Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಸಭೆಯಲ್ಲಿರುವ ಬಡವರಿಗೆ ನಮ್ಮ ಕರ್ತವ್ಯ

    ನಮ್ಮಲ್ಲಿ ಯಾವಾಗಲೂ ಎರಡುವರ್ಗದ ಬಡವರಿರುತ್ತಾರೆ. ಆಜ್ಞೆಗಳನ್ನು ಮೀರಿತಮ್ಮಕೆಟ್ಟಕಾರ್ಯಗಳ ಮೂಲಕ ತಮ್ಮನ್ನು ತಾವೇ ನಾಶಮಾಡಿಕೊಂಡುಬಡವರಾಗಿರುವವರು ಮೊದಲನೆಯ ವರ್ಗ, ಕ್ರಿಸ್ತನ ಸತ್ಯದ ನಿಮಿತ್ತ ಎಲ್ಲವನ್ನೂಕಳೆದುಕೊಂಡು ಬಡವರಾಗಿರುವವರು ಎರಡನೇ ವರ್ಗಕ್ಕೆ ಸೇರಿದವರು. ನಮ್ಮನೆರೆಯವರನ್ನು ನಮ್ಮಂತೆಯೇ ಪ್ರೀತಿಸಬೇಕು. ಅಲ್ಲದೆ ಈ ಎರಡೂವರ್ಗಗಳ ಬಡವರಿಗೆಜ್ಞಾನವಿವೇಕದ ಮಾರ್ಗದರ್ಶನ ಉಪಯೋಗಿಸಿ ಸೂಕ್ತವಾದ ಸಹಾಯ ಮಾಡಬೇಕು.ಕರ್ತನ ನಿಮಿತ್ತ ಸತ್ಯದ ನಿಮಿತ್ತ ಬಡವರಾದವರಿಗೆ ಯಾವುದೇ ರೀತಿಯಲ್ಲಿ ಹಿಂಜರಿಯದೆಎಲ್ಲಾ ವಿಧದಲ್ಲಿಯೂ ಸಹಾಯ ಮಾಡಬೇಕು.KanCCh 349.1

    ಪಾಪಮಯವಾದ ಈ ಲೋಕದ ಜನರನ್ನು ದೇವರು ನಾಶವಾಗುವಂತೆ ಬಿಟ್ಟಿಲ್ಲಎಂಬುದನ್ನು ತನ್ನಮಕ್ಕಳು ಅವರಿಗೆ ಮನವರಿಕೆ ಮಾಡಿಕೊಡಬೇಕೆಂದು ದೇವರುಬಯಸುತ್ತಾನೆ. ಸುವಾರ್ತೆಯಸತ್ಯಕ್ಕಾಗಿ ಮನೆಯಿಂದ ಹೊರಹಾಕಲ್ಪಟ್ಟು ಬಾಧೆಅನುಭವಿಸುತ್ತಿರುವವರಿಗೆ ಸಹಾಯಮಾಡಲು ವಿಶೇಷವಾಗಿ ಪ್ರಯತ್ನಿಸಬೇಕು.ದೇವರು ಪ್ರೀತಿಸುವ ಇಂತವರನ್ನು ನೋಡಿಕೊಳ್ಳಲು ಉದಾರಿಗಳೂ, ನಿಸ್ವಾರ್ಥಿಗಳೂಆದಂತವರು ಹೆಚ್ಚಾಗಿಬೇಕಾಗಿದ್ದಾರೆ. ದೇವಜನರಲ್ಲಿ ಬಡವರಾದವರು ಯಾವುದೇ ಕೊರತೆಅನುಭವಿಸಿದಂತೆ ನೋಡಿಕೊಳ್ಳಬೇಕಾದದ್ದು ಸಭೆಯಕರ್ತವ್ಯ ಅವರ ಜೀವನೋಪಾಯಕ್ಕೆಏನಾದರೂ ಮಾರ್ಗಮಾಡಲೇಬೇಕು. ಕೆಲವರಿಗೆ ಕೆಲಸ ಮಾಡುವುದನ್ನು ಹೇಳಿಕೊಡಬೇಕು.ಶ್ರಮವಹಿಸಿದುಡಿದರೂ, ತಮ್ಮ ಕುಟುಂಬದ ಅಗತ್ಯಗಳನ್ನು ಪೂರೈಸಲು ಒದ್ದಾಡುತ್ತಿರುವವರಿಗೆವಿಶೇಷವಾದ ಸಹಾಯದ ಅಗತ್ಯವಿದೆ. ಇಂತವರ ಬಗ್ಗೆ ಆಸಕ್ತಿ ವಹಿಸಿ ಅವರಿಗೆ ಉದ್ಯೋಗದೊರಕಿಸಿಕೊಡಲು ಪ್ರಯತ್ನಿಸಬೇಕು. ದೇವರನ್ನು ಪ್ರೀತಿಸಿ ಆತನ ಆಜ್ಞೆಗಳನ್ನುಕೈಕೊಂಡುನಡೆಯುವಇಂತಹ ಅರ್ಹರಾದ ಬಡವರಿಗೆ ಸಹಾಯಮಾಡಲು ಪ್ರತ್ಯೇಕವಾದಹಣದ ನಿಧಿಯಿರಬೇಕು.KanCCh 349.2

