Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಧಾರ್ಮಿಕ ಕ್ರಿಯೆಗಾಗಿ ಸಿದ್ಧತೆ

    ಕಾಲುತೊಳೆಯುವ ಈ ಧಾರ್ಮಿಕ ಕ್ರಿಯೆಯು ಕರ್ತನ ಭೋಜನವೆಂಬ ಪವಿತ್ರಸಂಸ್ಕಾರಕ್ಕಾಗಿ ಕ್ರಿಸ್ತನುನೇಮಿಸಿದ ಪೂರ್ವಸಿದ್ಧತೆಯಾಗಿದೆ. ಹೃದಯದಲ್ಲಿ ಅಹಂಕಾರ,ಜಗಳ, ಕಲಹ ಹಾಗೂ ಭಿನ್ನಾಭಿಪ್ರಾಯಗಳು ತುಂಬಿರುವಾಗ ಕ್ರಿಸ್ತನೊಂದಿಗೆ ಅನ್ನೋನ್ಯತೆಹೊಂದಲಾಗದು. ಅಂತವರು ಆತನ ಶರೀರ ಹಾಗೂ ಆತನ ರಕ್ತವನ್ನು ಸ್ವೀಕರಿಸಲು ಸಿದ್ಧತೆಮಾಡಿಕೊಂಡಿರುವುದಿಲ್ಲ. ಈ ಕಾರಣದಿಂದಲೇ ರೊಟ್ಟಿ ಹಾಗೂ ದ್ರಾಕ್ಷಾರಸವನ್ನುಸ್ವೀಕರಿಸುವ ಮೊದಲು ಪಾದ ತೊಳೆಯುವ ಸಂಸ್ಕಾರವನ್ನು ದೀನಸ್ವಭಾವವನ್ನು ಸೂಚಿಸುವನೆನಪಿಗಾಗಿ ನೇಮಿಸಿದನು.KanCCh 373.3

    ದೇವರ ಮಕ್ಕಳು ಕರ್ತನ ಪವಿತ್ರ ಭೋಜನದ ಸಂಸ್ಕಾರದಲ್ಲಿ ಭಾಗವಹಿಸುವುದಕ್ಕೆಸೇರಿದಾಗ ಜೀವಸ್ವರೂಪನೂ, ಮಹಿಮಾಪೂರ್ಣನೂ ಆದ ಕರ್ತನ ಮಾತುಗಳನ್ನುನೆನಪಿಗೆ ತಂದುಕೊಳ್ಳಬೇಕು: “ನೀವು ನನ್ನನ್ನು ಗುರುವೆಂದೂ, ಕರ್ತನೆಂದೂ ಕರೆಯುತ್ತೀರಿ;ನೀವು ಕರೆಯುವುದು ಸರಿ, ನಾನು ಅಂಥವನೇ ಹೌದು. ಕರ್ತನೂ, ಗುರುವೂ ಆಗಿರುವನಾನು ನಿಮ್ಮ ಕಾಲುಗಳನ್ನು ತೊಳೆದಿರಲಾಗಿ, ನೀವು ಸಹ ಒಬ್ಬರಕಾಲುಗಳನ್ನುಒಬ್ಬರುತೊಳೆಯುವ ಹಂಗಿನವರಾಗಿದ್ದೀರಿ, ನಾನು ನಿಮಗೆ ಮಾಡಿದ ಮೇರೆಗೆ ನೀವುಸಹ ಮಾಡುವಂತೆ ನಿಮಗೆ ಮಾದರಿಯನ್ನು ತೋರಿಸಿದ್ದೇನೆ. ನಿಮಗೆ ನಿಜನಿಜವಾಗಿಹೇಳುತ್ತೇನೆ-ದಣಿಗಿಂತ ಆಳು ದೊಡ್ಡವನಲ್ಲ, ಕಳುಹಿಸಲ್ಪಟ್ಟವನು ಕಳುಹಿಸಿದವನಿಗಿಂತದೊಡ್ಡವನಲ್ಲ. ನೀವು ಇದನ್ನು ತಿಳುಕೊಂಡು ಇದರಂತೆ ಮಾಡಿದರೆ ನೀವು ಧನ್ಯರು“(ಯೋಹಾನ 13:14-17).KanCCh 374.1

