Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಕೃತಜ್ಞತಾ ಕಾಣಿಕೆಯನ್ನು ಬಡವರಿಗಾಗಿ ಮೀಸಲಿಡಬೇಕು

    ಪ್ರತಿಯೊಂದು ಸಭೆಯಲ್ಲಿಯೂ ಬಡವರಿಗಾಗಿ ಹಣವನ್ನು ಮೀಸಲಿಡಬೇಕು. ಪ್ರತಿಯೊಬ್ಬಸದಸ್ಯನೂ ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ತಮಗೆ ಸಾಧ್ಯವಾದಂತೆಕೃತಜ್ಞತಾಕಾಣಿಕೆಯನ್ನು ದೇವರಿಗೆ ಅರ್ಪಿಸಬೇಕು. ಈ ಕಾಣಿಕೆಯು ದೇವರು ನಮಗೆಕೊಟ್ಟ ಒಳ್ಳೆಯ ಆರೋಗ್ಯ, ಊಟಬಟ್ಟೆ ಮೊದಲಾದ ವರಗಳಿಗೆ ನಾವು ವ್ಯಕ್ತಪಡಿಸುವಕೃತಜ್ಞತೆಯಾಗಿದೆ. ಈ ಆಶೀರ್ವಾದದ ಪ್ರಕಾರ ಬಡವರಿಗೆ, ಕಷ್ಟಸಂಕಟದಲ್ಲಿರುವವರಿಗೆನಾವು ಕಾಣಿಕೆಕೊಡಬೇಕು. ಈ ವಿಷಯದ ಬಗ್ಗೆ ಅಡ್ವೆಂಟಿಸ್ಟರು ಹೆಚ್ಚಿನ ಗಮನ ಕೊಡಬೇಕೆಂದುಶ್ರೀಮತಿ ವೈಟಮ್ಮನವರು ಹೇಳುತ್ತಾರೆ. ಬಡವರನ್ನು ನೆನಪಿಸಿಕೊಳ್ಳಿ, ನಿಮ್ಮ ಸುಖಸಂತೋಷವನ್ನು ಸ್ವಲ್ಪಮಟ್ಟಿಗೆ ತ್ಯಜಿಸಿ, ಊಟ ಬಟ್ಟೆಗೂ ಗತಿಯಿಲ್ಲದ ಬಡವರಿಗೆಸಹಾಯಮಾಡಿ, ಅವರಿಗೆ ಸಹಾಯ ಮಾಡುವುದು ಕ್ರಿಸ್ತನಿಗೆ ಸಹಾಯಮಾಡಿದಂತೆ,ಕ್ರಿಸ್ತನೂ ಸಹ ನಮ್ಮಂತೆಯೇ ಕಷ್ಟಗಳನ್ನು ಅನುಭವಿಸಿದನು. ಬಡವರಿಗೆ ಸಹಾಯಮಾಡಲುನಿಮ್ಮೆಲ್ಲಾ ಸುಖಸಂತೋಷಗಳು ತೃಪ್ತಿಯಾಗುವವರೆಗೆ ಕಾಯಬಾರದು. ನಿಮ್ಮ ಭಾವನೆಗಳಲ್ಲಿಭರವಸವಿಟ್ಟು, ಕೊಡಬೇಕೆಂಬ ಮನಸ್ಸು ಬಂದಾಗ ಕೊಡುತ್ತೇನೆ, ಮನಸ್ಸಿಲ್ಲದಿದ್ದಲ್ಲಿಕೊಡುವುದಿಲ್ಲವೆಂದು ಹೇಳಬಾರದು. ಕರ್ತನ ದಿನದಲ್ಲಿ ನಿಮ್ಮ ಬಗ್ಗೆ ಪರಲೋಕದಪುಸ್ತಕದಲ್ಲಿ ಬರೆದಿರುವುದನ್ನು ನೋಡಬೇಕೆಂಬ ರೀತಿಯಲ್ಲಿ ಯಾವಾಗಲೂ ಬಡವರಿಗೆಸಹಾಯಮಾಡಬೇಕು.KanCCh 343.1