Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಸಂಪೂರ್ಣವಾಗಿ ದೇವರಿಗೆ ಒಪ್ಪಿಸಿಕೊಡಬೇಕು

    ಸಹೋದರರೇ, ನಿಮ್ಮ ಕರ್ತವ್ಯವನ್ನು ನಿಷ್ಠೆಯಿಂದಮಾಡಲು ನೀವು ಸಿದ್ಧರಾಗಬೇಕೆಂದು ಕರ್ತನಹೆಸರಿನಲ್ಲಿ ಶ್ರೀಮತಿವೈಟಮ್ಮನವರು ನಮಗೆ ತಿಳಿಸುತ್ತಾರೆ. ನಿಮ್ಮ ಹೃದಯಗಳು ಪರಿಶುದ್ಧಾತ್ಮನ ಶಕ್ತಿಗೆ ಒಳಪಡಲಿ. ಆಗ ನೀವು ದೇವರವಾಕ್ಯವನ್ನು ಅಂಗೀಕರಿಸುವುದಕ್ಕೆ ಅವಕಾಶವಾಗುತ್ತದೆ. ಆಗ ದೇವರಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.KanCCh 417.2

    ಅತ್ಯಂತಗಂಭೀರವಾದ ಕ್ರಿಸ್ತನವಿಷಯವಾದ ಸಾಕ್ಷಿಯಾದ ಪ್ರವಾದನಾ ಆತ್ಮವನ್ನು ಈ ಜಗತ್ತಿಗೆ ತಿಳಿಸಬೇಕಾಗಿದೆ (ಪ್ರಕಟನೆ 19:10). ಪ್ರಕಟನೆ ಪುಸ್ತಕದಾದ್ಯಂತ ಅತ್ಯಂತ ಅಮೂಲ್ಯವಾದ ಮತ್ತು ಉನ್ನತವಾದ ವಾಗ್ದಾನಗಳಿವೆ ಹಾಗೂ ಅತ್ಯಂತ ಭಯಹುಟ್ಟಿಸುವಂತ ಎಚ್ಚರಿಕೆಗಳೂ ಇವೆ. ಸತ್ಯದ ಪರಿಜ್ಞಾನವಿದೆ ಎಂದು ಹೇಳಿಕೊಳ್ಳುವವರು ಕ್ರಿಸ್ತನಿಂದ ಯೋಹಾನನಿಗೆ ಕೊಡಲ್ಪಟ್ಟಿರುವ ಪ್ರವಾದನಾ ಆತ್ಮವನ್ನು ಅಂದರೆ ಶ್ರೀಮತಿ ವೈಟಮ್ಮನವರು ಬರೆದ ಪುಸ್ತಕಗಳನ್ನು ಅಧ್ಯಯನ ಮಾಡಬೇಕಲ್ಲವೇ? ಇದರಲ್ಲಿ ಯಾವುದೇ ಊಹಾಪೋಹಗಳಿಲ್ಲ ಅಥವಾ ವೈಜ್ಞಾನಿಕ ವಂಚನೆಗಳಿಲ್ಲ. ಈ ಪುಸ್ತಕಗಳಲ್ಲಿ ಇಂದಿನಕಾಲದ ಹಾಗೂ ಮುಂದಿನ ಯೋಗಕ್ಷೇಮಕ್ಕೆ ಸಂಬಂಧಪಟ್ಟ ಸತ್ಯಗಳಿವೆ. ಗೋಧಿಗೂ, ಹೊಟ್ಟಿಗೂ ಸಂಬಂಧವೇನು? ಕರ್ತನುಶೀಘ್ರದಲ್ಲಿಯೇ ಬರಲಿದ್ದಾನೆ. ಕಾವಲುಗಾರರಾದ ನಾವು ದೇವರು ಕೊಟ್ಟ ಜವಾಬ್ದಾರಿಯಂತೆ ಜನರನ್ನು ಈ ವಿಷಯದಲ್ಲಿ ಎಚ್ಚರಗೊಳಿಸಬೇಕಾಗಿದೆ. ಜಗತ್ತಿಗೆ ಆತ್ಮೀಕಅಂಧಕಾರ ಬರುತ್ತಿದೆ ಹಾಗೂ ಪವಿತ್ರಾತ್ಮನ ಬಲದಿಂದ ಕೊನೆಯಕಾಲದ ಎಚ್ಚರಿಕೆಯ ಸಂದೇಶ ನೀಡಬೇಕಾದ ಕಾವಲುಗಾರರನ್ನು ದೇವರು ಕರೆಯುತ್ತಿದ್ದಾನೆ. ಆತ್ಮೀಕವಾಗಿ ನಿದ್ರೆಯಲ್ಲಿರುವವರು ಎರಡನೇಮರಣಕ್ಕೆ ತುತ್ತಾಗದಂತೆ ಪುರುಷರು ಹಾಗೂ ಮಹಿಳೆಯರನ್ನು ನಿರಾಸಕ್ತಿ ಮತ್ತು ನಿದ್ರೆಯಮಂಪರಿನಿಂದ ಎಬ್ಬಿಸುವಂತ ಕಾವಲುಗಾರರು ದೇವರಿಗೆ ಬೇಕಾಗಿದ್ದಾರೆ.KanCCh 417.3

    *****