    ಮನುಷ್ಯರು ತಮ್ಮನ್ನು ಇತರ ಸಹೋದರರಿಗಿಂತ ಶ್ರೇಷ್ಠರೆಂದು ಎಣಿಸುವುದು,ಸ್ವಾರ್ಥದಿಂದ ವರ್ತಿಸಿ ಉನ್ನತಸ್ಥಾನ ಅಪೇಕ್ಷಿಸುವುದು ಅವರ ಸಹಜ ಸ್ವಭಾವವಾಗಿದೆ.ಇದರ ಪರಿಣಾಮವಾಗಿ ಕೆಟ್ಟ ಆಲೋಚನೆಗಳು, ಸಂದೇಹಗಳು ಮತ್ತು ಕಹಿಭಾವನೆಉಂಟಾಗುತ್ತವೆ. ಕರ್ತನ ರೊಟ್ಟಿ ಹಾಗೂ ದ್ರಾಕ್ಷಾರಸದಲ್ಲಿ ಭಾಗಿಯಾಗುವುದಕ್ಕೆ ಮೊದಲುಕಾಲುಗಳನ್ನು ತೊಳೆಯುವ ಸಂಸ್ಕಾರವು ಇಂತಹ ಅಪಾರ್ಥಗಳನ್ನು ತೆಗೆದುಹಾಕುವುದಕ್ಕೂಹಾಗೂ ಅದರಲ್ಲಿ ಭಾಗವಹಿಸುವವರು ತಮ್ಮ ಸ್ವಾರ್ಥ ಹಾಗೂ ಅಹಂಕಾರಬಿಟ್ಟುತಮ್ಮನ್ನು ತಾವೇ ದೀನತೆಯಿಂದ ತಗ್ಗಿಸಿಕೊಂಡು ಸಹೋದರರಿಗೆ ಸೇವೆಮಾಡುವುದಕ್ಕೂಸಹಾಯಕವಾಗುತ್ತದೆ.KanCCh 374.2

    ಈ ಪವಿತ್ರಸಂಸ್ಕಾರದಲ್ಲಿ ಭಾಗವಹಿಸುವವರಲ್ಲಿ ತಮ್ಮ ಹೃದಯಗಳನ್ನು ಪರಿಶೋಧಿಸಿಪಾಪದ ಅರುಹನ್ನು ಹುಟ್ಟಿಸುವುದಕ್ಕೆ ಹಾಗೂ ಅವರ ಪಾಪಗಳು ಕ್ಷಮಿಸಲ್ಪಟ್ಟಿವೆ ಎಂದುಭಾಗ್ಯಕರವಾದ ಭರವಸೆ ನೀಡುವುದಕ್ಕೆ ಪರಲೋಕದಿಂದ ಬಂದ ಅನಿಮಿಷನಾದ (HolyWatcher) ಕ್ರಿಸ್ತನು ಅಲ್ಲಿಪ್ರಸನ್ನನಾಗಿರುತ್ತಾನೆ (ದಾನಿಯೇಲನು 4:13), ಸ್ವಾರ್ಥಿಗಳಾದಮನುಷ್ಯರ ಹೃದಯಗಳಲ್ಲಿ ಹರಿಯುತ್ತಿರುವ ಭಾವನೆಗಳನ್ನು ಬದಲಾಯಿಸಲುಕೃಪಾನಿಧಿಯಾಗಿರುವ ಆತನು ಅಲ್ಲಿರುತ್ತಾನೆ.ಕರ್ತನ ಮಾದರಿಯನ್ನು ಅನುಸರಿಸುವವರವಿವೇಕವನ್ನು ಪವಿತ್ರಾತ್ಮನು ಚೈತನ್ಯಗೊಳಿಸುತ್ತಾನೆ. ರಕ್ಷಕನು ನಮಗಾಗಿ ದೀನಭಾವದಿಂದಮಾಡಿದ ಸೇವೆಯನ್ನು ನಾವು ನೆನಪಿಸಿಕೊಂಡಾಗ, ನಮ್ಮ ಆಲೋಚನೆ ಹಾಗೂ ನೆನಪುಗಳಸರಮಾಲೆ ಮತ್ತು ಲೋಕದಲ್ಲಿರುವ ತನ್ನ ಸ್ನೇಹಿತರಿಗೆ ದೇವರು ತೋರಿಸಿದ ದಯೆಹಾಗೂ ಆತನ ಒಳ್ಳೆತನವು ಜ್ಞಾಪಕಕ್ಕೆ ಬರುತ್ತವೆ.KanCCh 374.3

