Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ನಮ್ಮಲ್ಲಿ ಸಂದೇಹ ಹುಟ್ಟಿಸುವುದೇ ಸೈತಾನನ ಉದ್ದೇಶ

    ಅನೇಕ ಪ್ರಕರಣಗಳಲ್ಲಿ ಯೇಸುವಿನ ವಿಷಯವಾದ ಈ ಪ್ರವಾದನಾ ಆತ್ಮದ ಸಾಕ್ಷಿಯನ್ನು ಜನರು ಪೂರ್ಣವಾಗಿ ಅಂಗೀಕರಿಸಿಕೊಂಡಿದ್ದಾರೆ. ಇದರ ಪರಿಣಾಮವಾಗಿ ಪಾಪ ಮತ್ತು ತಮ್ಮ ಮನೋಭಿಲಾಷೆಗಳನ್ನು ಪೂರೈಸಿಕೊಳ್ಳುವುದನ್ನು ಜನರು ನಿಲ್ಲಿಸಿ ದೇವರು ಕೊಟ್ಟ ಬೆಳಕಿಗೆ ಅನುಗುಣವಾದ ಧಾರ್ಮಿಕ ಸುಧಾರಣೆಯು ಅವರಲ್ಲಿ ಕಂಡುಬಂತು. ಬೇರೆ ಪ್ರಕರಣಗಳಲ್ಲಿ ಜನರು ತಮ್ಮ ಸುಖಭೋಗಗಳನ್ನು ತ್ಯಜಿಸಲಿಲ್ಲ. ಅಲ್ಲದೆ ಈ ಸಾಕ್ಷಿಯನ್ನು ಅವರು ತಿರಸ್ಕರಿಸಿದಲ್ಲದೆ, ಅದಕ್ಕೆ ಕೆಲವಾರು ಸುಳ್ಳುನೆಪಗಳನ್ನೂ ಸಹ ಹೇಳಿದರು. ಸಾಕ್ಷಿಯನ್ನು ನಿರಾಕರಿಸುವುದಕ್ಕೆ ನಿಜವಾದ ಕಾರಣ ಅವರು ತಿಳಿಸಲಿಲ್ಲ. ಹಾನಿಕರವಾದ ಈ ಅಭ್ಯಾಸಗಳನ್ನು ಬಿಡುವುದಕ್ಕೆ ನೈತಿಕ ಧೈರ್ಯ ಅವರಲ್ಲಿರಲಿಲ್ಲ. ದೇವರಾತ್ಮನಿಂದ ಬಲಹೊಂದುವ ಮತ್ತು ನಿಯಂತ್ರಿಸಲ್ಪಡುವ ಇಚ್ಛಾಶಕ್ತಿಯ ಕೊರತೆ ಅವರಲ್ಲಿತ್ತು.KanCCh 86.1

