Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಖಂಡನೆ, ಆಕ್ಷೇಪಣೆಗಳನ್ನು ಹೇಗೆ ತೆಗೆದುಕೊಳ್ಳಬೇಕು?

    ನಮ್ಮನ್ನು ಖಂಡಿಸುವವರ ಮೇಲೆ ನಾವು ಕೋಪಿಸಿಕೊಳ್ಳಬಾರದು. ಯಾಕೆಂದರೆ ತಪ್ಪು ಮಾಡಿದ ಆ ವ್ಯಕ್ತಿಯಲ್ಲ, ಬದಲಾಗಿ ದೇವರಾತ್ಮನು ಅವನ ಮೂಲಕ ನಮ್ಮನ್ನು ನಾಶದಿಂದ ತಪ್ಪಿಸಲು ಮಾತಾಡಿದ್ದಾನೆ. ಇತರರು ನಮ್ಮನ್ನು ಖಂಡಿಸುವುದು, ತೆಗಳುವುದು ನಮಗೆ ಸಂತೋಷವುಂಟು ಮಾಡುವುದಿಲ್ಲ. ಅದು ಮಾನವ ಸಹಜ ಸ್ವಭಾವ, ಅಲ್ಲದೆ ಆತ್ಮೀಕ ಅಂಧಕಾರದಲ್ಲಿರುವ ವ್ಯಕ್ತಿಗೆ ಗದರಿಕೆಯ ಅಗತ್ಯ ಅಥವಾ ಅದರಿಂದ ಬರಲಿರುವ ಆಶೀರ್ವಾದವನ್ನು ಅರಿಯುವುದು ಸಾಧ್ಯವಿಲ್ಲ. ಮನುಷ್ಯನು ಶೋಧನೆಗೆ ಒಳಗಾಗಿ ಪಾಪದಲ್ಲಿ ಮುಳುಗಿರುವಾಗ, ಅವನ ಮನಸ್ಸಿನಲ್ಲಿ ಆತ್ಮೀಕ ಕತ್ತಲೆ ತುಂಬಿರುತ್ತದೆ. ನೈತಿಕ ವಿವೇಚನೆಯು ಕೆಟ್ಟುಹೋಗಿ ವಿಕೃತಗೊಳ್ಳುತ್ತದೆ. ಮನಸ್ಸಾಕ್ಷಿಯ ಎಚ್ಚರಿಕೆಗಳನ್ನು ನಿರ್ಲಕ್ಷಿಸುವುದರಿಂದ ಅದು ನಿಧಾನವಾಗಿ ಪರಿಣಾಮ ಕಳೆದುಕೊಳ್ಳುತ್ತದೆ. ಅವನು ಒಳ್ಳೇದರ ಮತ್ತು ಕೆಟ್ಟದ್ದರ ನಡುವಣ ವ್ಯತ್ಯಾಸ ಗುರುತಿಸುವ ಶಕ್ತಿಯನ್ನು ನಿಧಾನವಾಗಿ ಕಳೆದುಕೊಳ್ಳುತ್ತಾನೆ. ಅವನು ಧರ್ಮವನ್ನು ಹಾಗೂ ಅದರ ತತ್ವಗಳನ್ನು ಅತ್ಯಭಿಮಾನದಿಂದ ಅನುಸರಿಸಬಹುದು, ಆದರೆ ಅದರಲ್ಲಿ ಜೀವವಿರುವುದಿಲ್ಲ. ಇಂತವರ ಪರಿಸ್ಥಿತಿಯನ್ನು ಸತ್ಯ ಸಾಕ್ಷಿಯಾದ ಯೇಸುಕ್ರಿಸ್ತನು “ನೀನು ನಿನ್ನ ವಿಷಯದಲ್ಲಿ - ನಾನು ಐಶ್ವರ್ಯವಂತನು, ಸಂಪನ್ನನೂ, ಒಂದರಲ್ಲಿಯೂ ಕೊರತೆಯಿಲ್ಲದವನು ಎಂದು ಹೇಳಿಕೊಳ್ಳುತ್ತೀ; ಆದರೆ ನೀನು ಕೇವಲ ದುರವಸ್ಥೆಯಲ್ಲಿ ಬಿದ್ದಿರುವಂಥವನು, ದೌರ್ಭಾಗ್ಯನು, ದರಿದ್ರನು, ಕುರುಡನು, ಬಟ್ಟೆಯಿಲ್ಲದವನು ಆಗಿರುವುದನ್ನು ತಿಳಿಯದೆ ಇದ್ದೀ” ಎಂದು ವರ್ಣಿಸುತ್ತಾನೆ (ಪ್ರಕಟನೆ 3:17). ದೇವರಾತ್ಮನು ಗದರಿಕೆಯ ಸಂದೇಶದ ಮೂಲಕ ಒಬ್ಬನ ಪರಿಸ್ಥಿತಿ ಹೀಗಿದೆ ಎಂದು ತಿಳಿಸಿದಾಗ, ಈ ಸಂದೇಶವು ಸತ್ಯವೆಂದು ಅವನಿಗೆ ಅರಿವಾಗುವುದಿಲ್ಲ. ಈ ಕಾರಣದಿಂದ ಅವನು ಈ ಎಚ್ಚರಿಕೆ ನಿರಾಕರಿಸಬೇಕೇ? ಎಂದಿಗೂ ಇಲ್ಲ.KanCCh 91.1