    ಕರ್ತನ ಪವಿತ್ರ ಭೋಜನ ಸಂಸ್ಕಾರವನ್ನು ದೇವರಿಗೆ ಮಹಿಮೆ ತರುವಂತೆ ಸರಿಯಾದಕ್ರಮದಲ್ಲಿ ಆಚರಿಸಿದಾಗ, ದೇವರ ಮಕ್ಕಳು ಇತರರಿಗೆ ಸಹಾಯ ಮಾಡುವುದಕ್ಕೂಹಾಗೂ ಆಶೀರ್ವಾದಕರವಾಗಿರುವುದಕ್ಕೂ ಒಂದು ಪವಿತ್ರವಾದ ಸಂಬಂಧಕ್ಕೆ ಬರುತ್ತಾರೆ.ತಮ್ಮ ಜೀವನವನ್ನು ದೇವರ ಸೇವೆಯನ್ನು ನಿಸ್ವಾರ್ಥವಾಗಿ ಮಾಡಲು ಅರ್ಪಿಸುತ್ತೇವೆಂದುಅವರು ಒಡಂಬಡಿಕೆಮಾಡುತ್ತಾರೆ. ಅವರು ಮಾಡಬೇಕಾದ ಸೇವಾಕಾರ್ಯಕ್ಷೇತ್ರವು(Field) ಜಗತ್ತನ್ನೇಒಳಗೊಂಡಿರುತ್ತದೆ. ನಮ್ಮ ಸೇವೆಯ ಅಗತ್ಯವಿರುವವರುಲೋಕದಾದ್ಯಂತ ಇದ್ದಾರೆ. ಅಸಹಾಯಕರು, ತಿಳುವಳಿಕೆಯಿಲ್ಲದವರು ಮತ್ತು ಬಡವರುಎಲ್ಲೆಲ್ಲಿಯೂ ಕಂಡುಬರುತ್ತಾರೆ. ಕ್ರಿಸ್ತನ ಪವಿತ್ರ ಭೋಜನದಲ್ಲಿ ಭಾಗವಹಿಸುವವರುಆತನಂತೆಯೇ ಸುವಾರ್ತಾಸೇವೆ ಮಾಡಲು ಹೋಗುತ್ತಾರೆ.KanCCh 375.1

    ಸಮಸ್ತ ವಿಶ್ವದಿಂದಲೇ ಸೇವೆ ಮಾಡಿಸಿಕೊಳ್ಳುವ ಕ್ರಿಸ್ತನು, ಎಲ್ಲರ ಸೇವೆ ಮಾಡುವುದಕ್ಕೆಈ ಲೋಕಕ್ಕೆ ಬಂದನು. ಆತನು ಎಲ್ಲರ ಸೇವೆಮಾಡಿದ್ದರಿಂದ, ಎಲ್ಲರಿಂದಲೂ ಗೌರವದಿಂದಆರಾಧಿಸಲ್ಪಡುತ್ತಾನೆ. ಕ್ರಿಸ್ತನ ದೈವೀಕ ಗುಣಸ್ವಭಾವ ಹೊಂದಿರುವವರು ಮತ್ತು ಆತ್ಮಗಳವಿಮೋಚನೆಯ ಸಂತೋಷದಲ್ಲಿ ಆತನೊಂದಿಗೆ ಭಾಗಿಗಳಾಗುವವರು ಆತನ ನಿಸ್ವಾರ್ಥಸೇವೆಯ ಮಾದರಿಯನ್ನು ಅನುಸರಿಸಬೇಕು.KanCCh 375.2