ಅಧ್ಯಾಯ-13 — ಸಭೆಗೆ ಯೇಸುವಿನ ವಿಷಯದ ಸಾಕ್ಷಿಗಳು
ಈ ಲೋಕದ ಅಂತ್ಯವು ಸಮೀಪಿಸುತ್ತಿದೆ ಮತ್ತು ಜಗತ್ತಿಗೆ ಕೊನೆಯ ಎಚ್ಚರಿಕೆಯ ಸಂದೇಶನೀಡುವ ಕಾರ್ಯ ವಿಸ್ತಾರಗೊಳ್ಳುತ್ತಿದೆ. ಇಂತಹ ಸಮಯದಲ್ಲಿ ವರ್ತಮಾನದ ಈ ಸತ್ಯವನ್ನು ಅಂಗೀಕರಿಸಿಕೊಳ್ಳುವವರು ಯೇಸುವಿನ ವಿಷಯವಾದ ಸಾಕ್ಷಿಗಳ (Testimonies) ಸಹಜಸ್ವರೂಪ ಮತ್ತು ಪ್ರಭಾವವನ್ನು ಅರ್ಥಮಾಡಿಕೊಳ್ಳುವುದುಮುಖ್ಯವಾಗಿದೆ. ದೇವರು ತನ್ನ ಮಹಾಕೃಪೆಯಿಂದ ಯೇಸುವಿನ ವಿಷಯವಾದಸಾಕ್ಷಿಯನ್ನು ಮೂರನೇದೂತನ ವರ್ತಮಾನಕ್ಕೆ ಅದರ ಆರಂಭದಿಂದಲೇ ಸೇರಿಸಿದ್ದಾನೆ.KanCCh 82.1
ಪುರಾತನಕಾಲದಲ್ಲಿ ದೇವರು ತನ್ನ ಪ್ರವಾದಿಗಳು ಹಾಗೂ ಅಪೋಸ್ತಲರ ಮೂಲಕಮನುಷ್ಯರೊಂದಿಗೆ ಮಾಡಿದ್ದಾನೆ. ಇಂದಿನ ದಿನಗಳಲ್ಲಿ ಆತನು ತನ್ನ ಆತ್ಮನ ಸಾಕ್ಷಿಗಳಮೂಲಕ ನಮ್ಮೊಂದಿಗೆ ಮಾತಾಡುತ್ತಾನೆ. ಹಿಂದೆಂದೂ ತನ್ನ ಜನರಿಗೆ ಬೋಧಿಸದಂತರೀತಿಯಲ್ಲಿ, ಇಂದು ಅವರಿಗೆ ತನ್ನ ಚಿತ್ತವನ್ನು ಹಾಗೂ ಅದನ್ನು ಹೇಗೆ ಅನುಸರಿಸಬೇಕೆಂಬವಿಷಯದಲ್ಲಿ ದೇವರು ಹೆಚ್ಚಿನ ಆಸಕ್ತಿ ಹಾಗೂ ಶ್ರದ್ಧೆಯಿಂದ ನಮಗೆ ಬೋಧಿಸುತ್ತಾನೆ.KanCCh 82.2
ಸೆವೆಂತ್ ಡೇ ಅಡ್ವೆಂಟಿಸ್ಟರಲ್ಲಿ ಪಾಪ ಮಾಡುತ್ತಿರುವವರಿಗೆ ಎಚ್ಚರಿಕೆ ಮತ್ತು ಗದರಿಕೆಕೊಡಲ್ಪಟ್ಟಿಲ್ಲ. ಯಾಕೆಂದರೆ ಇತರ ಸಭೆಗಳಲ್ಲಿ ಕ್ರೈಸ್ತರೆನಿಸಿಕೊಳ್ಳುವವರ ಜೀವನಕ್ಕಿಂತಲೂಇವರ ಜೀವನವು ಹೆಚ್ಚು ಖಂಡನೆಗೆ ಅರ್ಹವಾಗಿದೆ. ಅಲ್ಲದೆ ಅಡ್ವೆಂಟಿಸ್ಟರಿಗೆ ಪ್ರವಾದನಾಆತ್ಮದಮೂಲಕ ಹೆಚ್ಚು ಬೆಳಕು ಕೊಡಲ್ಪಟ್ಟಿರುವುದರಿಂದಲೂ ಹಾಗೂ ದೇವರಿಂದ ವಿಶೇಷವಾಗಿಆರಿಸಲ್ಪಟ್ಟ ಜನರಾಗಿದ್ದು, ಆತನ ಆಜ್ಞೆಗಳು ಅವರ ಹೃದಯಗಳಲ್ಲಿ ಬರೆದಿರುವುದರಿಂದಲೂಅವರಿಗೆ ಎಚ್ಚರಿಕೆ ಮತ್ತು ಖಂಡನೆಯು ಕೊಡಲ್ಪಟ್ಟಿಲ್ಲ.KanCCh 82.3
