Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಹೊಗೆಸೊಪ್ಪು ಒಂದು ನಿಧಾನಗತಿಯ ವಿಷಪದಾರ್ಥ

    ಹೊಗೆಸೊಪ್ಪು ಅತ್ಯಂತ ನಿಧಾನವಾದ, ವಂಚಿಸುವ ಆದರೆ ಅತ್ಯಂತ ಹಾನಿಕಾರಕ ವಿಷ ಪದಾರ್ಥವಾಗಿದೆ. ಅದನ್ನು ಬೀಡಿ, ಸಿಗರೇಟು, ಚುಟ್ಟ, ಜರ್ದಾ ಮುಂತಾದ ಯಾವುದೇ ರೂಪದಲ್ಲಿ ಉಪಯೋಗಿಸಲಿ, ಅದು ಶರೀರದ ಮೇಲೆ ಪರಿಣಾಮ ಬೀರುವುದು. ಹೊಗೆಸೊಪ್ಪಿನ ಸೇವನೆಯ ಹಾನಿಕಾರಕ ಪರಿಣಾಮಗಳು ಆರಂಭದಲ್ಲಿ ಕಂಡುಬರದಷ್ಟು ನಿಧಾನವಾಗುವುದರಿಂದ, ಇದು ಮತ್ತಷ್ಟು ಅಪಾಯಕಾರಿಯಾಗಿದೆ. ಇದು ನರಗಳನ್ನು ಮೊದಲು ಪ್ರಚೋದಿಸುತ್ತದೆ. ಅನಂತರ ಮಂಕುಗೊಳಿಸುತ್ತದೆ. ಮೆದುಳನ್ನು ದುರ್ಬಲಗೊಳಿಸಿ, ನಿಷ್ಕ್ರಿಯಗೊಳಿಸುವುದು. ಅಮಲೇರಿಸುವ ಮದ್ಯಪಾನಕಿಂತಲೂ ತಂಬಾಕುಸೇವನೆಯು ಅತ್ಯಂತ ಪ್ರಭಾವಕಾರಿಯಾಗಿ ನರಗಳನ್ನು ಹಾನಿಗೊಳಿಸುತ್ತದೆ. ತಂಬಾಕಿನ ಅಪಾಯಕಾರಿ ಪರಿಣಾಮಗಳನ್ನು ನಮ್ಮ ಶರೀರದಿಂದ ಹೊರದೂಡುವುದು ಬಹಳ ಕಷ್ಟ. ಇದನ್ನು ಉಪಯೋಗಿಸುವುದರಿಂದ ಮದ್ಯಪಾನ ಮಾಡಬೇಕೆಂಬ ಪ್ರಚೋದನೆ ಉಂಟಾಗುತ್ತದೆ. ತಂಬಾಕುಸೇವನೆಯು ಮದ್ಯಪಾನದ ದುರಾಭ್ಯಾಸಕ್ಕೆ ಅಸ್ತಿವಾರವಾಗಿದೆ. ಇದರ ಸೇವನೆಯು ವೆಚ್ಚದಾಯಕವೂ, ಅಶುದ್ಧವೂ, ಕೆಟ್ಟವಾಸನೆ ಹುಟ್ಟಿಸುವಂತದ್ದು ಆಗಿದೆ ಮತ್ತು ಇತರರಿಗೆ ಅಸಹ್ಯ ತರುತ್ತದೆ.KanCCh 102.4

    ಮಕ್ಕಳು ಮತ್ತು ಯೌವನಸ್ಥರಲ್ಲಿ ತಂಬಾಕು ಹೇಳಲಾರದಷ್ಟು ಹಾನಿಯುಂಟು ಮಾಡುತ್ತದೆ. ಚಿಕ್ಕಂದಿನಲ್ಲಿಯೇ ಅವರು ಅದನ್ನು ಉಪಯೋಗಿಸಲು ತೊಡಗಿದಾಗ, ಇದು ಒಂದು ಚಟವಾಗಿ ಮಾರ್ಪಡುತ್ತದೆ. ಇದು ಶರೀರ ಮತ್ತು ಮನಸ್ಸಿನ ಮೇಲೆ ಪರಿಣಾಮಬೀರಿ ಇದನ್ನು ಸೇವಿಸುವವರು ದೈಹಿಕವಾಗಿ ಬಲಹೀನರಾಗುವರು ಹಾಗೂ ಅವರ ಮನಸ್ಸು ಜಡವಾಗುವುದು. ನೈತಿಕತೆಯು ನಾಶವಾಗುವುದು.KanCCh 103.1

    ಹೊಗೆಸೊಪ್ಪು ಸೇವನೆಯ ಚಟವು ಆನುವಂಶಿಕವಾಗಿ ಬರುವುದೇ ಹೊರತು, ಪ್ರಕೃತಿಯಲ್ಲಿ ಸಹಜವಾಗಿ ಇದನ್ನು ಸೇವಿಸ ಬೇಕೆಂಬ ಬಯಕೆ ಉಂಟಾಗುವುದಿಲ್ಲ. ಕಾಫಿ ಮತ್ತು ಚಹಾ ಕುಡಿಯುವುದರಿಂದ ತಂಬಾಕು ಸೇವಿಸಬೇಕೆಂಬ ಉತ್ಕಟ ಬಯಕೆ ಉಂಟಾಗುತ್ತದೆ. ಹೆಚ್ಚು ಮಸಾಲೆಯುಕ್ತ ಆಹಾರ ಪದಾರ್ಥಗಳು ಜಠರವನ್ನು ಉರಿಯೂತ ಗೊಳಿಸಿ, ರಕ್ತವನ್ನು ಮಲಿನಗೊಳಿಸುತ್ತವೆ. ಇದರಿಂದ ಧೂಮಪಾನ ಮತ್ತು ಮದ್ಯಪಾನ ಮಾಡಬೇಕೆಂಬ ತೀವ್ರ ಬಯಕೆ ಉಂಟಾಗುವುದು. ಹೆಚ್ಚು ಮಸಾಲೆಭರಿತ ಮಾಂಸಾಹಾರ, ಚಹಾ, ಕಾಫಿ ಸೇವನೆಯು ಮಕ್ಕಳಲ್ಲಿ ತಂಬಾಕಿನಂತ ತೀಕ್ಷ್ಣವಾದ ಉತ್ತೇಜಕಗಳನ್ನು ಸೇವಿಸಬೇಕೆಂಬ ಪ್ರಚೋದನೆ ನೀಡುತ್ತದೆ. ತಂಬಾಕು ಸೇವನೆಯು ಮದ್ಯಪಾನ ಮಾಡಬೇಕೆಂಬ ಆಸೆಯನ್ನು ಉತ್ತೇಜಿಸುತ್ತದೆ.KanCCh 103.2