹಾಗೂ ಆಕಾರಕ್ಕೆ ತಕ್ಕಂತೆ ಕತ್ತರಿಸಿಹೊಳಪು ಕೊಡುತ್ತಿದ್ದಾನೆ. ಈ ಆಲಯವು ಮುಕ್ತಾಯವಾದಾಗ, ಎಲ್ಲಾ ವಿಧದಲ್ಲಿಯೂಅತ್ಯಂತ ಪರಿಪೂರ್ಣವಾಗಿರುತ್ತದೆ. ಇದರ ಶಿಲ್ಪಿಯು ದೇವರೇ ಆಗಿರುವುದರಿಂದದೇವದೂತರು ಮತ್ತು ದೇವರ ಮೆಚ್ಚುಗೆಗೆ ಪಾತ್ರವಾಗುತ್ತದೆ.KanCCh 364.2

  ತನ್ನ ಮೇಲೆ ಯಾವುದೇ ಹೊಡೆತ ಬೀಳುವ ಅಗತ್ಯವಿಲ್ಲವೆಂದು ಯಾರೂ ಸಹನೆನಸಬಾರದು. ಪ್ರತಿಯೊಂದು ಅಭ್ಯಾಸ ಮತ್ತು ಆಲೋಚನೆಯಲ್ಲಿ ಪರಿಪೂರ್ಣವಾಗಿರುವಯಾವುದೇ ರಾಷ್ಟ್ರವಾಗಲಿ ಅಥವಾ ವ್ಯಕ್ತಿಯಾಗಲಿ ಇಲ್ಲ. ಒಬ್ಬರು ಮತ್ತೊಬ್ಬರಿಂದಕಲಿತುಕೊಳ್ಳಬೇಕು. ಆದುದರಿಂದ ವಿವಿಧ ದೇಶಗಳವರು ಒಟ್ಟಾಗಿಸೇರಿ ತೀರ್ಮಾನತೆಗೆದುಕೊಳ್ಳುವುದರಲ್ಲಿ ಮತ್ತು ಉದ್ದೇಶದಲ್ಲಿಒಂದಾಗಿರಬೇಕೆಂದು ದೇವರು ಬಯಸುತ್ತಾನೆ.ಆಗ ಕ್ರಿಸ್ತನಲ್ಲಿರುವ ಐಕ್ಯತೆಯು ಉದಾಹರಣೆಯಮೂಲಕ ತೋರಿಸಲ್ಪಡುತ್ತದೆ.KanCCh 364.3

  ಯೂರೋಪ್ ಖಂಡದ ವಿವಿಧದೇಶಗಳ ಜನರ ಸ್ವಭಾವವು ತನ್ನದೇ ಆದವಿಶಿಷ್ಟತೆಯಿಂದ ಕೂಡಿದೆ ಹಾಗೂ ಅವರಿಗೆ ಅಡ್ವೆಂಟಿಸ್ಟ್ ಸತ್ಯಸಾರಲು ನಿರ್ದಿಷ್ಟವಾದಮಾರ್ಗ ಅನುಸರಿಸಬೇಕೆಂದು ಜನರು ಮಾತಾಡಿಕೊಳ್ಳುವ ವಿಷಯ ಶ್ರೀಮತಿವೈಟಮ್ಮನವರಿಗೆ ತಿಳಿದಿತ್ತು. ಆದರೆ ಯಾರಿಗೆ ವಿವೇಕದ ಅಗತ್ಯವಿದ್ದು, ಅದಕ್ಕಾಗಿಬೇಡಿಕೊಳ್ಳುವರೋ, ಅವರಿಗೆ ಅದನ್ನು ಕೊಡುತ್ತೇನೆಂದು ದೇವರು ವಾಗ್ದಾನಮಾಡಿದ್ದಾನೆ.ಸತ್ಯವನ್ನು ಅಂಗೀಕರಿಸಿಕೊಳ್ಳುವ ಸ್ಥಳಕ್ಕೆ ದೇವರು ಜನರನ್ನು ನಡೆಸುತ್ತಾನೆ. ಕುಂಬಾರನುಜೇಡಿಮಣ್ಣನ್ನು ತನಗೆ ಬೇಕಾದಂತೆ ಆಕಾರ ಕೊಡುತ್ತಾನೋ, ಅದೇರೀತಿ ದೇವರು ನಮ್ಮ ಮನಸ್ಸನ್ನು ತನ್ನ ವಶಕ್ಕೆ ತೆಗೆದುಕೊಂಡು ತನ್ನ ಚಿತ್ರದ ಪ್ರಕಾರ ಆಕಾರ ಕೊಟ್ಟಲ್ಲಿ.ಕ್ರೈಸ್ತ ಸಹೋದರರಲ್ಲಿ ಭಾಷೆ, ಜನಾಂಗ, ಕುಲ, ಬಣ್ಣ ಎಂಬ ವಿಷಯಗಳ ಬಗ್ಗೆಯಾವುದೇ ವ್ಯತ್ಯಾಸ ಇರುವುದಿಲ್ಲ. ಸಹೋದರರೇ ಕ್ರಿಸ್ತನನ್ನು ದೃಷ್ಟಿಸಿ ನೋಡಿ, ಆತನಮಾದರಿ ಹಾಗೂ ವಿಧಾನಗಳನ್ನು ಅನುಕರಿಸಿದಲ್ಲಿ ಯಾವುದೇ ಜನಾಂಗ, ದೇಶದವರಿಗೆಸುವಾರ್ತೆಸಾರುವುದು ಕಷ್ಟವಾಗುವುದಿಲ್ಲ. ನಮಗೆ ಐದಾರು ಮಾದರಿಗಳಿಲ್ಲ. ಒಂದೇಒಂದುಮಾತ್ರವಿದೆ. ಅದೇ ಕ್ರಿಸ್ತನ ಮಾದರಿ; ಇಟಲಿದೇಶದ ಸಹೋದರರೇ ಆಗಲಿ, ಫ್ರಾನ್ಸ್ಅಥವಾ ಜರ್ಮನ್ ದೇಶದ ಸಹೋದರರೇ ಆಗಿರಲಿ, ಕ್ರಿಸ್ತನ ಮಾದರಿ ಅನುಸರಿಸಲುಪ್ರಯತ್ನಿಸಲಿ. ಆಗ ಅವರು ಒಂದೇ ಸತ್ಯದ ಅಸ್ತಿವಾರದಲ್ಲಿ ನೆಲೆಗೊಂಡಿರುತ್ತಾರೆ. ಮಹಿಮೆಯನಿರೀಕ್ಷೆಯಾಗಿರುವ ಕ್ರಿಸ್ತನು ಅವರಲ್ಲಿರುವುದರಿಂದ ಎಲ್ಲಾ ಸಹೋದರರಲ್ಲಿಯೂ, ಒಂದೇರೀತಿಯ ಚೈತನ್ಯವಿರುತ್ತದೆ. ಸಹೋದರ, ಸಹೋದರರೇ ವಿವಿಧ ದೇಶಗಳ ಜನರನಡುವೆ ಯಾವುದೇ ರೀತಿಯ ಭಿನ್ನಭೇದಗಳಿರಬಾರದೆಂದು ಶ್ರೀಮತಿ ವೈಟಮ್ಮನವರುನಮಗೆ ಎಚ್ಚರಿಕೆ ನೀಡುತ್ತಾರೆ. ಬದಲಾಗಿ ಎಲ್ಲೆಲ್ಲಿ ಇಂತಹ ಭೇದಭಾವ ಇರುತ್ತದೋ,ಅವುಗಳನ್ನು ತೆಗೆದುಹಾಕಲು ಪ್ರಯತ್ನಿಸಿ. ನಮ್ಮ ಸಹೋದರರ ರಕ್ಷಣೆಯು ನಮ್ಮ ಏಕೈಕಗುರಿಯಾಗಿದ್ದು, ಅದಕ್ಕಾಗಿ ನಾವು ಶ್ರಮಪಡಬೇಕಲ್ಲದೆ, ಕ್ರಿಸ್ತನಲ್ಲಿದ್ದಂತೆ ಸಾಮರಸ್ಯ,ಸೌಹಾರ್ದತೆಯು ಎಲ್ಲರನ್ನೂ ಒಟ್ಟುಗೂಡಿಸುವಂತೆ ಪ್ರಯತ್ನಿಸಬೇಕು.KanCCh 364.4

