Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
 • Results
 • Related
 • Featured
No results found for: "".
 • Weighted Relevancy
 • Content Sequence
 • Relevancy
 • Earliest First
 • Latest First

  ತಡ ಮಾಡಿದರೆ ಅಪಾಯ

  ಆ ರಾತ್ರಿಯಲ್ಲಿ ಶ್ರೀಮತಿವೈಟಮ್ಮನವರ ಕಣ್ಣಿಗೆ ಒಂದು ಅತ್ಯಂತ ಪರಿಣಾಮಕಾರಿ ದೃಶ್ಯ ದೇವದರ್ಶನದಲ್ಲಿ ಕಂಡುಬಂದಿತು. ಅದರಲ್ಲಿ ಅತಿ ದೊಡ್ಡ ಗಾತ್ರದ ಒಂದು ಬೆಂಕಿಯ ಚೆಂಡು ಸುಂದರವಾದ ಭವನಗಳು ಹಾಗೂ ಮಾಲ್‍ಗಳ ಮೇಲೆ ಬಿದ್ದು ಅವು ತಕ್ಷಣದಲ್ಲಿ ನಾಶವಾದವು. ಆಗ “ಯಾರೋ ಒಬ್ಬರು” ಲೋಕದ ಮೇಲೆ ದೇವರ ತೀರ್ಪಿನ ದಂಡನೆ ಬರುತ್ತದೆಂದು ನಮಗೆ ತಿಳಿದಿತ್ತು; ಆದರೆ ಅದು ಇಷ್ಟೊಂದು ಬೇಗನೆ ಬರುತ್ತದೆಂದು ನಮಗೆ ತಿಳಿದಿರಲಿಲ್ಲ” ಎಂದು ಹೇಳುವುದು ಶ್ರೀಮತಿ ವೈಟಮ್ಮನವರಿಗೆ ಕೇಳಿಸಿತು. ಅಲ್ಲದೆ ಬೇರೆ ಕೆಲವರು ವೇದನೆಯಿಂದ “ಈ ಸಂಗತಿ ನಿಮಗೆ ತಿಳಿದಿದ್ದರೂ, ಯಾಕೆ ನಮಗೆ ಹೇಳಲಿಲ್ಲ? ಇದು ನಮಗೆ ಗೊತ್ತಿರಲಿಲ್ಲ” ಎಂದು ಅವರನ್ನು ಪ್ರಶ್ನಿಸಿದರು. ಎಲ್ಲಾ ಕಡೆಯಲ್ಲಿಯೂ ಜನರು ಪರಸ್ಪರ ದೋಷಾರೋಪಣೆ ಮಾಡುತ್ತಿದ್ದರು.KanCCh 45.1

  ದರ್ಶನದಲ್ಲಿ ಈ ದೃಶ್ಯವನ್ನು ಕಂಡ ಶ್ರೀಮತಿ ವೈಟಮ್ಮನವರಿಗೆ ಇದರಿಂದ ತೀವ್ರವಾದ ಸಂತಾಪ ಹಾಗೂ ವೇದನೆಯಾಯಿತು. ಅವರು ತಿರುಗಿ ನಿದ್ರಿಸಿದಾಗ, ಜನರ ಒಂದು ದೊಡ್ಡ ಗುಂಪಿನಲ್ಲಿರುವಂತೆ ಭಾಸವಾಯಿತು. ಅಧಿಕಾರವುಳ್ಳ ಒಬ್ಬ ವ್ಯಕ್ತಿ ಅವರನ್ನುದ್ದೇಶಿಸಿ ಮಾತಾಡುತ್ತಿದ್ದರು. ಅವರ ಮುಂದೆ ಜಗತ್ತಿನ ಒಂದು ನಕಾಶೆಯಿತ್ತು. ಈ ನಕಾಶೆಯು ದೇವರ ದ್ರಾಕ್ಷೇತೋಟವಾಗಿದೆ. ಇದನ್ನು