Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಸಹಕಾರ

    ಹೊಸ ಸ್ಥಳಗಳಲ್ಲಿ ನಮ್ಮ ಶಾಲಾಕಾಲೇಜುಗಳು, ಆಸ್ಪತ್ರೆ, ಅನಾಥಾಲಯ ಹಾಗೂ ಇತರ ಸಂಸ್ಥೆಗಳನ್ನು ಸ್ಥಾಪಿಸುವಾಗ ಅನೇಕ ಸಂದರ್ಭಗಳಲ್ಲಿ ಕೆಲಸ ಅಷ್ಟಾಗಿ ಗೊತ್ತಿಲ್ಲದ ಅನನುಭವಿ ವ್ಯಕ್ತಿಗಳನ್ನು ಜವಾಬ್ದಾರಿಯುತ ಸ್ಥಾನಗಳಿಗೆ ನೇಮಿಸುವ ಸಂದರ್ಭ ಬರಬಹುದು. ಇಂತಹವರಿಗೆ ಆರಂಭದಲ್ಲಿ ತಮ್ಮ ಕೆಲಸವು ಕಷ್ಟಕರವಾಗಿ ಕಾಣುತ್ತದೆ. ಕರ್ತನ ಈ ಸಂಸ್ಥೆಗಳಲ್ಲಿ ಅವರು ಮತ್ತು ಅವರ ಸಹೋದ್ಯೋಗಿಗಳು ನಿಸ್ವಾರ್ಥವಾದ ಆಸಕ್ತಿಯಿಂದ ಕೆಲಸ ಮಾಡಬೇಕು. ಇಲ್ಲದಿದ್ದಲ್ಲಿ ಆ ಸಂಸ್ಥೆಗಳ ಅಭಿವೃದ್ಧಿಗೆ ಅಡ್ಡಿಯಾಗುತ್ತದೆ.KanCCh 21.3

    ಕೆಲವರು ತಾವು ಮಾಡುತ್ತಿರುವ ಕೆಲಸವು ತಮಗೆ ಮಾತ್ರ ಸಂಬಂಧ ಪಟ್ಟಿರುವುದರಿಂದ, ಬೇರೆ ಯಾರೂ ಸಹ ಅದರಲ್ಲಿ ತಲೆ ಹಾಕುವುದಾಗಲಿ ಅಥವಾ ಸಲಹೆಗಳನ್ನಾಗಲಿ ಕೊಡಬಾರದೆಂದು ಭಾವಿಸುತ್ತಾರೆ. ಇಂತವರು ಒಂದು ಕೆಲಸ ನಿರ್ವಹಿಸಲು ಬೇಕಾದ ಅತ್ಯುತ್ತಮ ವಿಧಾನಗಳ ಬಗ್ಗೆ ಅಜ್ಞಾನಿಗಳಾಗಿರುತ್ತಾರೆ. ಆದುದರಿಂದ ಇತರ ಯಾರಾದರೂ ಅವರಿಗೆ ಏನಾದರೂ ಸಲಹೆ ನೀಡಿದಲ್ಲಿ, ಅವರು ತಮ್ಮದೇ ಸ್ವತಂತ್ರ ಅಭಿಪ್ರಾಯವನ್ನು ಹಠದಿಂದ ಅನುಸರಿಸುವುದಕ್ಕೆ ನಿರ್ಧರಿಸುತ್ತಾರೆ. ಅಲ್ಲದೆ ಕೆಲವರು ತಮ್ಮ ಜೊತೆ ಕೆಲಸಗಾರರಿಗೆ ಯಾವುದೇ ಸಹಾಯ ಮಾಡಲು ಅಥವಾ ಸಲಹೆ ನೀಡಲು ಇಚ್ಛಿಸುವುದಿಲ್ಲ. ಅನನುಭವಿಗಳು ಇತರರ ಸಲಹೆ ಪಡೆದುಕೊಂಡರೆ, ಎಲ್ಲಿ ತಮ್ಮ ಅಜ್ಞಾನವು ಇತರರಿಗೆ ತಿಳಿದು ಬರುವುದೆಂಬ ಕಾರಣದಿಂದ, ಸಲಹೆ ಪಡೆಯುವುದಿಲ್ಲ. ಅವರು ತಮ್ಮ ಅಹಂಕಾರದಿಂದ ಅನುಭವಿಗಳಾದ ಜೊತೆ ಕೆಲಸಗಾರರ ಸಲಹೆ ಪಡೆಯಲು ನಿರಾಕರಿಸುವುದರಿಂದ ತಪ್ಪುಮಾಡುತ್ತಾರೆ. ಇದರಿಂದ ಸಮಯ ಮತ್ತು ಹಣ- ಎರಡೂ ನಷ್ಟವಾಗುತ್ತದೆ.KanCCh 21.4