    ದೇವರು ಸಾಕಷ್ಟು ಸಾಕ್ಷ್ಯಾಧಾರ ಕೊಟ್ಟಿದ್ದಾನೆ. ಯೇಸುವಿನ ವಿಷಯವಾದ ಸಾಕ್ಷಿಯ ನಿಜಸ್ವರೂಪವೇನೆಂದು ತಿಳಿಯ ಬಯಸುವವರು ಈ ಸಾಕ್ಷ್ಯಾಧಾರಗಳನ್ನು ಪರೀಕ್ಷಿಸಿ ತೃಪ್ತಿಹೊಂದಬಹುದು. ಇವು ದೇವರಿಂದ ಬಂದವೆಂದು ಅವರು ಮನವರಿಕೆ ಹೊಂದಿದಾಗ, ತಮ್ಮ ನಡತೆಯು ಪಾಪವೆಂದು ಅವರು ತಿಳಿಯದಿದ್ದರೂ, ದೇವರಿಂದ ಬರುವ ಗದರಿಕೆಯನ್ನು, ಖಂಡನೆಯನ್ನು ಒಪ್ಪಿಕೊಳ್ಳುವುದು ಅವರ ಕರ್ತವ್ಯ. ಅವರು ತಮ್ಮಆತ್ಮೀಕ ಪರಿಸ್ಥಿತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡಿದ್ದಲ್ಲಿ, ಗದರಿಕೆಯ ಅಗತ್ಯವಾದರೂ ಏನಿತ್ತು? ಅವರು ಅದನ್ನು ತಿಳಿಯದೆ ಇರುವುದರಿಂದ, ದೇವರು ಕರುಣೆಯಿಂದಲೇ ಅವರನ್ನು ಖಂಡಿಸಿ, ಕೃಪೆಯಕಾಲ ಮುಕ್ತಾಯವಾಗುವ ಮೊದಲೇ ಪಶ್ಚಾತ್ತಾಪ ಪಟ್ಟು ಪರಿವರ್ತನೆ ಹೊಂದಲೆಂದು ಗದರಿಸುತ್ತಾನೆ. ದೇವರ ಎಚ್ಚರಿಕೆಯನ್ನು ತಾತ್ಸಾರಮಾಡುವವರು ಆತ್ಮೀಕ ಅಂಧಕಾರದಲ್ಲಿ ಬಿದ್ದು ತಮ್ಮನ್ನು ತಾವೇ ಮೋಸಗೊಳಿಸಿಕೊಳ್ಳುತ್ತಾರೆ. ಆದರೆ ಇದಕ್ಕೆ ಗಮನ ಕೊಡುವವರು ಅಗತ್ಯವಾದ ಕೃಪೆ ಹೊಂದಿಕೊಳ್ಳಲು ತಮ್ಮ ಪಾಪಗಳನ್ನು ಬಿಟ್ಟು, ರಕ್ಷಕನಾದ ಕ್ರಿಸ್ತನು ತಮ್ಮ ಹೃದಯದಲ್ಲಿ ಪ್ರವೇಶಿಸುವಂತೆ ಅದರ ಬಾಗಿಲು ತೆರೆಯುವರು. ದೇವರೊಂದಿಗೆ ನಿಕಟವಾದ ಆತ್ಮೀಯ ಸಂಬಂಧ ಹೊಂದಿರುವವರು, ಆತನು ಮಾತಾಡಿದಾಗ ಆತನ ಸ್ವರವನ್ನು ಗುರುತಿಸುವರು. ಅಂತವರು ದೇವರು ತಮ್ಮ ತಪ್ಪುಗಳನ್ನು ತೋರಿಸಿಕೊಟ್ಟಿದ್ದಕ್ಕಾಗಿ ಆತನಿಗೆ ಕೃತಜ್ಞತೆ ಸಲ್ಲಿಸುವರು.KanCCh 91.2