ನಾವು ವ್ಯವಸಾಯ ಮಾಡಬೇಕೆಂದು ಹೇಳಿದರು. ಪರಲೋಕದಿಂದ ಒಂದು ಬೆಳಕು ಎಲ್ಲರ ಮೇಲೆ ಪ್ರಕಾಶಿಸುತ್ತಿತ್ತು ಹಾಗೂ ಅವರಲ್ಲಿ ಪ್ರತಿಯೊಬ್ಬನೂ ತನ್ನ ಬೆಳಕನ್ನು ಇತರರಿಗೆ ಪ್ರತಿಫಲಿಸಬೇಕಾಗಿತ್ತು. ಕೆಲವು ಸ್ಥಳಗಳಲ್ಲಿ ದೀಪ ಹಚ್ಚಬೇಕಾಗಿತ್ತು ಹಾಗೂ ಈ ದೀಪಗಳಿಂದ ಇತರ ದೀಪಗಳೂ ಸಹ ಹಚ್ಚಲ್ಪಡಬೇಕಾಗಿತ್ತು. “ನೀವು ಭೂಮಿಗೆ ಉಪ್ಪಾಗಿದ್ದೀರಿ, ಉಪ್ಪು ಸಪ್ಪಗಾದರೆ ಅದಕ್ಕೆ ಇನ್ನ್ಯಾತರರಿಂದ ಉಪ್ಪಿನ ರುಚಿ ಬಂದೀತು?” “ಜನರು ಅದನ್ನು ಹೊರಗೆ ಹಾಕಿ ತುಳಿಯುವುದಕ್ಕೆ ಅದು ಯೋಗ್ಯವೇ ಹೊರತು, ಮತ್ತಾವ ಕೆಲಸಕ್ಕೂ ಬಾರದು“. KanCCh 45.2

  “ನೀವು ಲೋಕಕ್ಕೆ ಬೆಳಕಾಗಿದ್ದೀರಿ. ಗುಡ್ಡದಮೇಲೆ ಕಟ್ಟಿರುವ ಊರು ಮರೆಯಾಗಿರಲಾರದು. ಮತ್ತು ದೀಪವನ್ನು ಹತ್ತಿಸಿ ಕೊಳಗದೊಳಗೆ ಇಡುವುದಿಲ್ಲ. ದೀಪಸ್ತಂಭದ ಮೇಲೆ ಇಡುತ್ತಾರಷ್ಟೆ. ಆಗ ಅದು ಮನೆಯಲ್ಲಿರುವವರೆಲ್ಲರಿಗೆ ಬೆಳಕು ಕೊಡುವುದು. ಅದರಂತೆ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಹೀಗಾದರೆ ಅವರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು” (ಮತ್ತಾಯ 5:13-16) ಎಂಬ ಮಾತುಗಳು ಪದೇಪದೇ ಕೇಳಿಬರುತ್ತಿದ್ದವು.KanCCh 45.3

  ಪ್ರತಿಯೊಂದು ದಿನವು ಕಳೆದುಹೋದಂತೆ, ಕರ್ತನ ದಿನವು ಹತ್ತಿರಕ್ಕೆ ಬರುತ್ತಿದೆ. ಇದು ನಮ್ಮನ್ನು ದೇವರ ಸಮೀಪಕ್ಕೂ ಸಹ ತರುತ್ತಿದ್ದೆಯೆ? ದಿನನಿತ್ಯದಲ್ಲಿ ನಮ್ಮೊಂದಿಗೆ ಸಂಪರ್ಕದಲ್ಲಿರುವವರಿಗೂ ನಮ್ಮ ಸಹಾಯ ಹಾಗೂ ಮಾರ್ಗದರ್ಶನದ ಅಗತ್ಯವಿದೆ. ಅವರ ಮನಃಸ್ಥಿತಿಯು ಯಾವ ಮಟ್ಟದಲ್ಲಿರುತ್ತದೆ ಎಂದರೆ, ಪರಿಶುದ್ಧಾತ್ಮನಿಂದ ಬರುವ ಸಮಯೋಚಿತ ಮಾತುಗಳು ಅವರ ಮೇಲೆ ಅಪಾರ ಪರಿಣಾಮ ಬೀರುತ್ತವೆ. ಇಂದು ಅವರಿಗೆ ದೇವರ ವಾಕ್ಯ ತಿಳಿಸದಿದ್ದರೆ, ಒಂದು ವೇಳೆ ನಮ್ಮ ಜೀವನದಲ್ಲಿ ಮತ್ತೊಮ್ಮೆ ಅವರನ್ನು ಎಂದಿಗೂ ಭೇಟಿ ಮಾಡುವ ಸಂದರ್ಭ ಬರದಿರಬಹುದು. ಇಂತಹ ಸಹ ಪ್ರಯಾಣಿಕರ ಮೇಲೆ ನಾವು ಹೇಗೆ ಪ್ರಭಾವ ಬೀರುತ್ತೇವೆ? ಅವರನ್ನು ಕ್ರಿಸ್ತನ ಬಳಿಗೆ ತರಲು ನಾವು ಯಾವ ಪ್ರಯತ್ನ ಮಾಡುತ್ತಿದ್ದೇವೆ?KanCCh 46.1

  ದೇವದೂತರು ಭೂಮಿಯ ನಾಲ್ಕು ದಿಕ್ಕುಗಳ ಗಾಳಿಗಳನ್ನು ಹಿಡಿದುಕೊಂಡಿರುವಾಗಲೇ ನಾವು ನಮ್ಮೆಲ್ಲಾಸಾಮರ್ಥ್ಯಗಳನ್ನು ಉಪಯೋಗಿಸಿ ಕೆಲಸ ಮಾಡಬೇಕು (ಪ್ರವಾದನೆಯಲ್ಲಿ ಗಾಳಿಯು ಮುಂದೆ ಬರಲಿರುವ ನಾಶ, ಹಿಂಸೆ, ಉಪದ್ರವಗಳನ್ನು ಸೂಚಿಸುತ್ತದೆ) (ಪ್ರಕಟನೆ 7:1). ಯಾವ ರೀತಿಯಲ್ಲಿಯೂ ತಡಮಾಡದೆ ನಮ್ಮ ಸಂದೇಶವನ್ನು ಸಾರಬೇಕು. ಕ್ರೈಸ್ತಧರ್ಮವು ಯೇಸು ಕ್ರಿಸ್ತನಿಂದಲೇ ಸ್ಥಾಪಿತವಾದ ನಂಬಿಕೆಯೂ ಮತ್ತು ಸಾಮರ್ಥ್ಯವೂ ಆಗಿದೆ ಹಾಗೂ ಆತನ ವಾಕ್ಯಗಳು ಪರಲೋಕದಿಂದ ಬಂದವುಗಳಾಗಿವೆ ಎಂದು ಪಾಪದಿಂದ ನಾಶವಾಗುತ್ತಿರುವ ಜನರ ಮುಂದೆ ನಾವು ಸಾಕ್ಷಿ ಕೊಡಬೇಕು. ಜನರ ಮನಸ್ಸು ಚಂಚಲವಾಗಿದ್ದು, ಎರಡೂ ಕಡೆ ತಕ್ಕಡಿಯಂತೆ ತೂಗುತ್ತಿದೆ. ಅವರು ದೇವರ ರಾಜ್ಯಕ್ಕೆ ಬಾಧ್ಯಸ್ಥರಾಗಬಹುದು ಇಲ್ಲವೆ ಸೈತಾನನ ಕ್ರೂರ ಆಳ್ವಿಕೆಗೆ ದಾಸರಾಗಬಹುದು. ಎಲ್ಲರೂ ಸಹ ತಮ್ಮ ಮುಂದಿರುವ ಸುವಾರ್ತೆಯ ನಿರೀಕ್ಷೆಯನ್ನು ಹಿಡಿದುಕೊಳ್ಳುವ ಅವಕಾಶ ಹೊಂದಿದ್ದಾರೆ. ಆದರೆ ಸಾರುವವರು ಇಲ್ಲದಿದ್ದಲ್ಲಿ, ಅವರು ಸುವಾರ್ತೆಯನ್ನು ಕೇಳಲು ಹೇಗೆ ಸಾಧ್ಯ? ದೇವರ ಮುಂದೆ ನಿಲ್ಲಲಿಕ್ಕೆ ಮಾನವರಿಗೆ ನೈತಿಕ ಪುನರುಜ್ಜೀವನದ ಅಗತ್ಯವಿದ್ದು, ಅವರು ತಮ್ಮ ಗುಣಸ್ವಭಾವದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗಿದೆ. ದೇವರ ಸುವಾರ್ತೆಯ ಸಿದ್ಧಾಂತಗಳನ್ನು ತಪ್ಪಾಗಿ ವ್ಯಾಖ್ಯಾನಿಸುವುದರ ಕಾರಣದಿಂದ ಅನೇಕರು ನಾಶವಾಗುತ್ತಿದ್ದಾರೆ. ದೇವರ ಜೊತೆ ಕೆಲಸಗಾರರಾಗಲು ಯಾರು ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುವರು? KanCCh 46.2

  ಇಂದು ನಮ್ಮ ಸಭೆಗಳಿಗೆ ಸೇರಿದ ಅತಿಹೆಚ್ಚಿನ ಸದಸ್ಯರು ತಮ್ಮದೇ ಆದ ಪಾಪಗಳು ಹಾಗೂ ಆಜ್ಞೆಗಳನ್ನು ಮೀರುವುದರಲ್ಲಿ ಮುಳುಗಿ ಹೋಗಿದ್ದಾರೆ. ಅವರು ಹೆಸರಿಗೆ ಮಾತ್ರ ಸಭೆಗೆ ಬರುತ್ತಾರೆ ಮತ್ತು ಹೋಗುತ್ತಾರೆ. ಅನೇಕ ವರ್ಷಗಳಿಂದ ಅವರು ಅತ್ಯಂತ ಗಂಭೀರವಾದ ಹಾಗೂ ಹೃದಯಸ್ಪರ್ಶಿಯಾದ ಸತ್ಯಗಳನ್ನು ಸಂತೃಪ್ತಿಯಿಂದ ಕೇಳಿದ್ದರೂ, ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆಯುತ್ತಿಲ್ಲ. ಆದುದರಿಂದ ಅವರು ಈ ಅಮೂಲ್ಯ ಸತ್ಯಗಳ ಬಗ್ಗೆ ದಿನದಿಂದ ದಿನಕ್ಕೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಸತ್ಯವೇದದಲ್ಲಿ ಪ್ರಚೋದಕವಾಗಿರುವ ಎಚ್ಚರಿಕೆ ನೀಡುವ ಸಾಕ್ಷಿಗಳು ಅವರಲ್ಲಿ ಯಾವುದೇಪಶ್ಚಾತ್ತಾಪ ಭಾವನೆ ಹುಟ್ಟಿಸುತ್ತಿಲ್ಲ. ನಂಬಿಕೆಯಿಂದ ಪಾಪಕ್ಷಮೆ ಹಾಗೂ ಕ್ರಿಸ್ತನಿಂದಲೇನೀತಿವಂತರಾಗುವೆವೆಂಬ ದೇವರ ಮಾತುಗಳಿಗೆ ಅವರು ಯಾವುದೇ ಪ್ರೀತಿ ಅಥವಾಕೃತಜ್ಞತೆಯ ಭಾವ ತೋರುತ್ತಿಲ್ಲ. ಪರಲೋಕದ ವ್ಯಾಪಾರಿಯಾದ ದೇವರು ಇಂತಹಸಭಾಸದಸ್ಯರ ಮುಂದೆ ಅತ್ಯಂತ ಬೆಲೆಬಾಳುವ ನಂಬಿಕೆ ಹಾಗೂ ಪ್ರೀತಿಯೆಂಬ ಮುತ್ತುಗಳನ್ನುಪ್ರದರ್ಶಿಸುತ್ತಿದ್ದರೂ, ಐಶ್ವರ್ಯವಂತರಾಗುವಂತೆ ಬೆಂಕಿಯಲ್ಲಿ ಪುಟಾಹಾಕಿದ ಚಿನ್ನವನ್ನೂ,ಲಜ್ಜಾಸ್ಪದವಾದ ಬೆತ್ತಲೆತನ ಕಾಣಿಸದಂತೆ ಹೊದ್ದುಕೊಳ್ಳುವುದಕ್ಕಾಗಿ ಬಿಳೀ ವಸ್ತ್ರಗಳನ್ನೂ,ಕಣ್ಣು ಕಾಣುವಂತೆ ಕಣ್ಣುಗಳಿಗೆ ಹಚ್ಚುವುದಕ್ಕಾಗಿ ಅಂಜನವನ್ನೂ ಕೊಡುವೆನೆಂದು ಆಹ್ವಾನನೀಡುತ್ತಿದ್ದರೂ, ಅವರು ತಮ್ಮ ಉಗುರು ಬೆಚ್ಚಗಿನ ಸ್ಥಿತಿಯನ್ನು ಬಿಟ್ಟು ಆತ್ಮೀಕ ಪ್ರೀತಿಮತ್ತು ಉತ್ಸಾಹ ಹೊಂದಿಕೊಳ್ಳಲು ಆಸಕ್ತಿ ಹೊಂದಿಲ್ಲ (ಪ್ರಕಟನೆ 3:18). ಅವರುದೇವಭಕ್ತರಂತೆ ನಟಿಸುತ್ತಿದ್ದರೂ, ಅದರ ಬಲವನ್ನು ಬೇಡುವೆನ್ನುತ್ತಾರೆ. ಅವರು ಇಂತಹಆತ್ಮೀಕ ನಿರುತ್ಸಾಹದ ಸ್ಥಿತಿಯಲ್ಲಿಯೇ ಮುಂದುವರಿದಲ್ಲಿ, ದೇವರು ಅವರನ್ನು ತಳ್ಳಿಬಿಡುತ್ತಾನೆ.ಅವರು ದೇವರ ಕುಟುಂಬದ ಸದಸ್ಯರಾಗಲು ತಮ್ಮನ್ನು ತಾವೇಅನರ್ಹಗೊಳಿಸಿಕೊಂಡಿದ್ದಾರೆ.KanCCh 46.3

  ಸಭೆಯ ದಾಖಲೆ ಪುಸ್ತಕಗಳಲ್ಲಿ ಹೆಸರು ನೊಂದಾಯಿತವಾಗಿರುವುದು ತಮ್ಮನ್ನುರಕ್ಷಿಸುತ್ತದೆಂದು ಸಭಾಸದಸ್ಯರು ಎಂದೂ ತಿಳಿದುಕೊಳ್ಳಬಾರದು. ಅವರು ದೇವರ ದೃಷ್ಟಿಗೆಯೋಗ್ಯರಾಗಿ ಕಾಣಿಸಿಕೊಳ್ಳುವುದಕ್ಕೆ ಪ್ರಯಾಸಪಡಬೇಕು. ಅಲ್ಲದೆ ಅವಮಾನಕ್ಕೆ ಗುರಿಯಾಗದಕೆಲಸ ಮಾಡುವವರಾಗಿರಬೇಕು (2 ತಿಮೊಥೆ 2:15). ಈ ಸಭಾಸದಸ್ಯರು ತಮ್ಮದಿನನಿತ್ಯದ ಜೀವನದಲ್ಲಿ ಕ್ರಿಸ್ತನ ಮಾರ್ಗದರ್ಶನದಂತೆ, ತಮ್ಮ ಗುಣಸ್ವಭಾವರೂಪಿಸಿಕೊಳ್ಳಬೇಕು. ಅವರು ದೇವರಲ್ಲಿ ನೆಲೆಗೊಂಡಿದ್ದು, ಯಾವಾಗಲೂ ಆತನಲ್ಲಿನಂಬಿಕೆ ಹೊಂದಿರಬೇಕು. ಈ ರೀತಿಯಲ್ಲಿ ಅವರು ಪರಿಪೂರ್ಣರೂ, ಸಂತೋಷವುಳ್ಳವರೂಆಗಿ ಕೃತಜ್ಞತೆ ತುಂಬಿದ ಕ್ರೈಸ್ತರಾಗಿ ಪೂರ್ಣವಾಗಿ ಬೆಳವಣಿಗೆ ಹೊಂದುವರು. ಆಗಅವರು ಬೆಳಕಿನಿಂದ ಇನ್ನೂ ಸ್ಪಷ್ಟವಾದ ಬೆಳಕಿನೆಡೆಗೆ ದೇವರಿಂದ ನಡೆಸಲ್ಪಡುವರು.