Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಆತ್ಮೀಕ ವಿಷಯಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಿರಿ

    ಯೌವನಸ್ಥರು ಲೌಕಿಕ ಜೀವನದ ಸೆಳೆತ ಹಾಗೂ ಸೈತಾನನ ಶೋಧನೆಗಳಿಂದ ತಪ್ಪಿಸಿಕೊಳ್ಳಲು ಇರುವ ಏಕೈಕ ಸುರಕ್ಷತೆ ಎಂದರೆ ಯಾವಾಗಲೂ ಎಚ್ಚರವಾಗಿದ್ದು ತಮ್ಮನ್ನು ದೇವರ ಮುಂದೆ ತಗ್ಗಿಸಿಕೊಳ್ಳುವುದೇ ಆಗಿದೆ. ಪ್ರಾರ್ಥನಾ ಜೀವಿತ ಮತ್ತು ಶೋಧನೆಗಳ ವಿರುದ್ಧವಾಗಿ ಎಚ್ಚರಿಕೆಯಾಗಿಲ್ಲದೆಯೂ ತಾವು ಕ್ರೈಸ್ತರಾಗಿರ ಬಹುದೆಂದು ಯೌವನಸ್ಥರು ಎಂದಿಗೂ ಅಂದುಕೊಳ್ಳಬಾರದು. ಸೈತಾನನು ಅಡವಿಯಲ್ಲಿ ಕ್ರಿಸ್ತನನ್ನು ಶೋಧನೆಗೆ ಒಳಪಡಿಸಲು ಬಂದಾಗ ತನ್ನೆಲ್ಲಾ ವಂಚನೆಯ ತಂತ್ರಗಳನ್ನು ರಹಸ್ಯವಾಗಿಟ್ಟು ಪ್ರಕಾಶಮಾನವಾದ ದೇವದೂತನಾಗಿ ಬಂದಂತೆಯೇ, ನಿಮ್ಮನ್ನು ವಂಚಿಸಲು ಅದೇರೀತಿ ಬರುವನು. ಆಗ ಅವನು ಪರಲೋಕದ ಒಬ್ಬ ದೇವದೂತನಂತೆ ಕಾಣಿಸಿಕೊಂಡಿದ್ದನು. ನಮ್ಮ ವಿರೋಧಿಯಾಗಿರುವ ಸೈತಾನನು ಪರಲೋಕದಿಂದ ಬಂದ ದೂತನಂತೆ ನಮ್ಮ ಬಳಿಗೆ ಬರುವುದರಿಂದ ಅಪೊಸ್ತಲನಾದ ಪೇತ್ರನು ನಾವು ಯಾವಾಗಲೂ ಎಚ್ಚರಿಕೆಯಿಂದಲೂ ಹಾಗೂ ಸ್ವಸ್ಥ ಮನಸ್ಸಿನಿಂದಲೂ ಇರಬೇಕೆಂದು ಹೇಳುತ್ತಾನೆ. ನಿರ್ಲಕ್ಷ್ಯದಿಂದಲೂ ಹಾಗೂ ಹುಡುಗಾಟಿಕೆಯಿಂದ ತಮ್ಮ ಕೈಸ್ತ ಕರ್ತವ್ಯಗಳನ್ನು ತಾತ್ಸಾರ ಮಾಡುವ ಯೌವನಸ್ಥರು ತಮಗೆ ಬರುವ ಶೋಧನೆಗಳನ್ನು ಕ್ರಿಸ್ತನಂತೆ ದೇವರವಾಕ್ಯದ ಬಲದಿಂದ ಜಯಿಸಲಾಗದೆ ಶತ್ರುವಿನ ಬಲೆಗೆ ಬೀಳುವರು.KanCCh 219.2

    ಅನೇಕರು ತಾವು ಕರ್ತನ ಪಕ್ಷದಲ್ಲಿದ್ದೇವೆಂದು ಹೇಳಿಕೊಳ್ಳುತ್ತಾರೆ. ಆದರೆ ಅವರು ಆತನ ಕಡೆಗಿರುವುದಿಲ್ಲ; ಅವರು ಮಾಡುವ ಕಾರ್ಯವೆಲ್ಲವೂ ಸೈತಾನನಿಗೆ ಸೇರಿದವರೆಂದು ಹೇಳುತ್ತದೆ. ಯಾವ ಆಧಾರದಲ್ಲಿ ನಾವು ಯಾರ ಕಡೆಗಿದ್ದೇವೆಂದು ನಿರ್ಧರಿಸುವುದು? ನಮ್ಮ ಹೃದಯವು