Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಆಹಾರ ಕ್ರಮದ ಬದಲಾವಣೆಗೆ ಸಲಹೆಗಳು

    ಮಾಂಸಖಂಡಗಳು ಬಲಿಷ್ಠವಾಗುವುದಕ್ಕೆ ಮಾಂಸಾಹಾರ ತೆಗೆದುಕೊಳ್ಳಲೇ ಬೇಕೆಂಬುದುಒಂದು ತಪ್ಪಾದ ಭಾವನೆಯಾಗಿದೆ. ಶರೀರಕ್ಕೆ ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನುಮಾಂಸಾಹಾರವಿಲ್ಲದೆ, ಸಸ್ಯಾಹಾರದಿಂದ ಚೈತನ್ಯಪೂರ್ಣವಾದ ಆರೋಗ್ಯವನ್ನುಪಡೆದುಕೊಳ್ಳಬಹುದು. ದವಸಧಾನ್ಯಗಳು, ಹಣ್ಣುಹಂಪಲುಗಳು, ಕಾಳು, ತರಕಾರಿಗಳಲ್ಲಿಉತ್ತಮ ಆರೋಗ್ಯಕ್ಕೆ ಅಗತ್ಯವಾದ ಎಲ್ಲಾ ಪೋಷಕಾಂಶಗಳೂ ಇವೆ. ಮಾಂಸಾಹಾರದಿಂದಈ ಪೋಷಕಾಂಶಗಳು ನಮ್ಮ ದೇಹಕ್ಕೆ ಸಂಪೂರ್ಣವಾಗಿ ದೊರೆಯುವುದಿಲ್ಲ.ಉತ್ತಮ ಆರೋಗ್ಯ ಹಾಗೂ ಬಲಕ್ಕೆ ಮಾಂಸಾಹಾರವು ಅಗತ್ಯವಾಗಿದ್ದಲ್ಲಿ, ದೇವರುಆದಾಮಹವ್ವಳಿಗೆ ಏದೆನ್ ತೋಟದಲ್ಲಿಯೇ ಅದನ್ನು ಕೊಟ್ಟಿರುತ್ತಿದ್ದನು.KanCCh 286.3

    ಮಾಂಸಾಹಾರ ಸೇವನೆ ನಿಲ್ಲಿಸಿದಾಗ, ಒಂದು ರೀತಿಯ ಬಲಹೀನತೆ ಮತ್ತು ಚೈತನ್ಯಕಳೆದುಕೊಂಡ ಭಾವನೆ ಅವರಲ್ಲಿ ಆಗಾಗ್ಗೆ ಕಂಡು ಬರುವುದು. ಮಾಂಸಾಹಾರವುಅಗತ್ಯವೆಂಬುದಕ್ಕೆ ಇದು ಸಾಕ್ಷಿಯೆಂದು ಅನೇಕರು ಇದರಿಂದ ತಿಳಿದುಕೊಳ್ಳುತ್ತಾರೆ.ಆದರೆ ವಾಸ್ತವ ಸಂಗತಿಯು ಬೇರೆಯಾಗಿದೆ. ಮಾಂಸಾಹಾರವು ಮನಸ್ಸನ್ನುಪ್ರಚೋದಿಸುವುದರಿಂದಲೂ ಹಾಗೂ ರಕ್ತವು ಮಲಿನಗೊಂಡು ನರಗಳುಉದ್ವೇಗಗೊಳ್ಳುವುದರಿಂದ ಮಾಂಸಾಹಾರ ನಿಲ್ಲಿಸಿದಾಗ, ಆ ರೀತಿಯ ಬಲಹೀನತೆಯ ಭಾವನೆ ಅವರಲ್ಲಿ ಉಂಟಾಗುತ್ತದೆ. ಇದರಿಂದಾಗಿ ಕುಡುಕರು ಮದ್ಯಪಾನ ಬಿಡುವುದುಎಷ್ಟು ಕಷ್ಟಕರವೆಂದು ತಿಳಿಯುತ್ತಾರೋ, ಅದರಂತೆಯೇ ಮಾಂಸಾಹಾರಿಗಳು ಅದರಸೇವನೆ ಬಿಡುವುದು ಕಷ್ಟವೆಂದು ತಿಳಿಯುತ್ತಾರೆ. ಆದರೆ ಅದನ್ನು ಬಿಟ್ಟಷ್ಟು ಆರೋಗ್ಯಕ್ಕೆಒಳ್ಳೆಯದು.KanCCh 286.4

