Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
 • Results
 • Related
 • Featured
No results found for: "".
 • Weighted Relevancy
 • Content Sequence
 • Relevancy
 • Earliest First
 • Latest First

  ಮಕ್ಕಳ ಅವಶ್ಯಕತೆಯನ್ನು ನಿರ್ಲಕ್ಷಿಸಬಾರದು

  ದೈವಭಕ್ತಿಯುಳ್ಳ ತಂದೆತಾಯಿಯರು ತಮ್ಮ ಮಕ್ಕಳ ಮನೋಭಾವ ಮತ್ತು ಪ್ರವೃತ್ತಿಯನ್ನು ಎಚ್ಚರಿಕೆಯಿಂದ ಅರ್ಥಮಾಡಿಕೊಂಡು ಅವರ ಅಗತ್ಯಗಳನ್ನು ಪೂರೈಸಬೇಕು. ಕೆಲವು ತಂದೆತಾಯಿಯರು ತಮ್ಮ ಮಕ್ಕಳ ಶಾರೀರಿಕವಾದ ಎಲ್ಲಾ ಅಗತ್ಯಗಳನ್ನು ಪೂರೈಸುತ್ತಾರೆ ಹಾಗೂ ಅವರು ಕಾಯಿಲೆ ಬಿದ್ದಾಗ ಬಹಳ ಕರುಣೆಯಿಂದ ಆರೈಕೆಮಾಡಿ ತಮ್ಮ ಕರ್ತವ್ಯ ಇಲ್ಲಿಗೆ ಮುಗಿಯಿತೆಂದು ತಿಳಿಯುತ್ತಾರೆ. ಇಲ್ಲಿ ಅವರು ತಪ್ಪು ಮಾಡುತ್ತಾರೆ. ಅವರ ಕೆಲಸವು ಆಗ ತಾನೇ ಆರಂಭವಾಗುವುದು. ಮಕ್ಕಳ ಅಗತ್ಯಗಳಿಗೆ ಹೆಚ್ಚು ಗಮನ ಕೊಡಬೇಕು. ಗಾಯಗೊಂಡ ಮನಸ್ಸನ್ನು ಗುಣಪಡಿಸಲು ಬೇಕಾದ ಸರಿಯಾದ ಪರಿಹಾರ ಕಂಡುಹಿಡಿಯಲು ಪೋಷಕರು ಹೆಚ್ಚಿನ ಕೌಶಲ್ಯ ಹಾಗೂ ತಿಳುವಳಿಕೆ ಹೊಂದಿರಬೇಕು.KanCCh 237.1