    ದೇವರು ಕೊಟ್ಟ ಯೇಸುವಿನ ವಿಷಯವಾದ ಸಾಕ್ಷಿಯನ್ನು ಜನರು ಸಂದೇಹ ಪಡುವಂತೆ ಮಾಡುವುದಕ್ಕೂ ಮತ್ತು ಅಡೆತಡೆ ಒಡ್ಡುವುದಕ್ಕೂ ಸೈತಾನನಲ್ಲಿ ಸಾಮಥ್ರ್ಯವಿದೆ. ಪ್ರವಾದನಾವರದ ಈ ಸಾಕ್ಷಿಯಲ್ಲಿ ಅಪನಂಬಿಕೆ ವ್ಯಕ್ತಪಡಿಸುವುದು ಮತ್ತು ಅದನ್ನು ಪ್ರಶ್ನಿಸಿ ಕ್ಷುಲ್ಲಕವಾದ ಆಕ್ಷೇಪಣೆ ಮಾಡುವುದು ತಮ್ಮ ಬುದ್ಧಿವಂತಿಕೆಯ ಲಕ್ಷಣವೆಂದು ಅನೇಕರು ತಿಳಿದುಕೊಳ್ಳುತ್ತಾರೆ. ಸಂದೇಹಪಡಬೇಕೆಂದು ಬಯಸುವವರಿಗೆ ವಿಫುಲವಾದ ಅವಕಾಶಗಳಿವೆ. ಅಪನಂಬಿಕೆ, ಸಂದೇಹ ಬಂದಾಗ, ದೇವರು ಅದನ್ನು ನಿವಾರಣೆಮಾಡಲು ಬೇಕಾದ ಸಾಕಷ್ಟು ಸಾಕ್ಷ್ಯಾಧಾರ ಕೊಡುತ್ತಾನೆ. ಅವುಗಳನ್ನು ನಮ್ರತೆಯಿಂದಲೂ, ಎಚ್ಚರಿಕೆಯಿಂದಲೂ ಪರಿಶೋಧಿಸಿ, ಸಾಕ್ಷ್ಯಾಧಾರಗಳ ಆಧಾರದಮೇಲೆ ಒಂದು ನಿರ್ಣಯಕ್ಕೆ ಬರಬೇಕು. ನಿಷ್ಪಕ್ಷಪಾತ ಹಾಗೂ ನಿಷ್ಕಪಟ ಮನಸ್ಸಿನವರು ಯೇಸುವಿನ ವಿಷಯವಾದ ಸಾಕ್ಷಿಯನ್ನು ನಂಬಲು ದೇವರು ಸಾಕಷ್ಟು ಸಾಕ್ಷ್ಯಾಧಾರ ಕೊಡುತ್ತಾನೆ. ಆದರೆ ಈ ಸಾಕ್ಷ್ಯಾಧಾರಗಳನ್ನು ತಮ್ಮ ಇತಿಮಿತಿಯುಳ್ಳ ಬುದ್ಧಿಯಿಂದ ಸರಳವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗದವರ ಮನಸ್ಸಿನಲ್ಲಿ ಅಪನಂಬಿಕೆ ಮತ್ತು ಪ್ರಶ್ನಿಸುವಂತ ಸಂದೇಹ ಉಳಿಯುತ್ತದೆ. ಅಂತವರು ಹಡಗು ಒಡೆದು ಹೋದಂತ ನಂಬಿಕೆ ಉಳ್ಳವರಾಗಿದ್ದಾರೆ.KanCCh 86.2

    ದೇವರ ಜನರು ಶ್ರೀಮತಿ ವೈಟಮ್ಮನವರ ಮೂಲಕ ದೇವರು ಕೊಟ್ಟಿರುವ ಯೇಸುವಿನ ವಿಷಯವಾದ ಸಾಕ್ಷಿಯ ಪ್ರವಾದನಾಆತ್ಮನಲ್ಲಿ ನಂಬಿಕೆಯನ್ನು ಬಲಹೀನಗೊಳಿಸುವುದು ಸೈತಾನನ ಯೋಜನೆಯಾಗಿದೆ. ಹೇಗೆ ದಾಳಿ ಮಾಡಬೇಕೆಂದು ಅವನಿಗೆ ಚೆನ್ನಾಗಿ ತಿಳಿದಿದೆ. ದೇವರಸೇವೆಯಲ್ಲಿ ಮುಖ್ಯಸ್ಥರಾಗಿರುವವರ ವಿರುದ್ಧ ಹೊಟ್ಟೆಕಿಚ್ಚು ಮತ್ತು ಅತೃಪ್ತಿ ಹೊಂದುವಂತೆ ಸೈತಾನನು ಜನರನ್ನು ಪ್ರಚೋದಿಸುತ್ತಾನೆ.KanCCh 86.3