ಯಾರಿಗೆ ಶರಣಾಗಿದೆ? ನಮ್ಮ ಆಲೋಚನೆಗಳು ಯಾರ ಬಗ್ಗೆ ಇರುತ್ತದೆ? ನಮ್ಮ ಪ್ರೀತಿ ಮತ್ತು ಅತ್ಯುತ್ತಮ ಸಾಮರ್ಥ್ಯವು ಯಾರಿಗಾಗಿ ಮೀಸಲಾಗಿದೆ? ನಾವು ದೇವರ ಕಡೆಗಿದ್ದಲ್ಲಿ, ನಮ್ಮ ಮಧುರವಾದ ಆಲೋಚನೆಗಳು ಆತನಿಗಾಗಿ ಮೀಸಲಾಗಿರುತ್ತವೆ. ನಮಗೆ ಲೋಕದೊಂದಿಗೆ ಯಾವುದೇ ಸ್ನೇಹವಿಲ್ಲ: ನಮ್ಮೆಲ್ಲವನ್ನೂ ನಾವು ದೇವರಿಗಾಗಿ ಪ್ರತಿಷ್ಟಿಸಿಕೊಂಡಿದ್ದೇವೆ ಹಾಗೂ ನಾವು ಆತನವರು. ನಾವು ದೇವರ ಸ್ವರೂಪ ಹೊಂದಿಕೊಳ್ಳಲು, ಆತನ ಆತ್ಮನ ಪ್ರೇರೇಪಣೆ ಹೊಂದಲು, ಆತನ ಚಿತ್ತ ನೆರವೇರಿಸಲು ಹಾಗೂ ಎಲ್ಲಾ ವಿಷಯಗಳಲ್ಲಿಯೂ ಆತನನ್ನು ಮೆಚ್ಚಿಸಲು ಕಾತರದಿಂದ ಬಯಸುತ್ತೇವೆ.KanCCh 219.3

    ಪ್ರಯೋಜನಕಾರಿಯಾದ ಫಲಿತಾಂಶಗಳನ್ನು ಸಾಧಿಸಲು ನಮ್ಮೆಲ್ಲಾ ಅಂಗಾಂಗಗಳ ಸಾಮರ್ಥ್ಯವನ್ನು ಉಪಯೋಗಿಸುವುದೇ ನಿಜವಾದ ಶಿಕ್ಷಣ, ಲೋಕವು ತನ್ನ ಬುದ್ಧಿಶಕ್ತಿ ಮತ್ತು ಶಾರೀರಿಕ ಶಕ್ತಿ ಹೊಂದಿರುವಾಗ, ಕ್ರೈಸ್ತರಾದ ನಾವು ಯಾಕೆ ಧರ್ಮದ ಕಡೆಗೆ ಹೆಚ್ಚಾದ ಗಮನ ಹರಿಸುತ್ತಿಲ್ಲ? ಯಾಕೆಂದರೆ ನಮ್ಮೆಲ್ಲಾ ಶಕ್ತಿ, ಸಾಮರ್ಥ್ಯವನ್ನು ಲೌಕಿಕವಾಗಿ ಉಪಯೋಗಿಸುವುದೇ ಇದಕ್ಕೆ ಕಾರಣ. ಲೌಕಿಕವಾದ ವ್ಯವಹಾರದಲ್ಲಿ ನಾವು ಮನಃಪೂರ್ವಕವಾಗಿ ಮುಳುಗಿರುವುದರಿಂದ ಕ್ರೈಸ್ತರಾದ ನಮಗೆ ಈ ಲೋಕದ ಜೀವನವು ಸುಲಭವಾಗಿಯೂ, ಧಾರ್ಮಿಕ ಜೀವನವು ಬಹಳ ಕಠಿಣವಾಗಿಯೂ ತೋರುತ್ತದೆ. ನಮ್ಮಲ್ಲಿ ಅನೇಕರಿಗೆ ಧಾರ್ಮಿಕಜೀವನದಲ್ಲಿ ದೇವರಸತ್ಯದ ಬಗ್ಗೆ ಸಮ್ಮತಿಯಿದ್ದರೂ, ಜೀವನದಲ್ಲಿ ಅದನ್ನು ಅನುಸರಿಸಿ ನಡೆಯುವುದಿಲ್ಲ.KanCCh 220.1

    ಧಾರ್ಮಿಕ ಚಿಂತನೆಗಳು ಹಾಗೂ ದೈವೀಕ ಭಾವನೆ ಮಕ್ಕಳಲ್ಲಿ ಬೆಳೆಸುವುದು ನಮ್ಮ ಶಿಕ್ಷಣದ ಒಂದು ಭಾಗವಾಗಿ ಮಾಡಲ್ಪಟ್ಟಿಲ್ಲ. ಇವು ನಮ್ಮ ಮೇಲೆ ಪರಿಣಾಮಬೀರಿ ನಮ್ಮನ್ನು ಸಂಪೂರ್ಣವಾಗಿ ಹತೋಟಿಯಲ್ಲಿಡಬೇಕು. ಸರಿಯಾದದ್ದನ್ನು ಮಾಡುವ ಅಭ್ಯಾಸದ ಕೊರತೆ ನಮ್ಮಲ್ಲಿದೆ. ಎಲ್ಲವೂ ಅನುಕೂಲವಾಗಿರುವಾಗ ಆಗೊಮ್ಮೆ ಈಗೊಮ್ಮೆ ನಾವು ಒಳ್ಳೆಯದನ್ನು ಮಾಡುತ್ತೇವೆ. ಆದರೆ ಸಹಜವಾಗಿಯೇ ಆತ್ಮೀಕ ವಿಷಯಗಳ ಬಗ್ಗೆ ಆಲೋಚಿಸುವುದು ನಮ್ಮ ಮನಸ್ಸಿನಲ್ಲಿ ಬರುವುದಿಲ್ಲ. ಪರಿಶುದ್ಧತೆಯನ್ನು ಪ್ರೀತಿಸಿ ಅನುಸರಿಸುವಂತೆ ನಮ್ಮ ಮನಸ್ಸನ್ನು ಶಿಸ್ತಿಗೊಳಪಡಿಸಬೇಕು. ಆತ್ಮೀಕ ವಿಷಯಗಳ ಬಗ್ಗೆ ಖಂಡಿತವಾಗಿ ಪ್ರೋತ್ಸಾಹಿಸಿ ಬೆಳೆಸಿಕೊಂಡಲ್ಲಿ ಮಾತ್ರ ನಾವು ಸತ್ಯದ ಜ್ಞಾನದಲ್ಲಿಯೂ ಹಾಗೂ ಕೃಪೆಯಲ್ಲಿಯೂ ಅಭಿವೃದ್ಧಿ ಹೊಂದುತ್ತೇವೆ. ಒಳ್ಳೇತನ ಮತ್ತು ಯಥಾರ್ಥವಾದ ಪಾವಿತ್ರತೆಗಾಗಿ ಮನಃಪೂರ್ವಕವಾಗಿ ಬಯಸುವುದು ಸರಿಯಾಗಿದೆ, ಆದರೆ ಅದನ್ನು ಅಳವಡಿಸಿಕೊಳ್ಳದಿದ್ದಲ್ಲಿ ಏನೂ ಪ್ರಯೋಜನವಾಗಲಾರದು. ಒಳ್ಳೆಯ ಉದ್ದೇಶಗಳು ಒಪ್ಪತಕ್ಕದ್ದೆ, ಆದರೆ ಅವುಗಳನ್ನು ದೃಢನಿರ್ಧಾರದಿಂದ ಅನುಸರಿಸದಿದ್ದಲ್ಲಿ, ಅದರಿಂದ ಏನೂ ಪ್ರಯೋಜನವಿಲ್ಲ. ಅನೇಕರು ಕ್ರೈಸ್ತರಾಗಬೇಕೆಂದು ನಿರೀಕ್ಷೆಯಿಂದ ಬಯಸುತ್ತಾರೆ. ಆದರೆ ಅದಕ್ಕಾಗಿ ಮನಃಪೂರ್ವಕ ಪ್ರಯತ್ನ ಮಾಡದಿರುವುದರಿಂದ ಅವರು ನಾಶವಾಗುತ್ತಾರೆ. ಈ ಕಾರಣದಿಂದ ಅವರು ತಕ್ಕಡಿಯಲ್ಲಿ ತೂಗಲ್ಪಟ್ಟು ಕಡಿಮೆಯಾಗಿ ಕಂಡುಬರುತ್ತಾರೆ (ದಾನಿಯೇಲನು 5:27). ನಮ್ಮ ಇಚ್ಛಾಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಉಪಯೋಗಿಸಬೇಕು. ಆಗ ನಾನು ಸಂಪೂರ್ಣವಾದ ಕ್ರೈಸ್ತನಾಗಿರುತ್ತೇನೆ ಮತ್ತು ಕ್ರಿಸ್ತನ ಪರಿಪೂರ್ಣ ಪ್ರೀತಿಯ ಉದ್ದ, ಆಳ, ಅಗಲ ಹಾಗೂ ಎತ್ತರ ತಿಳಿದಿರುತ್ತದೆ. “ನೀತಿಗಾಗಿ ಹಸಿದು ಬಾಯಾರಿದವರು ಧನ್ಯರು, ಅವರಿಗೆ ತೃಪ್ತಿಯಾಗುವುದು’ ಎಂದು ಯೇಸುಸ್ವಾಮಿ ಹೇಳುತ್ತಾನೆ (ಮತ್ತಾಯ 5:6). ನೀತಿಗಾಗಿ ಹಸಿದು ಬಾಯಾರಿದವರನ್ನು ತೃಪ್ತಿಪಡಿಸಲು ಕ್ರಿಸ್ತನು ಸಾಕಷ್ಟು ಮಾರ್ಗಗಳನ್ನು ಮಾಡಿದ್ದಾನೆ.KanCCh 220.2