Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಗಂಡಂದಿರು ಜಾಗರೂಕರಾಗಿರಬೇಕು

    ಗಂಡಂದಿರು ತಮ್ಮ ಹೆಂಡತಿಯರು ವಿಷಯದಲ್ಲಿ ಜಾಗರೂಕರಾಗಿಯೂ, ನಿಷ್ಠೆಯುಳ್ಳರೂ, ಸೌಜನ್ಯವುಳ್ಳವರೂ ಹಾಗೂ ಅನುಕಂಪವುಳ್ಳವರೂ ಆಗಿರಬೇಕು. ಅವರಿಗೆ ಕರುಣೆ ಹಾಗೂ ಪ್ರೀತಿ ತೋರಿಸಬೇಕು, ಗಂಡಂದಿರು ಕ್ರಿಸ್ತನ ವಾಕ್ಯಕ್ಕೆ ವಿಧೇಯರಾಗಿದ್ದಲ್ಲಿ, ಅವರ ಪ್ರೀತಿಯ ತಮ್ಮ ಸ್ವಂತ ಶರೀರ ಮಾತ್ರವಲ್ಲ, ತಮ್ಮ ಹೆಂಡತಿಯರನ್ನು ದುರ್ಬಲಗೊಳಿಸಿ ರೋಗತರುವಂತ ನೀಚವಾದ ಕಾಮಾತುರತೆಯನ್ನು ಬಲವಂತವಾಗಿ ತೃಪ್ತಿಪಡಿಸಿಕೊಳ್ಳುವಂತದ್ದಾಗಿರುವುದಿಲ್ಲ. ಹೆಂಡತಿಯರು ಎಲ್ಲಾ ವಿಷಯಗಳಲ್ಲಿಯೂ ತಮ್ಮ ಗಂಡಂದಿರಿಗೆ ವಿಧೇಯರಾಗಿರಬೇಕೆಂಬ ವಾಕ್ಯವನ್ನು ಇದರಿಂದ ದುರುಪಯೋಗ ಪಡಿಸಿಕೊಂಡಂತಾಗುವುದು. ಯಥಾರ್ಥವಾದ ದೈವಭಕ್ತಿಯುಳ್ಳ ಕ್ರೈಸ್ತರಲ್ಲಿ ಇರಬೇಕಾದ ಶ್ರೇಷ್ಠವೂ, ಉದಾತ್ತವೂ ಆದ ಸ್ವಭಾವ, ಹೃದಯ ಪರಿಶುದ್ಧತೆ ಮತ್ತು ಉನ್ನತವಾಗಿ ಚಿಂತಿಸುವ ಮನಸ್ಸಿರುವ ಗಂಡನು, ತನ್ನ ಈ ಎಲ್ಲಾ ಗುಣಸ್ವಭಾವಗಳನ್ನು ತನ್ನ ಪತ್ನಿಗೆ ತೋರಿಸುವನು. ಕ್ರಿಸ್ತನಲ್ಲಿದ್ದಂತ ಮನಸ್ಸು ಅವನಿಗಿದ್ದಲ್ಲಿ, ಅವನು ಶರೀರವನ್ನು ನಾಶಮಾಡುವವನಾಗಿರುವುದಿಲ್ಲ, ಬದಲಾಗಿ ಯಥಾರ್ಥ ಪ್ರೀತಿಯುಳ್ಳವನಾಗಿದ್ದು, ಕ್ರಿಸ್ತನಲ್ಲಿ ಉನ್ನತ ಮಾನದಂಡ ಮುಟ್ಟಲು ಪ್ರಯತ್ನಿಸುವನು.KanCCh 151.1