  ದೊಡ್ಡವರ ಮನಸ್ಸಿಗೆ ನೋವಾಗುವಂತೆಯೇ ಮಕ್ಕಳ ಮನಸ್ಸಿಗೂ ಸಹ ನೋವಾಗುತ್ತದೆ ಹಾಗೂ ದೊಡ್ಡವರಷ್ಟೇ ಅವರೂ ಸಹ ಸಾಕಷ್ಟು ಕಠಿಣವಾದ ಕಷ್ಟಶೋಧನೆಗಳನ್ನು ಸಹಿಸಬೇಕಾಗುತ್ತದೆ. ತಂದೆತಾಯಿಯರು ಎಲ್ಲಾ ಸಮಯಗಳಲ್ಲಿಯೂ ಒಂದೇರೀತಿಯ ಭಾವನೆ ಹೊಂದಿರುವುದಿಲ್ಲ. ಅವರ ಮನಸ್ಸು ಸಾಕಷ್ಟು ಬಾರಿ ಗೊಂದಲಕ್ಕೊಳಗಾಗುತ್ತದೆ. ಅವರು ತಪ್ಪಾದ ಭಾವನೆ ಹಾಗೂ ಅಭಿಪ್ರಾಯ ಹೊಂದಿ ಶ್ರಮಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಸೈತಾನನು ಅವರೊಂದಿಗೆ ಸೆಣಸಾಡುತ್ತಾನೆ. ಆಗ ತಂದೆತಾಯಿಯರು ಅವನ ಶೋಧನೆಯಲ್ಲಿ ಬಿದ್ದು ಹೋಗುತ್ತಾರೆ. ಅವರು ಮಕ್ಕಳಿಗೆ ಸಿಟ್ಟನ್ನೆಬ್ಬಿಸುವ ರೀತಿಯಲ್ಲಿ ಮಾತಾಡಿ ಅವರನ್ನು ಕೆರಳಿಸುತ್ತಾರೆ. ಅಲ್ಲದೆ ತಂದೆತಾಯಿಯರು ಕೆಲವು ಸಾರಿ ದರ್ಪದಿಂದ ಮಕ್ಕಳ ಮೇಲೆ ಅಧಿಕಾರ ಚಲಾಯಿಸುತ್ತಾರೆ. ಇದು ಮಕ್ಕಳ ಮೇಲೆಯೂ ಪರಿಣಾಮ ಬೀರುವುದಲ್ಲದೆ, ಅವರೂ ಸಹ ತಮ್ಮ ತಂದೆತಾಯಿಯರನ್ನು ಅನುಕರಣೆ ಮಾಡಲು ಕಾರಣವಾಗುತ್ತದೆ. ತಂದೆತಾಯಿಯರು ಮಕ್ಕಳಿಗೆ ಯಾವುದೇ ಸಹಾಯ ಮಾಡಲು ಅಸಹಾಯಕರಾಗಿರುತ್ತಾರೆ. ಯಾಕೆಂದರೆ ಇಂತಹ ಸಮಸ್ಯೆಗೆ ಅವರೇ ಕಾರಣ. ಕೆಲವು ಸಮಯದಲ್ಲಿ ಎಲ್ಲವೂ ಕೈಮೀರಿ ಹೋದಂತೆ ತೋರುತ್ತದೆ. ಮನೆಯಲ್ಲಿ ತಂದೆತಾಯಿಯರು ಮಾತ್ರವಲ್ಲದೆ, ಮಕ್ಕಳೂ ಸಹ ದುಗುಡಕ್ಕೊಳಗಾಗಿರುವುದರಿಂದ ಕುಟುಂಬದಲ್ಲಿ ಶಾಂತಿ, ಸಮಾಧಾನ, ಸಂತೋಷ ಇರುವುದಿಲ್ಲ. ಮಕ್ಕಳು ತಮ್ಮ ಮಾತು ಕೇಳದೆ ಅವಿಧೇಯತೆ ತೋರುತ್ತಾರೆಂದು ಪೋಷಕರು ಅವರನ್ನು ದೂಷಿಸಿ, ಇಂತಹ ಕೆಟ್ಟ ಮಕ್ಕಳು ಜಗತ್ತಿನಲ್ಲಿ ಎಲ್ಲಿಯೂ ಇಲ್ಲವೆಂದು ಎಲ್ಲರ ಮುಂದೆ ಹೇಳಿಕೊಳ್ಳುತ್ತಾರೆ. ಆದರೆ ಪರಿಸ್ಥಿತಿಗೆ ತಾವೇ ಕಾರಣ ಎಂಬುದನ್ನು ಅವರು ಮರೆಯುತ್ತಾರೆ.KanCCh 237.2

  ಕೆಲವು ತಂದೆತಾಯಿಯರು ತಾಳ್ಮೆ ಕಳೆದುಕೊಂಡು ಮಕ್ಕಳ ಮೇಲೆ ಕೂಗಾಡುತ್ತಾರೆ. ಮಕ್ಕಳಿಗೆ ಯಾವುದೇ ಕೆಲಸವನ್ನು ಮಾಡುವಂತೆ ಮೃದು ಹಾಗೂ ಕರುಣೆಯ ಮಾತುಗಳಿಂದ ಹೇಳುವುದಕ್ಕೆ ಬದಲಾಗಿ ದರ್ಪದಿಂದ ಬಯ್ಯುತ್ತಾ ಆದೇಶ ನೀಡುತ್ತಾರೆ. ಅಲ್ಲದೆ ಮಕ್ಕಳ ತಪ್ಪು ಏನೂ ಇಲ್ಲದಿದ್ದರೂ, ಅವರನ್ನು ಗದರಿಸಿ ಖಂಡಿಸುತ್ತಾರೆ. ಇದರಿಂದ ಮಕ್ಕಳ ಸಂತೋಷ ಹಾಳಾಗುತ್ತದೆ. ಅವರು ತಂದೆ ತಾಯಿಯರ ಮಾತಿಗೆ ಪ್ರೀತಿಯಿಂದಲ್ಲ: ಬದಲಾಗಿ ಭಯದಿಂದ ವಿಧೇಯತೆ ತೋರಿ ಅವರು ಹೇಳಿದ ಕೆಲಸ ಮಾಡುತ್ತಾರೆ. ಮನಃಪೂರ್ವಕವಾಗಿ ಕೆಲಸ ಮಾಡುವುದಿಲ್ಲವಾದ್ದರಿಂದ ಅದೊಂದು ಗುಲಾಮಗಿರಿಯೇ ಹೊರತು ಬೇರೇನಿಲ್ಲ. ಇದರಿಂದ ತಂದೆತಾಯಿಯರು ಹೇಳಿರುವ ಎಲ್ಲಾ ಸಲಹೆ ಸೂಚನೆಗಳನ್ನು ಅನುಸರಿಸಲು ಮಕ್ಕಳು ಮರೆಯುತ್ತಾರೆ. ಆಗ ನಿಮ್ಮ ಮುಂಗೋಪ ಇನ್ನೂ ಹೆಚ್ಚಾಗಿ ಪರಿಸ್ಥಿತಿ ಇನ್ನೂ ಬಿಗಡಾಯಿಸುತ್ತದೆ. ತಂದೆತಾಯಿಯರು ಮಕ್ಕಳ ಮಾಡುವ ಎಲ್ಲಾ ಕೆಲಸಗಳಲ್ಲಿಯೂ ತಪ್ಪು ಕಂಡುಹಿಡಿಯುತ್ತಾರೆ ಹಾಗೂ ಅವರ ಮುಂದೆ ಎಲ್ಲವನ್ನೂ ಎತ್ತಿಆಡುತ್ತಾರೆ.KanCCh 238.1