    ಸಮಸ್ಯೆಗೆ ಕಾರಣವೇನೆಂದು ನಿರ್ಧರಿಸುವುದು ಅಷ್ಟೇನೂ ಕಷ್ಟವಲ್ಲ. ಇಂತಹ ವಿಷಯಗಳು ಪವಿತ್ರಾತ್ಮನನ್ನು ದುಃಖಪಡಿಸುತ್ತವೆ. ಒಬ್ಬರು ಮತ್ತೊಬ್ಬರಿಂದ ಕಲಿತುಕೊಳ್ಳಬೇಕೆಂದು ದೇವರು ಬಯಸುತ್ತಾನೆ. ಪರಿಶುದ್ಧತೆ ಇಲ್ಲದಿದ್ದಲ್ಲಿ, ದೇವರು ನಮ್ಮೊಂದಿಗೆ ಕೆಲಸ ಮಾಡಲಾರನು. ಅಂತಹ ಪರಿಸ್ಥಿತಿಯಲ್ಲಿ ಸೈತಾನನು ಬಹಳ ಸಂತೋಷಪಡುತ್ತಾನೆ. ಒಬ್ಬನು ಕರ್ತನ ಸಂಸ್ಥೆಯ ಅಭಿವೃದ್ಧಿಗಾಗಿ ಶ್ರಮ ಪಡುತ್ತಿರುವೆನೋ ಅಥವಾ ತನ್ನ ಸ್ವಾರ್ಥಕ್ಕಾಗಿ ದುಡಿಯುತ್ತಿದ್ದೆನೆಯೋ ಎಂದು ತನ್ನನ್ನು ತಾನೇ ಪರೀಕ್ಷಿಸಿಕೊಳ್ಳಬೇಕು. ಹೆಚ್ಚು ಕಡಿಮೆ ಗುಣಪಡಿಸಲಾಗದ ಮತ್ತು ಹತಾಶೆಯ ಪಾಪವೆಂದರೆ ತನ್ನದೇ ಅಭಿಪ್ರಾಯದ ಬಗ್ಗೆ ದುರಭಿಮಾನ ಹಾಗೂ ದುರಹಂಕಾರ ಹೊಂದಿರುವುದು. ಇದು ಆತ್ಮೀಕ ಹಾಗೂ ಇತರೆಲ್ಲಾ ಬೆಳವಣಿಗೆಗೆ ಅಡ್ಡಿಯಾಗಿದೆ. ಒಬ್ಬನ ಗುಣನಡತೆಯು ದೋಷವುಳ್ಳದ್ದಾಗಿದ್ದರೂ, ಅವನು ಅದನ್ನು ಅರಿತುಕೊಳ್ಳದಿದ್ದಲ್ಲಿ, ತನ್ನ ತಪ್ಪುಗಳನ್ನು ಕಾಣಲಾರದಷ್ಟು ದುರಭಿಮಾನವುಳ್ಳವನಾಗಿದ್ದಲ್ಲಿ, ಅಂತವನು ಹೇಗೆ ಶುದ್ಧನಾಗಲು ಸಾಧ್ಯ? “ಕ್ಷೇಮದಿಂದಿರುವವನಿಗೆ ವೈದ್ಯನು ಬೇಕಾಗಿಲ್ಲ; ಕ್ಷೇಮವಿಲ್ಲದವರಿಗೆ (ವೈದ್ಯನು) ಬೇಕು” ಎಂದು ಕ್ರಿಸ್ತನು ಹೇಳುತ್ತಾನೆ (ಮತ್ತಾಯ 9:12). ತನ್ನ ಮಾರ್ಗಗಳು ಪರಿಪೂರ್ಣವಾಗಿವೆ ಎಂದು ಒಬ್ಬನು ಭಾವಿಸಿದಲ್ಲಿ, ಅವನು ಆತ್ಮೀಕವಾಗಿ ಹೇಗೆ ಬೆಳವಣಿಗೆ ಹೊಂದಲು ಸಾಧ್ಯ?KanCCh 22.1

    ಮನಃಪೂರ್ವಕವಾಗಿ ದೇವರಿಗೆ ತನ್ನನ್ನು ಒಪ್ಪಿಸಿಕೊಟ್ಟ ಕ್ರೈಸ್ತನು ಮಾತ್ರ ಉತ್ತಮ ಗುಣನಡತೆಯುಳ್ಳ ಯಥಾರ್ಥವಾದ ಸಭ್ಯ ವ್ಯಕ್ತಿಯಾಗಿರಲು ಸಾಧ್ಯ. KanCCh 22.2

    *****