ಇಂತಹ ಅನುಭವವು ಅವರಲ್ಲಿ ಉಂಟಾಗದಿದ್ದಲ್ಲಿ ಮುಂದೊಂದು ದಿನ ಅವರು“ಸುಗ್ಗಿಕಾಲ ಮುಗಿದುಹೋಯಿತು, ಆದರೆ ನಾವು ರಕ್ಷಣೆಹೊಂದಲಿಲ್ಲ! ನಾವು ಯಾಕೆಕ್ರಿಸ್ತನೆಂಬ ಬಲವಾದ ದುರ್ಗದಲ್ಲಿ ಆಶ್ರಯ ಪಡೆದುಕೊಳ್ಳಲಿಲ್ಲ? ನನ್ನ ರಕ್ಷಣೆಯನ್ನುನಾನು ಅಲ್ಪವೆಂದು ಎಣಿಸಿ ಪವಿತ್ರಾತ್ಮನ ಕೃಪೆಯನ್ನು ಅಲಕ್ಷಿಸಿದೆ” ಎಂದು ದುಃಖದಿಂದಗೋಳಾಡುವರು.KanCCh 47.1

  ಬಹಳ ಕಾಲದಿಂದ ನಾವು ದೇವರ ಸತ್ಯದಲ್ಲಿ ವಿಶ್ವಾಸವಿಟ್ಟಿದ್ದೇವೆಂದು ಹೇಳಿಕೊಳ್ಳುವ ಸಹೋದರ, ಸಹೋದರಿಯರೇ, ನಿಮ್ಮ ಗುಣಸ್ವಭಾವವು ಪರಲೋಕದಿಂದ ಕೊಡಲ್ಪಟ್ಟ ಬೆಳಕಿಗೆ ಅನುಗುಣವಾಗಿದೆಯೇ? ಇದು ಬಹಳ ಗಂಭೀರವಾದ ಪ್ರಶ್ನೆ. ನೀತಿಯಸೂರ್ಯನಾದ ಕ್ರಿಸ್ತನು ಸಭೆಯಮೇಲೆ ಉದಯಿಸಿದ್ದಾನೆ ಹಾಗೂ ಸಭೆಯು ಎದ್ದು ಪ್ರಕಾಶಿಸುವುದು ಅದರ ಕರ್ತವ್ಯವಾಗಿದೆ. ಆತ್ಮೀಕವಾಗಿ ಬೆಳವಣಿಗೆ ಹೊಂದುವುದು ಪ್ರತಿಯೊಬ್ಬರಿಗೆ ದೊರೆತ ಅವಕಾಶವಾಗಿದೆ. ಕ್ರಿಸ್ತನೆಂಬ ದ್ರಾಕ್ಷೆಬಳ್ಳಿಯೊಂದಿಗೆ, ನಿಕಟವಾಗಿ ನೆಲೆಗೊಂಡಿರುವವರು ದೇವಕುಮಾರನ ಜ್ಞಾನದಲ್ಲಿಯೂ ಹಾಗೂ ಕೃಪೆಯಲ್ಲಿಯೂ ಪರಿಪೂರ್ಣರಾಗಿ ಬೆಳೆಯುವರು. ಸತ್ಯದಲ್ಲಿ ನಂಬಿಕೆ ಇಟ್ಟಿದ್ದೇವೆಂದು ಹೇಳಿಕೊಳ್ಳುವವರು, ತಮಗೆ ದೊರೆತ ಸಾಮರ್ಥ್ಯಮತ್ತು ಅವಕಾಶಗಳನ್ನು ಆತ್ಮೀಕವಾಗಿ ಕಲಿಯಲಿಕ್ಕೂ ಹಾಗೂ ಅದರಂತೆ ನಡೆಯುವುದಕ್ಕೂ ಉಪಯೋಗಿಸಿಕೊಂಡಲ್ಲಿ ಅವರು ಕ್ರಿಸ್ತನಲ್ಲಿ ಬಲವಾಗುವರು. ಅವರು ರೈತರು, ಶಿಕ್ಷಕರು, ಬೋಧಕರು ಅಥವಾ ಇನ್ನಾವುದೇ ವೃತ್ತಿಯಲ್ಲಿರಲಿ, ತಮ್ಮನ್ನು ದೇವರಿಗೆ ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದಲ್ಲಿ, ಅವರು ಪರಲೋಕದ ದೇವರಿಗೆ ಸಮರ್ಥರಾದ ಕೆಲಸಗಾರರಾಗಿರುತ್ತಿದ್ದರು. KanCCh 48.1