    ದಾವೀದನು ಬತ್ಷೇಬಳ ವಿಷಯದಲ್ಲಿ ಪಾಪಮಾಡಿದಾಗ, ದೇವರ ಗದರಿಕೆಯನ್ನು ಗೌರವಿಸಿ, ವಿನಮ್ರತೆಯಿಂದಲೂ, ಕುಗ್ಗಿದ ಹೃದಯದಿಂದಲೂ ಉನ್ನತೋನ್ನತನ ಶಿಕ್ಷೆಯನ್ನು ಒಪ್ಪಿಕೊಂಡನು. ಪ್ರವಾದಿಯಾದ ನಾತಾನನು ದಾವೀದನ ಪಾಪಗಳನ್ನು ಎತ್ತಿ ತೋರಿಸಿದಾಗ, ಅವನು ಅದನ್ನು ಒಪ್ಪಿಕೊಂಡನು. ಪ್ರವಾದಿಯ ಬುದ್ಧಿವಾದಗಳನ್ನು ನಮ್ರತೆಯಿಂದ ಒಪ್ಪಿಕೊಂಡು, ದೇವರ ಮುಂದೆ ತನ್ನನ್ನು ತಗ್ಗಿಸಿಕೊಂಡನು. “ಯೆಹೋವನ ಧರ್ಮಶಾಸ್ತ್ರವು ಲೋಪವಿಲ್ಲದ್ದು. ಅದು ಪ್ರಾಣವನ್ನು ಉಜ್ಜೀವಿಸಮಾಡುವಂತದ್ದು” ಎಂದು ಅವನು ಉದ್ಗರಿಸಿದನು (ಕೀರ್ತನೆ 19:7).KanCCh 92.1

    “ತಂದೆಯಿಂದ ಶಿಕ್ಷೆ ಹೊಂದದ ಮಗನೆಲ್ಲಿ? ಮಕ್ಕಳೆಲ್ಲರೂ ಹೊಂದುವ ಶಿಕ್ಷೆ ನಿಮಗುಂಟಾಗದಿದ್ದರೆ, ನೀವು ಹಾದರದಿಂದ ಹುಟ್ಟಿದವರೇ ಹೊರತು, ಪುತ್ರರಲ್ಲ” (ಇಬ್ರಿಯ 12:8). “ನಾನು ಯಾರಾರನ್ನು ಪ್ರೀತಿಸುತ್ತೇನೋ, ಅವರನ್ನು ಗದರಿಸುತ್ತೇನೆ ಮತ್ತು ಶಿಕ್ಷಿಸುತ್ತೇನೆ...” ಎಂದು ಕರ್ತನು ಹೇಳುತ್ತಾನೆ (ಪ್ರಕಟನೆ 3:19). “ಯಾವ ಶಿಕ್ಷೆಯಾದರೂ ತತ್ಕಾಲಕ್ಕೆ ಸಂತೋಷಕರವಾಗಿ ತೋಚದೆ, ದುಃಖಕರವಾಗಿ ತೋಚುತ್ತದೆ; ಆದರೂ ಅದು ತರುವಾಯ ಶಿಕ್ಷೆ ಹೊಂದಿದವರಿಗೆ ನೀತಿಯೆಂಬ ಫಲವನ್ನು ಕೊಟ್ಟು ಮನಸ್ಸಿಗೆ ಸಮಾಧಾನವನ್ನು ಉಂಟುಮಾಡುತ್ತದೆ” (ಇಬ್ರಿಯ 12:10,11). ಶಿಕ್ಷೆಯು ತತ್ಕಾಲದಲ್ಲಿ ಕಹಿ ಎನಿಸಬಹುದು. ಆದರೆ ತಂದೆಯಾದ ದೇವರು ತನ್ನ ಕೋಮಲವಾದ ಪ್ರೀತಿಯಿಂದ “ನಾವು ತನ್ನ ಪರಿಶುದ್ಧತೆಯಲ್ಲಿ ಪಾಲುಗಾರರಾಗಬೇಕೆಂದು ನಮ್ಮ ಹಿತಕ್ಕಾಗಿಯೂ ಶಿಕ್ಷಿಸುತ್ತಾನೆ” (ಇಬ್ರಿಯ 12:10). KanCCh 92.2

    *****