ಸತ್ಯವೇದ ಓದುವವರಿಗೆ ದೈವೀಕ ಬೆಳಕಿನ ವಾಗ್ದಾನ ಮಾಡಲ್ಪಟ್ಟಿದೆ
ಸತ್ಯವೇದದ ಲೇಖಕನಾದ ದೇವರಂತೆಯೇ, ಆತನ ವಾಕ್ಯವೂ ಸಹ ಸಾಧಾರಣ ಮಾನವರಾದ ನಮ್ಮಿಂದ ಎಂದಿಗೂ ಸಂಪೂರ್ಣವಾಗಿ ಗ್ರಹಿಸಿಕೊಳ್ಳಲಾರದಂತ ಹಾಗೂ ವಿವರಿಸಲಾಗದಂತ ರಹಸ್ಯಗಳನ್ನು ಒಳಗೊಂಡಿದೆ. ಇದು ನಮ್ಮ ಮನಸ್ಸುಗಳನ್ನು “... ಅಮರತ್ವವುಳ್ಳವನೂ, ಅಗಮ್ಯವಾದ ಬೆಳಕಿನಲ್ಲಿ ವಾಸ ಮಾಡುವವನೂ...” ಆದ ಸೃಷ್ಟಿಕರ್ತನ ಬಳಿಗೆ ನಡೆಸುತ್ತದೆ. (1 ತಿಮೊಥೆ 6:16) ಆಂಗ್ಲ ಸತ್ಯವೇದದಲ್ಲಿ ಯಾರೂ ಹೋಗಲಾರದಂತ ಬೆಳಕಿನಲ್ಲಿ ವಾಸಿಸುವವನು ಎಂದು ಬರೆದಿದೆ). ಸತ್ಯವೇದವು ಆತನ ಉದ್ದೇಶಗಳನ್ನು ತಿಳಿಯಪಡಿಸುತ್ತದೆ ಮತ್ತು ಸಂಪೂರ್ಣ ಮಾನವಚರಿತ್ರೆಯನ್ನೇ ಇದು ಒಳಗೊಂಡಿದೆ. ದೇವರ ಉದ್ದೇಶಗಳು ಯುಗಯುಗಾಂತರಗಳವರೆಗೂ ನೆರವೇರುತ್ತಲೇ ಇರುತ್ತವೆ. ಮನುಷ್ಯನ ಅಂತ್ಯಸ್ಥಿತಿ ಮತ್ತು ದೇವರ ಸರ್ಕಾರಕ್ಕೆ ಸಂಬಂಧಪಟ್ಟಂತೆ ಪ್ರಾಮುಖ್ಯವಾದ ಹಾಗೂ ಅನಂತವೂ, ಅಪರಿಮಿತವೂ ಆದ ವಿಷಯಗಳ ಬಗ್ಗೆ ಇವು ನಮ್ಮ ಗಮನ ಸೆಳೆಯುತ್ತವೆ. ಈ ಲೋಕಕ್ಕೆ ಪಾಪವು ಹೇಗೆಬಂತು, ಕ್ರಿಸ್ತನ ಮನುಷ್ಯಾವತಾರ, ಪುನರುಜ್ಜೀವನ, ಆತನ ಪುನರುತ್ಥಾನ ಇನ್ನೂ ಮುಂತಾದ ಸತ್ಯವೇದದಲ್ಲಿ ತಿಳಿಸಿರುವ ಅನೇಕ ವಿಷಯಗಳು ಮಾನವರಾದ ನಮ್ಮ ಮನಸ್ಸಿಗೆ ವಿವರಿಸುವುದಕ್ಕಾಗಲಿ ಅಥವಾ ಗ್ರಹಿಸಿಕೊಳ್ಳುವುದಕ್ಕಾಗಲಿ ಸಾಧ್ಯವಾಗದಷ್ಟು ನಿಗೂಢವಾಗಿವೆ. ಆದರೆ ದೇವರ ಸತ್ಯವೇದದಲ್ಲಿ ಅವುಗಳ ದೈವೀಕಸ್ವಭಾವಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಕೊಟ್ಟಿದ್ದಾನೆ. ಆದುದರಿಂದ ಸತ್ಯವೇದದ ಎಲ್ಲಾ ರಹಸ್ಯಗಳನ್ನು ನಾವು ಅರ್ಥಮಾಡಿಕೊಳ್ಳದಿದ್ದರೂ, ದೇವರ ವಾಕ್ಯದ ಬಗ್ಗೆ ನಮ್ಮಲ್ಲಿ ಎಂದಿಗೂ ಸಂದೇಹವಿರಬಾರದು. KanCCh 77.3
