Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅತಿರೇಕದ ವರ್ತನೆ ಹಾನಿಕರ

    ಆಡ್ವೆಂಟಿಸ್ಟರಲ್ಲಿ ಕೆಲವರು ಆರೋಗ್ಯ ಸುಧಾರಣಾ ವಿಷಯದಲ್ಲಿ ಅತಿರೇಕವಾಗಿವರ್ತಿಸುತ್ತಾರೆ. ಇದು ಹಾನಿಕರ. ಇವರು ಆರೋಗ್ಯದ ನಿಯಮಗಳನ್ನು ನಿಷ್ಠೆಯಿಂದಅನುಸರಿಸುತ್ತಾರೆ. ಆದರೆ ಶರೀರದ ಪೋಷಣೆಗೆ ಅಗತ್ಯವಾದ ಜೀವಸತ್ವವುಳ್ಳ ಆಹಾರತೆಗೆದುಕೊಳ್ಳುವುದರಲ್ಲಿ ಅಲಕ್ಷ್ಯ ಮಾಡುತ್ತಾರೆ. ಈ ರೀತಿಯಾಗಿ ಆರೋಗ್ಯ ಸುಧಾರಣೆಯಲ್ಲಿಅತಿರೇಕವಾಗಿ ವರ್ತಿಸುವವರು ರುಚಿಯಿಲ್ಲದ ಆಹಾರ ತಯಾರಿಸುವ ಸಾಧ್ಯತೆಯಿದ್ದು,ಅದು ಎಷ್ಟೊಂದು ಸಪ್ಪೆ ಹಾಗೂ ನಿಸ್ಸಾರವಾಗಿರುತ್ತದೆಂದರೆ, ಅದನ್ನು ತಿನ್ನುವುದರಿಂದತೃಪ್ತಿಯಾಗುವುದಿಲ್ಲ. ನೋಡಿದರೆ ಸಾಕು ಬಾಯಲ್ಲಿ ನೀರೂರಿಸುವ ಮತ್ತುKanCCh 294.1

    ಪೋಷಕಾಂಶಭರಿತವಾದ ರೀತಿಯಲ್ಲಿ ಆಹಾರ ತಯಾರಿಸಬೇಕು. ಶರೀರಕ್ಕೆ ಅಗತ್ಯವಾದವುಗಳಕೊರತೆ ಆಹಾರದಲ್ಲಿರಬಾರದು. ಉಪ್ಪು ಹಾನಿಕಾರಕ್ಕೆ ಬದಲಾಗಿ, ರಕ್ತಕ್ಕೆಅಗತ್ಯವಾಗಿರುವುದರಿಂದ ಅದನ್ನು ಉಪಯೋಗಿಸಬೇಕು. ತರಕಾರಿಗಳನ್ನು ಸಿದ್ಧಪಡಿಸುವಾಗಅದಕ್ಕೆ ಸ್ವಲ್ಪ ಹಾಲು ಅಥವಾ ಕೆನೆ ಹಾಕಿದಲ್ಲಿ ಹೆಚ್ಚು ರುಚಿ ನೀಡುತ್ತದೆ.KanCCh 294.2

    ಚಿಕ್ಕಮಕ್ಕಳು ಬೆಣ್ಣೆ ಮತ್ತು ಮೊಟ್ಟೆಗಳನ್ನು ಹೆಚ್ಚಾಗಿ ತಿನ್ನುವುದು ರೋಗಕ್ಕೆಕಾರಣವಾಗಬಹುದು. ಆದರೆ ಆರೋಗ್ಯಕರವಾದ ಕೋಳಿಗಳ ಮೊಟ್ಟೆಯನ್ನು ತಿನ್ನುವುದುಆರೋಗ್ಯ ತತ್ವಗಳನ್ನು ಮೀರಿದಂತಾಗುವುದಿಲ್ಲ. ಕೆಲವು ರೀತಿಯ ವಿಷಗಳನ್ನುಪ್ರತಿರೋಧಿಸುವಂತ ಪರಿಹಾರಕ ಅಂಶಗಳು ಮೊಟ್ಟೆಯಲ್ಲಿವೆ.KanCCh 294.3