    ಹೆಂಡತಿಯು ತನ್ನ ಗಂಡನಿಗೆ ತಾಳ್ಮೆಯಿಂದ ಗುಲಾಮಳಂತೆ ಒಪ್ಪಿಸಿಕೊಂಡು ಅವನ ನೀಚವಾದ ಬಯಕೆಗಳನ್ನು ಪೂರೈಸುತ್ತಿದ್ದಲ್ಲಿ ಅಂತಹ ಗಂಡನು ಆಕೆಯನ್ನು ನಿಜವಾಗಿ ಪ್ರೀತಿಸುವುದಿಲ್ಲ. ನಿಷ್ಕ್ರಿಯಳಾಗಿ ತನ್ನನ್ನು ಗಂಡನಿಗೆ ಒಪ್ಪಿಕೊಂಡ ಪತ್ನಿಯು ಅವನ ದೃಷ್ಟಿಯಲ್ಲಿ ತನ್ನ ಮೌಲ್ಯವನ್ನು ಕಳೆದುಕೊಳ್ಳುವಳು. ತನ್ನ ಹೆಂಡತಿಯು ಯಾವುದೇ ಪ್ರತಿರೋಧವಿಲ್ಲದೆ ನಮ್ರತೆಯಿಂದ ವಿಧೇಯಳಾಗಿ ತುಚ್ಛವಾದ ಕಾಮಾಭಿಲಾಷೆಗೆ ಸಹಕರಿಸಿದ್ದರಿಂದ, ಬೇರೆ ಪುರುಷನಿಗೂ ಸಹ ಅವಳು ಇದೇ ರೀತಿಯಲ್ಲಿ ತನ್ನನ್ನು ಒಪ್ಪಿಸಿಕೊಡಬಹುದೆಂಬ ಸಂಶಯ ಗಂಡನಲ್ಲಿ ಬರುತ್ತದೆ. ಇದರಿಂದ ಗಂಡನು ತನ್ನ ಹೆಂಡತಿಯ ಪರಿಶುದ್ಧತೆ ಹಾಗೂ ನಿಷ್ಠೆಯನ್ನು ಸಂದೇಹಿಸಿ ತನ್ನ ಮೃಗೀಯ ವರ್ತನೆಯನ್ನು ಇನ್ನೂ ಹೆಚ್ಚಾಗಿ ಅವಳಲ್ಲಿ ತೋರಿಸುವನು ಮತ್ತು ದೇವರಾಜ್ಞೆಗಳನ್ನು ನಿರ್ಲಕ್ಷಿಸುವನು. ಇಂತಹ ಪುರುಷರು ಪ್ರಾಣಿಗಿಂತಲೂ ಕ್ರೂರರೂ, ನಿರ್ದಯಿಗಳೂ ಆಗಿರುವರು. ಅವರು ಮನುಷ್ಯರೂಪದಲ್ಲಿರುವ ದೆವ್ವಗಳು, ಅವರಿಗೆ ಶ್ರೇಷ್ಠವಾದ, ಉನ್ನತಮಟ್ಟದ ಯಥಾರ್ಥವಾದ ಹಾಗೂ ಪರಿಶುದ್ಧವಾದ ಪ್ರೀತಿ ಏನೆಂದು ತಿಳಿದಿರುವುದಿಲ್ಲ.KanCCh 151.2

    ಹೆಂಡತಿಯೂ ಸಹ ಇಂತಹ ಗಂಡನ ವಿಷಯದಲ್ಲಿ ಹೊಟ್ಟೆಕಿಚ್ಚು ಪಟ್ಟು, ಅವಕಾಶ ಸಿಕ್ಕಿದಲ್ಲಿ ತನ್ನ ಗಂಡನು ಬೇರೊಬ್ಬಳ ಸಹವಾಸ ಮಾಡುತ್ತಾನೆಂಬ ಸಂದೇಹ ಹೊಂದಿರುತ್ತಾಳೆ. ಅವನು ತನ್ನ ಆತ್ಮಸಾಕ್ಷಿಯಿಂದ ಆಗಲಿ ಅಥವಾ ದೇವರ ಭಯದಿಂದಾಗಲಿ ನಿಯಂತ್ರಿಸಲ್ಪಟ್ಟಿಲ್ಲವೆಂದು ಅವಳಿಗೆ ತಿಳಿಯುವುದು. ಮದುವೆಯ ಪರಿಶುದ್ಧವಾದ ಸಂಬಂಧದ ಎಲ್ಲಾ ಅಡೆತಡೆಗಳು ನೀಚವಾದ ಕಾಮಾತುರತೆಯಿಂದ ಬಿದ್ದುಹೋಗುವವು.KanCCh 151.3