  ಮಕ್ಕಳ ಮುಂದೆ ತಂದೆತಾಯಿಯರಾದ ನೀವು ಹುಬ್ಬುಗಂಟಿಕ್ಕಿ ಕೊಂಡಿರಬಾರದು. ಒಂದುವೇಳೆ ಅವರು ತಪ್ಪು ಮಾಡಿ ಅದಕ್ಕೆ ಪಶ್ಚಾತ್ತಾಪಪಟ್ಟು ಕ್ಷಮೆ ಕೇಳಿದಾಗ, ಪರಲೋಕದಲ್ಲಿರುವ ನಿಮ್ಮ ತಂದೆಯು ನಿಮ್ಮನ್ನು ಕ್ಷಮಿಸಿದಂತೆಯೇ ನೀವೂಸಹ ಅವರನ್ನು ಕ್ಷಮಿಸಿರಿ. ಮೃದುವಾದ ಮತ್ತು ಕರುಣೆಯ ಮಾತುಗಳಿಂದ ಅವರಿಗೆ ಬುದ್ಧಿವಾದ ಹೇಳಿ, ಅವರ ಹೃದಯದಲ್ಲಿ ಸ್ಥಾನಗಳಿಸಿಕೊಳ್ಳಿ, ಅದು ಮಕ್ಕಳಿಗೆ ನಿರ್ಧಾರಾತ್ಮಕವಾದ ಸಮಯ. ನಿಮ್ಮಿಂದ ಅವರನ್ನು ದೂರಮಾಡುವಂತ ಅನೇಕ ಶೋಧನೆಗಳು ಅವರಿಗೆ ಬರಲಿವೆ. ಅದನ್ನು ನೀವು ಪ್ರತಿರೋಧಿಸಬೇಕು. ಮಕ್ಕಳ ವಿಶ್ವಾಸ ಗಳಿಸಿಕೊಳ್ಳಿರಿ. ಅವರು ತಮ್ಮ ಕಷ್ಟ ಸಂಕಟ, ಸಂತೋಷಗಳನ್ನು ನಿಮ್ಮ ಮುಂದೆ ಹೇಳಿಕೊಳ್ಳಲಿ. ಈ ರೀತಿಯಲ್ಲಿ ಅವರನ್ನು ಪ್ರೋತ್ಸಾಯಿಸುವುದರ ಮೂಲಕ ಸೈತಾನನು ಅವರಿಗೆ ಒಡ್ಡಿದ ಬಲೆಯಿಂದ ಅವರನ್ನು ರಕ್ಷಿಸಬಹುದು. ನೀವೂಸಹ ತಂದೆ ತಾಯಿಯರಾಗುವುದಕ್ಕೆ ಮೊದಲು ಮಕ್ಕಳಾಗಿದ್ದಿರಿ ಎಂಬುದನ್ನು ನೆನಪಿನಲ್ಲಿಡಬೇಕು. ಅವರನ್ನು ನಿಷ್ಟುರದಿಂದ ನೋಡಬಾರದು. ಮಕ್ಕಳು ಎಲ್ಲದರಲ್ಲಿಯೂ ಪರಿಪೂರ್ಣರಾಗಿರಬೇಕೆಂದು ಎಂದಿಗೂ ನಿರೀಕ್ಷಿಸಬಾರದು. ಇದರಿಂದ ಅವರು ನಿಮ್ಮ ಮೇಲೆ ವಿಶ್ವಾಸ ಕಳೆದುಕೊಳ್ಳುವುದಲ್ಲದೆ, ಇತರರ ಕೆಟ್ಟಪ್ರಭಾವಕ್ಕೆ ಒಳಗಾಗುವ ಸಂಭವ ಹೆಚ್ಚು.KanCCh 238.2