    ದೇವರಿಗೆ ವಿಧೇಯರಾಗಿ ಆತನನ್ನು ಪ್ರೀತಿಸುವವರಲ್ಲಿ ಕೆಲವರು ಸನ್ನಿವೇಶದಕಾರಣದಿಂದಬಡವರಾಗಿರುತ್ತಾರೆ. ಕೆಲವರು ಅಷ್ಟೊಂದು ಜಾಣರಾಗಿರುವುದಿಲ್ಲ. ಇರುವಂತಹಣ ಹಾಗೂ ಇತರಸೌಲಭ್ಯಗಳನ್ನು ಹೇಗೆ ನಿರ್ವಹಿಸಬೇಕೆಂದು ತಿಳಿದಿರುವುದಿಲ್ಲ.ಕೆಲವರು ರೋಗರುಜಿನಗಳು ಮತ್ತು ತಮ್ಮ ಕೈಮೀರಿದ ದುರ್ಘಟನೆಗಳಿಂದಬಡವರಾಗಿರುತ್ತಾರೆ. ಕಾರಣಗಳೇನೇ ಇರಲಿ, ಅವರಿಗೆ ಸಹಾಯಮಾಡುವುದು ಸಭೆಯಪ್ರಮುಖಕರ್ತವ್ಯವಾಗಿದೆ.KanCCh 349.3

    ಎಲ್ಲಿ ಅಡ್ವೆಂಟಿಸ್ಟ್ ಸಭೆಯು ಸ್ಥಾಪಿಸಲ್ಪಡುವುದೋ, ಅಲ್ಲಿನ ಸದಸ್ಯರು ಕಷ್ಟದಲ್ಲಿರುವವಿಶ್ವಾಸಿಗಳಿಗೆ ಪ್ರಾಮಾಣಿಕವಾಗಿ ಸಹಾಯಮಾಡಬೇಕು. ಅಲ್ಲಿಗೆ ನಿಲ್ಲಿಸಬಾರದು. ಕಷ್ಟದಲ್ಲಿರುವವರು ಯಾವುದೇ ಜಾತಿ, ಜನಾಂಗ, ಧರ್ಮಕ್ಕೆ ಸೇರಿದ್ದರೂ, ಅವರಿಗೂಕ್ರೈಸ್ತರು ಸಹಾಯಮಾಡಲೇಬೇಕು. ಇದರ ಪರಿಣಾಮವಾಗಿ ಅವರಲ್ಲಿ ಕೆಲವರು ಈಕೊನೆಯ ಕಾಲದ ವಿಶೇಷ ಸತ್ಯಗಳನ್ನು ಅಂಗೀಕರಿಸುತ್ತಾರೆ.KanCCh 349.4