  ದೇವರ ಸೇವೆಮಾಡುತ್ತಿರುವ ನನ್ನ ಸಹೋದರರೇ, ದೇವರ ಅಪಾರವಾದವಾಗ್ದಾನಗಳನ್ನು ಅರಿತುಕೊಂಡಿರುವಿರಾ? ಕ್ರಿಸ್ತನು ನಿಮ್ಮ ಹೃದಯದಲ್ಲಿ ಪ್ರವೇಶಿಸುವಂತೆಸ್ವಾರ್ಥ ತೊರೆಯುವಿರಾ? ದೇವರು ನಿಮ್ಮಲ್ಲಿ ಕೆಲಸ ಮಾಡಬೇಕಾದಲ್ಲಿ ಮೊದಲುಸ್ವಾರ್ಥ ತೊರೆಯಬೇಕು. ಎಲ್ಲೆಲ್ಲಿಯೂ ಸ್ವಾರ್ಥ ತುಂಬಿರುವುದನ್ನು ನೋಡಿ ತಾನುಗಾಬರಿಗೊಂಡೆನೆಂದು ಶ್ರೀಮತಿ ವೈಟಮ್ಮನವರು ಹೇಳುತ್ತಾರೆ. ನಜರೇತಿನ ಯೇಸುವಿನಹೆಸರಿನಲ್ಲಿ ನಿಮ್ಮ ಉದ್ದೇಶ, ಇಚ್ಛೆಗಳು ಸಾಯಬೇಕು ಹಾಗೂ ಅವು ದೇವರಚಿತ್ತವಾಗಬೇಕೆಂದು ಶ್ರೀಮತಿ ವೈಟಮ್ಮನವರು ಹೇಳುತ್ತಾರೆ. ನಿಮ್ಮ ಎಲ್ಲಾ ಅಶುದ್ಧತೆಯನ್ನುಹೋಗಲಾಡಿಸಿ ನಿಮ್ಮನ್ನು ಶುದ್ಧಿಗೊಳಿಸಬೇಕೆಂದು ದೇವರು ಬಯಸುತ್ತಾನೆ. ಈ ಕೂಟವುಮುಕ್ತಾಯಗೊಳ್ಳುವುದಕ್ಕೆ ಮೊದಲು ಆತನ ಅಪಾರವಾದ ಆಶೀರ್ವಾದಗಳನ್ನು ನೀವುಮನವರಿಕೆ ಮಾಡಿಕೊಳ್ಳುವಂತೆ ದೇವರ ಬಳಿಗೆ ಬರಬೇಕೆಂದು ಶ್ರೀಮತಿ ವೈಟಮ್ಮನವರುಆ ಕೂಟದಲ್ಲಿ ಭಾಗವಹಿಸಿದ್ದ ಜನರಿಗೆ ಮನವಿ ಮಾಡಿದರು.KanCCh 365.1