    ಮಾಂಸಾಹಾರ ಬಿಟ್ಟಾಗ, ಅದಕ್ಕೆ ಬದಲಾಗಿ ರುಚಿಕರವಾಗಿಯೂ ಹಾಗೂಪೌಷ್ಟಿಕಾಂಶವಾಗಿಯೂ ಇರುವ ಹಣ್ಣುಹಂಪಲು, ತರಕಾರಿ, ಸೊಪ್ಪುಗಳು, ಕಾಳುಗಳನ್ನುಹೆಚ್ಚಾಗಿ ತೆಗೆದುಕೊಳ್ಳಬೇಕು. ಅದರಲ್ಲಿಯೂ ಬಲಹೀನರಾಗಿಯೂ ಮತ್ತು ಹೆಚ್ಚುದೈಹಿಕಶ್ರಮದಲ್ಲಿ ತೊಡಗಿರುವವರಲ್ಲಿ ಇದು ಅಗತ್ಯವಾಗಿದೆ. ಮಾಂಸಾಹಾರದ ಬಯಕೆಯುತಿರುಗಿ ಬಾರದಂತೆ ಸಸ್ಯಾಹಾರವನ್ನು ರುಚಿಕರವಾಗಿ ತಯಾರಿಸಬೇಕು.KanCCh 287.1

    ಉಳಿದ ಸಭೆಯಾದ ಸೆವೆಂತ್ ಡೇ ಅಡ್ವೆಂಟಿಸ್ಟರು ಮಾಂಸಾಹಾರ, ಕಾಫಿ, ಚಹಾಹಾಗೂ ಇತರ ಹಾನಿಕರ ಪದಾರ್ಥಗಳನ್ನು ತ್ಯಜಿಸಬೇಕೆಂದು ದೇವರು ಸೂಚಿಸುತ್ತಾನೆ.ಅವರ ಒಳ್ಳೆಯದಕ್ಕೆ ಇದನ್ನು ದೇವರು ಹೇಳುತ್ತಾನೆ. ಶರೀರಕ್ಕೆ ಒಳ್ಳೆಯದಾಗಿಯೂ,ಉತ್ತಮ ಆರೋಗ್ಯಕ್ಕೆ ಪೂರಕವಾಗಿಯೂ ಇರುವ ಸಸ್ಯಾಹಾರ ಪದಾರ್ಥಗಳು ಹೇರಳವಾಗಿದೊರೆಯುತ್ತವೆ.KanCCh 287.2

    ಕರ್ತನ ಎರಡನೇ ಬರೋಣಕ್ಕಾಗಿ ಕಾದುಕೊಂಡಿರುವವರು ಮಾಂಸಾಹಾರ ಸೇವನೆನಿಲ್ಲಿಸುತ್ತಾರೆ. ಇದನ್ನು ನಾವು ಯಾವಾಗಲೂ ಮನಸ್ಸಿನಲ್ಲಿಡಬೇಕು. ಹೆಚ್ಚಾಗಿ ಮಾಂಸಾಹಾರಸೇವಿಸುವುದರಿಂದ ಬೌದ್ಧಿಕ, ನೈತಿಕ ಮತ್ತು ಶಾರೀರಿಕ ಶಕ್ತಿ ಕುಂಠಿತಗೊಳ್ಳುತ್ತದೆ.ಇದು ಶರೀರದ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸುವುದಲ್ಲದೆ, ಬೌದ್ಧಿಕ ಸಾಮರ್ಥ್ಯವನ್ನುಕುಂದಿಸುತ್ತದೆ. ಅಲ್ಲದೆ ನೈತಿಕ ಸಂವೇದನಾ ಶಕ್ತಿ ಸಾಮರ್ಥ್ಯವನ್ನು ಕಡಿಮೆಗೊಳಿಸುತ್ತದೆ.ಆದುದರಿಂದ ಪ್ರಿಯ ಸಹೋದರ, ಸಹೋದರಿಯರೇ, ಮಾಂಸಾಹಾರ ತ್ಯಜಿಸಿ ಸಸ್ಯಾಹಾರಸೇವಿಸುವುದೇ ಆರೋಗ್ಯಕ್ಕೆ ಅತ್ಯಂತ ಸುರಕ್ಷಿತ ಮಾರ್ಗವಾಗಿದೆ.KanCCh 287.3

    *****