    ಅನಂತರ ಜನರು ಪವಿತ್ರಾತ್ಮನ ವರಗಳನ್ನು ಪ್ರಶ್ನಿಸುತ್ತಾರೆ. ಆದರೆ ಅದಕ್ಕೆ ಬಲವಾದ ಕಾರಣಗಳಿಲ್ಲ. ದೇವದರ್ಶನದ ಮೂಲಕ ಕೊಡಲ್ಪಟ್ಟ ಸಲಹಾ ಸೂಚನೆಗಳನ್ನು ಅವರು ಅಸಡ್ಡೆ ಮಾಡುತ್ತಾರೆ. ಅನಂತರ ನಮ್ಮ ಸೆವೆಂತ್ ಡೇ ಅಡ್ವೆಂಟಿಸ್ಟ್ ಸಭೆಯ ಮೂಲಭೂತ ನಂಬಿಕೆಗಳು ಹಾಗೂ ಪರಿಶುದ್ಧ ಸತ್ಯವೇದದ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಾರೆ. ಇದು ಅವರನ್ನು ನರಕಕ್ಕೆ ನಡೆಸುತ್ತದೆ. ಮೊದಲು ದೇವರ ವಿಷಯವಾದ ಸಾಕ್ಷಿಯಾದ ಪ್ರವಾದನಾ ಆತ್ಮವನ್ನು ನಾವು ನಂಬಿ, ಅನಂತರ ಸಂದೇಹದಿಂದ ನಂಬಿಕೆಯನ್ನು ಬಿಟ್ಟಲ್ಲಿ ವಂಚನೆಗೊಳಗಾದ ಇವರು ಇಲ್ಲಿಗೆ ನಿಲ್ಲಿಸುವುದಿಲ್ಲವೆಂದು ಸೈತಾನನಿಗೆ ಚೆನ್ನಾಗಿ ಗೊತ್ತು. ಆಗ ಮುಕ್ತವಾಗಿ ಅದರ ವಿರುದ್ಧ ದಂಗೆಯೇಳುವಂತೆ ಮಾಡಲು ಸೈತಾನನು ಶಕ್ತಿಮೀರಿ ಪ್ರಯತ್ನಿಸುತ್ತಾನೆ. ಇದಕ್ಕೆ ಯಾವುದೇ ಪರಿಹಾರವಿಲ್ಲ, ಅಂತವರು ಕೊನೆಯಲ್ಲಿ ನಾಶವಾಗುತ್ತಾರೆ. ದೇವರಸೇವೆಗೆ ಸಂಬಂಧಪಟ್ಟಂತೆ ಅವರು ಸಂದೇಹ ಹಾಗೂ ಅಪನಂಬಿಕೆ ಹೊಂದಿದಾಗ, ಹೊಟ್ಟೆಕಿಚ್ಚು ಮತ್ತು ಅಸಹನೆಯ ಭಾವನೆಗಳು ಅವರಲ್ಲಿ ಬೆಳೆದಾಗ, ಸಂಪೂರ್ಣ ವಂಚನೆಗೆ ಒಳಗಾಗಲು ಅವರು ತಮ್ಮನ್ನು ಸಿದ್ಧತೆ ಮಾಡಿಕೊಳ್ಳುತ್ತಾರೆ. ತಮ್ಮ ತಪ್ಪುಗಳನ್ನು ಎತ್ತಿತೋರಿಸುವ ಹಾಗೂ ತಮ್ಮ ಪಾಪಗಳನ್ನು ಗದರಿಸುವವರ ವಿರುದ್ಧವಾಗಿ ಅವರು ನಿಂತು, ದ್ವೇಷಭಾವನೆ ಬೆಳೆಸಿಕೊಳ್ಳುತ್ತಾರೆ. ಬಹಿರಂಗವಾಗಿ ಶ್ರೀಮತಿ ವೈಟಮ್ಮನವರು ಪ್ರವಾದನಾಆತ್ಮನ ಮೂಲಕ ಬರೆದ ಪುಸ್ತಕಗಳನ್ನು ತಿರಸ್ಕರಿಸುವುದು ಮತ್ತು ಸಂದೇಹ ವ್ಯಕ್ತಪಡಿಸುವವರು ಮಾತ್ರವಲ್ಲ, ಆ ಬೆಳಕನ್ನು ತಾತ್ಸಾರ ಮಾಡುವುದೂ ಸಹ ಅವರ ನಾಶಕ್ಕೆ ಕಾರಣವಾಗುತ್ತದೆ.KanCCh 87.1

    ಯೇಸುವಿನವಿಷಯವಾದ ಸಾಕ್ಷಿಯಾದ ಪ್ರವಾದನಾಆತ್ಮದಲ್ಲಿ ನಾವು ವಿಶ್ವಾಸ ಕಳೆದುಕೊಂಡಲ್ಲಿ, ಸತ್ಯವೇದದ ಸತ್ಯದಿಂದ ನಾವು ದೂರ ಹೋಗುತ್ತೇವೆ. ಅನೇಕರು ಇದನ್ನು ಪ್ರಶ್ನಿಸುವ ಮತ್ತು ಅದರಲ್ಲಿ ಸಂಶಯ ವ್ಯಕ್ತಪಡಿಸುವ ಮನೋಭಾವ ಬೆಳೆಸಿಕೊಳ್ಳುತ್ತಾರೆ. ಇಂತವರನ್ನು ಶ್ರೀಮತಿ ವೈಟಮ್ಮನವರು ಅಪಾರ ವೇದನೆಯಿಂದ ಎಚ್ಚರಿಸುತ್ತಾರೆ. ಆದರೆ ಅವರ ಎಚ್ಚರಿಕೆಗೆ ಎಷ್ಟು ಮಂದಿ ಗಮನ ಕೊಡುತ್ತಾರೆ?KanCCh 87.2