ಸೃಷ್ಟಿಮಾಡಲ್ಪಟ್ಟ ನಾವು ದೇವರು ಹಾಗೂ ಆತನ ಕಾರ್ಯಗಳ ಬಗ್ಗೆ ಸಂಪೂರ್ಣ ತಿಳುವಳಿಕೆಹೊಂದಿ ಅರ್ಥಮಾಡಿಕೊಳ್ಳುವ ಮಟ್ಟವನ್ನು ಒಂದುವೇಳೆ ಮುಟ್ಟಲು ಸಾಧ್ಯವಾಗಿದ್ದಲ್ಲಿ, ನಮಗೆ ತಿಳಿಯಬೇಕಾದ ಯಾವುದೇ ಹೊಸಸತ್ಯವಾಗಲಿ ಜ್ಞಾನವಿವೇಕದಲ್ಲಿ ಯಾವುದೇ ಬೆಳವಣಿಗೆಯಾಗಲಿ, ಹೃದಯ ಅಥವಾ ಮನಸ್ಸಿನ ವಿಕಾಸವಾಗಲಿ ಇರುತ್ತಿರಲಿಲ್ಲ. ದೇವರು ಇನ್ನೆಂದಿಗೂ ಸರ್ವೋನ್ನತನೂ, ಸರ್ವಶ್ರೇಷ್ಠನೂ ಆಗಿರಲು ಸಾಧ್ಯವಾಗುತ್ತಿರಲಿಲ್ಲ. ಪರಿಪೂರ್ಣಜ್ಞಾನವನ್ನು ಹೊಂದಿಕೊಂಡ ಮನುಷ್ಯರಲ್ಲಿ ಇನ್ನೆಂದಿಗೂ ಯಾವುದೇ ಬೆಳವಣಿಗೆ ಇರುತ್ತಿರಲಿಲ್ಲ. ಈ ರೀತಿ ಅಲ್ಲದ್ದಕ್ಕಾಗಿ ನಾವು ದೇವರಿಗೆ ಸ್ತೋತ್ರ ಹೇಳಬೇಕು. ದೇವರು ಅನಂತನೂ, ಪರಿಮಿತಿಯಿಲ್ಲದವನೂ ಆಗಿದ್ದಾನೆ ಹಾಗೂ ಆತನು ಸಮಸ್ತ ಜ್ಞಾನವಿವೇಕಗಳ ಮೂಲನೂ ಆದ ಸರ್ವಜ್ಞಾನಿಯಾಗಿದ್ದಾನೆ. ಯುಗ ಯುಗಾಂತರಗಳವರೆಗೂ ಪರಲೋಕದಲ್ಲಿ ಮನುಷ್ಯರು ದೇವರ ಸೃಷ್ಟಿಯ ರಹಸ್ಯಗಳನ್ನೂ ಹುಡುಕುತ್ತಲೇ ಇರುತ್ತಾರೆ ಹಾಗೂ ಕಲಿಯುತ್ತಲೇ ಇರುವರು. ಆದರೂ ದೇವರ ಶಕ್ತಿಸಾಮರ್ಥ್ಯ, ಆತನ ಒಳ್ಳೇತನ ಹಾಗೂ ಜ್ಞಾನ ವಿವೇಕಗಳ ಭಂಡಾರವು ಎಂದಿಗೂ ಮುಗಿದುಹೋಗುವುದಿಲ್ಲ.KanCCh 78.1
ಪವಿತ್ರಾತ್ಮನ ಮಾರ್ಗದರ್ಶನವಿಲ್ಲದಿದ್ದಲ್ಲಿ, ನಾವು ಸತ್ಯವೇದವನು ವಿರೂಪಗೊಳಿಸುತ್ತೇವೆ ಅಥವಾ ಅದನ್ನು ತಪ್ಪಾಗಿ ಅರ್ಥಮಾಡಿಕೊಳ್ಳುತ್ತೇವೆ. ದೇವರವಾಕ್ಯವನ್ನು ಗೌರವಪೂರ್ವಕವಾಗಿಯೂ ಹಾಗೂ ಪ್ರಾರ್ಥನಾಪೂರ್ವಕವಾಗಿಯೂ ಅಧ್ಯಯನ ಮಾಡದಿದ್ದಲ್ಲಿ ಮತ್ತು ನಮ್ಮ ಆಲೋಚನೆಗಳು ಹಾಗೂ ಮನಃಸ್ಥಿತಿಯು ದೇವರ ಮೇಲೆಯೂ, ಆತನ ಚಿತ್ತಕ್ಕೆ ಅನುಗುಣವಾಗಿಯೂ ಇಲ್ಲದಿದ್ದಲ್ಲಿ, ನಮ್ಮ ಮನಸ್ಸು ಸಂಶಯದಿಂದ ತುಂಬಿಕೊಂಡಿರುತ್ತದೆ. ಅಲ್ಲದೆ ಸತ್ಯವೇದ ಹಾಗೂ ಅದರ ಸಿದ್ಧಾಂತಗಳು ಸತ್ಯವಲ್ಲ ಎಂಬ ಅನುಮಾನ ಉಂಟಾಗುತ್ತದೆ. ಆಗ ವೈರಿಯಾದ ಸೈತಾನನು ನಮ್ಮ ಆಲೋಚನೆಗಳನ್ನು ನಿಯಂತ್ರಿಸುತ್ತಾನೆ ಮತ್ತು ತಪ್ಪಾದರೀತಿಯಲ್ಲಿ ದೇವರವಾಕ್ಯವನ್ನು ವ್ಯಾಖ್ಯಾನಿಸುವಂತೆ ಸಲಹೆ ನೀಡುತ್ತಾನೆ. KanCCh 78.2