    ಕೆಲವರು ಹಾಲು, ಮೊಟ್ಟೆ ಮತ್ತು ಬೆಣ್ಣೆಗಳನ್ನು ತೆಗೆದುಕೊಳ್ಳುವುದಿಲ್ಲ. ಆದರೆಅವುಗಳಿಗೆ ಬದಲಾಗಿ ಸರಿಯಾದ ಪೋಷಣೆ ನೀಡುವ ಇತರ ಪದಾರ್ಥಗಳನ್ನುತೆಗೆದುಕೊಳ್ಳುವುದಿಲ್ಲ. ಆದುದರಿಂದ ಅವರು ದುರ್ಬಲರಾಗುತ್ತಾರೆ ಹಾಗೂ ಕೆಲಸಮಾಡಲಾಗದು. ಆರೋಗ್ಯ ಸುಧಾರಣಾ ತತ್ವಗಳೇ ತಮ್ಮ ಬಲಹೀನತೆಗೆ ಕಾರಣವೆಂದುಅವುಗಳ ಮೇಲೆ ದೋಷಾರೋಪಣೆ ಮಾಡುತ್ತಾರೆ. ಅಡ್ರೆಂಟಿಸ್ಟರು ದೃಢನಿಷ್ಠೆಯಿಂದಕಾರ್ಯಮಾಡುವ ಪ್ರಯತ್ನಗಳಿಗೆ, ದೇವರು ತಿಳಿಸದಿರುವಂತ ಇಂತಹ ವಿಷಯಗಳಿಂದಅಡೆತಡೆ ಉಂಟಾಗುತ್ತದೆ. ಅಲ್ಲದೆ ಸಭೆಯು ಉತ್ಸಾಹ ಕಳೆದುಕೊಳ್ಳುತ್ತದೆ. ಆದರೆಅತ್ಯಂತ ಉತ್ಸಾಹಭರಿತವಾದ ಇಂತಹ ಕಾರ್ಯಗಳ ಪರಿಣಾಮಗಳನ್ನು ತಡೆಯಲುದೇವರು ಬಿಡುವುದಿಲ್ಲ. ಸುವಾರ್ತೆಯು ಪಾಪಿಗಳಾದ ಮನುಷ್ಯರನ್ನು ಬಡವಬಲ್ಲಿದರೆನ್ನದೆಒಟ್ಟಾಗಿ ಕ್ರಿಸ್ತನ ಬಳಿಗೆ ಸಾಮರಸ್ಯದಿಂದ ತರಬೇಕು.KanCCh 294.4

    ಈಗ ನಾವು ತೆಗೆದುಕೊಳ್ಳುವ ಮೊಟ್ಟೆ, ಹಾಲು, ಹಾಲಿನ ಕೆನೆ ಮುಂತಾದವುಗಳನ್ನುಬಿಡಬೇಕಾದ ಸಮಯ ಬರುವುದು. ಇದರ ಬಗ್ಗೆ ಗೊಂದಲಕ್ಕೊಳಗಾಗಿ ಈಗಲೇ ಅತಿರೇಕವಾಗಿ ವರ್ತಿಸಿ ಅವುಗಳನ್ನು ತ್ಯಜಿಸುವ ಅಗತ್ಯವಿಲ್ಲ. ಸಂದರ್ಭ ಒದಗುವ ತನಕಕಾದುಕೊಂಡಿರಿ ಮತ್ತು ದೇವರು ಮಾರ್ಗ ತೋರಿಸುವನು.KanCCh 294.5

    ಆರೋಗ್ಯ ಸುಧಾರಣಾ ಸಿದ್ಧಾಂತಗಳನ್ನು ತಿಳಿಸುವುದರಲ್ಲಿ ಯಶಸ್ವಿಯಾಗುವವರುದೇವರ ವಾಕ್ಯವನ್ನು ತಮ್ಮ ಆಪ್ತಮಿತ್ರನೂ ಹಾಗೂ ಮಾರ್ಗದರ್ಶಕನನ್ನಾಗಿಯೂಎಣಿಸಬೇಕು. ನಾವು ತ್ಯಜಿಸಿರುವ ಹಾನಿಕರವಾದ ಆಹಾರಕ್ಕೆ ಬದಲಾಗಿ ಆರೋಗ್ಯಕರವೂ,ಪರಿಪೂರ್ಣವೂ, ರುಚಿಕರವೂ ಆದ ಆಹಾರ ಸೇವಿಸದೆ, ನಮ್ಮ ಬಲಹೀನತೆಗೆ ಆಹಾರಸುಧಾರಣಾ ಸಿದ್ಧಾಂತಗಳೇ ಕಾರಣವೆಂದು ಅವುಗಳ ಮೇಲೆ ತಪ್ಪು ಹೊರಿಸಬಾರದು.ಅದೇ ಸಮಯದಲ್ಲಿ ಕ್ಷಣಿಕವಾಗಿ ಶರೀರವನ್ನು ಹುರುಪುಗೊಳಿಸುವಂತ ಮಸಾಲೆಭರಿತಆಹಾರ ಸೇವನೆಯನ್ನು ಸಾಧ್ಯವಾದಷ್ಟು ತಡೆಗಟ್ಟಬೇಕು. ಸರಳವಾದ, ಆದರೆ ರುಚಿಕರವೂ,ಆರೋಗ್ಯಪೂರ್ಣವೂ ಆದ ಆಹಾರಗಳನ್ನು ಮಾತ್ರ ಸೇವಿಸಿ ಹಾಗೂ ಆರೋಗ್ಯ ಸುಧಾರಣಾಸಿದ್ಧಾಂತಗಳನ್ನು ಕೊಟ್ಟಂತ ದೇವರಿಗೆ ನಿರಂತರವಾಗಿ ಕೃತಜ್ಞತೆ ಸಲ್ಲಿಸಿ, ಎಲ್ಲಾವಿಷಯಗಳಲ್ಲಿಯೂ ಪ್ರಾಮಾಣಿಕರಾಗಿದ್ದಲ್ಲಿ, ನಮಗೆ ಅಮೂಲ್ಯವಾದ ಜಯದೊರೆಯುವುದು.KanCCh 295.1