ಕ್ರಿ.ಶ. 1871ನೇ ಇಸವಿಯಲ್ಲಿ ಶ್ರೀಮತಿ ವೈಟಮ್ಮನವರಿಗೆ ಒಂದು ದೇವದರ್ಶನ ಕೊಡಲ್ಪಟ್ಟಿತು. ಅದರಲ್ಲಿ ಕೆಲವು ಅಡ್ವೆಂಟಿಸ್ಟರ ತಪ್ಪುಗಳು, ಪಾಪಗಳು ಮತ್ತು ಅಪಾಯಗಳನ್ನು ವಿಶೇಷವಾಗಿ ಬರವಣಿಗೆ ಹಾಗೂ ಸಂದೇಶಗಳ ಮೂಲಕ ತಿಳಿಸಬೇಕೆಂದು ದೇವರು ಅವರಿಗೆ ಆದೇಶ ನೀಡಿದನು. ಇದರಿಂದ ಅವರನ್ನು ಬುದ್ಧಿವಾದ, ಗದರಿಕೆಯ ಮೂಲಕ ಎಚ್ಚರಿಸಲಾಯಿತು. ಅವರು ಮಾಡಿದ ಪಾಪಗಳನ್ನು ಬೇರೆ ಅಡ್ವೆಂಟಿಸ್ಟರು ತಮ್ಮ ಜೀವನದಲ್ಲಿ ಮಾಡದಂತೆ ತಮ್ಮ ಹೃದಯಗಳನ್ನು ಪರಿಶೋಧಿಸಿಕೊಳ್ಳಬೇಕೆಂದು ಶ್ರೀಮತಿ ವೈಟಮ್ಮನವರಿಗೆ ತಿಳಿಸಲಾಯಿತು. ಇತರರಿಗೆ ತಿಳಿಸಿದ ಎಚ್ಚರಿಕೆಯ ಮಾತುಗಳು ತಮಗೆ ಅನ್ವಯವಾಗುವುದಿಲ್ಲವೆಂದು ನಾವು ತಿಳಿಯಬಾರದು, ಬದಲಾಗಿ ಅವು ವಿಶೇಷವಾಗಿ ನಮಗೂ ಕೊಡಲ್ಪಟ್ಟಿವೆ ಎಂದು ಅರಿತು ಅದಕ್ಕೆ ತಕ್ಕಂತೆ ನಮ್ಮ ಮಾರ್ಗಗಳನ್ನು ಸರಿಪಡಿಸಿಕೊಂಡು ನಡೆಯಬೇಕು.KanCCh 82.4
ಕ್ರಿಸ್ತನ ಹಿಂಬಾಲಕರೆಂದು ಹೇಳಿಕೊಳ್ಳುವ ಎಲ್ಲರ ನಂಬಿಕೆಯನ್ನು ಪರೀಕ್ಷಿಸಲು ದೇವರು ಉದ್ದೇಶಿಸಿದ್ದಾನೆ. ತಮ್ಮ ಕರ್ತವ್ಯವೇನೆಂದು ತಿಳಿದುಕೊಳ್ಳಲು ಮನಃಪೂರ್ವಕವಾಗಿ ಬಯಸುವವರ ಪ್ರಾರ್ಥನೆಗಳ ಹಿಂದಿರುವ ಪ್ರಾಮಾಣಿಕತೆಯನ್ನು ಆತನು ಪರೀಕ್ಷಿಸುತ್ತಾನೆ. ಆಗ ಆತನು ಅವರ ಕರ್ತವ್ಯ ಏನೆಂದು ನೇರವಾಗಿ ತಿಳಿಸುತ್ತಾನೆ. ಅಂತವರ ಹೃದಯಗಳ ಬಯಕೆಯನ್ನು ಅಭಿವೃದ್ಧಿಗೊಳಿಸಲು ಅವರಿಗೆ ಸಾಕಷ್ಟು ಅವಕಾಶಕೊಡುತ್ತಾನೆ.KanCCh 83.1
ತನ್ನ ಆಜ್ಞೆಗಳನ್ನು ಕೈಕೊಂಡು ನಡೆಯುವವರನ್ನು ದೇವರು ಖಂಡಿಸುತ್ತಾನೆ ಹಾಗೂ ತಿದ್ದುಪಾಟಿಗೂ ಒಳಪಡಿಸುತ್ತಾನೆ. ಅವರ ಪಾಪದೋಷಗಳನ್ನು ತೊಲಗಿಸಿ ಅವರು ತನ್ನ ಭಯಭಕ್ತಿಯಲ್ಲಿ ಪರಿಪೂರ್ಣಪರಿಶುದ್ಧತೆ ಹೊಂದಲೆಂಬ ಉದ್ದೇಶದಿಂದ ದೇವರು ಅವರ ಪಾಪಗಳನ್ನು ಹೊರಪಡಿಸುತ್ತಾನೆ. ದೇವರು ತನ್ನ ಆಜ್ಞೆಗಳನ್ನು ಕೈಕೊಂಡು ನಡೆಯುವವರು ಶೋಧಿಸಲ್ಪಟ್ಟು ಪರಿಶುದ್ಧರಾಗಿ, ಕೊನೆಯಲ್ಲಿ ತನ್ನ ರಾಜ್ಯಕ್ಕೆ ಬಾಧ್ಯಸ್ಥರಾಗಬೇಕೆಂಬ ಉದ್ದೇಶದಿಂದ ಅವರನ್ನು ಗದರಿಸುತ್ತಾನೆ, ಖಂಡಿಸುತ್ತಾನೆ ಹಾಗೂ ತಿದ್ದುಪಾಟಿಗೂ ಒಳಪಡಿಸುತ್ತಾನೆ.KanCCh 83.2