Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಯುಗದ ಸಮಾಪ್ತಿಯವರೆಗೂ ಪವಿತ್ರಾತ್ಮನು ನಮ್ಮೊಡನಿರುವನು

    ಯುಗದ ಸಮಾಪ್ತಿಯವರೆಗೂ ಪರಿಶುದ್ಧಾತ್ಮನ ದೈವೀಕ ಪ್ರಭಾವವು ತನ್ನ ಅನುಯಾಯಿಗಳೊಂದಿಗೆ ಇರುವುದೆಂದು ಕ್ರಿಸ್ತನು ಹೇಳಿದ್ದಾನೆ. ಆದರೆ ಈ ವಾಗ್ದಾನಕ್ಕೆ ಸಲ್ಲಬೇಕಾದ ಗೌರವವನ್ನು ನಾವು ಕೊಡುತ್ತಿಲ್ಲ, ಈ ಕಾರಣದಿಂದ ಅದರ ನೆರವೇರುವಿಕೆಯು ನಮಗೆ ಕಂಡುಬರುತ್ತಿಲ್ಲ. ಪವಿತ್ರಾತ್ಮನ ಸುರಿಸುವಿಕೆಯ ವಾಗ್ದಾನವನ್ನು ಹೆಚ್ಚಾಗಿ ನಾವು ಯೋಚಿಸುತ್ತಿಲ್ಲ. ಇದರ ಪರಿಣಾಮವಾಗಿ ವಾಕ್ಯದ ಬರಗಾಲ, ಆತ್ಮೀಕಅಂಧಕಾರ, ಆತ್ಮೀಕಅವನತಿ ಹಾಗೂ ನಿತ್ಯಮರಣ ಉಂಟಾಗುತ್ತದೆ. ಕ್ಷುಲ್ಲಕವಾದ ಲೌಕಿಕ ವಿಷಯಗಳಲ್ಲಿ ನಮ್ಮ ಮನಸ್ಸು ಮುಳುಗಿ ಹೋಗಿರುವುದರಿಂದ ಸಭೆಯ ಆತ್ಮೀಕ ಬೆಳವಣಿಗೆಗೆ ಅಗತ್ಯವಾದ ದೈವೀಕಶಕ್ತಿ ಹಾಗೂ ಹೇರಳವಾದ ಆಶೀರ್ವಾದದ ಕೊರತೆ ಉಂಟಾಗಿದೆ.KanCCh 96.1

    ಪವಿತ್ರಾತ್ಮನಿಲ್ಲದಿದ್ದಲ್ಲಿ ಸುವಾರ್ತಾಸೇವೆಯು ಬಲಹೀನವಾಗುತ್ತದೆ. ಶಿಕ್ಷಣ, ಪ್ರತಿಭೆ (ತಲಾಂತು), ನಿರರ್ಗಳ ಮಾತುಗಾರಿಕೆ, ಸಹಜವಾಗಿಬಂದ ಅಥವಾ ಗಳಿಸಿಕೊಂಡ ಅರ್ಹತೆ, ಯೋಗ್ಯತೆಗಳು ನಮ್ಮಲ್ಲಿರಬಹುದು. ಆದರೆ ಪರಿಶುದ್ಧಾತ್ಮನ ಪ್ರಸನ್ನತೆ ಇಲ್ಲದಿದ್ದಲ್ಲಿ ನಾವು ಸಾರುವ ಸುವಾರ್ತೆಯು ಹೃದಯದಲ್ಲಿಯೂ ಪರಿಣಾಮ ಬೀರುವುದಿಲ್ಲ ಮತ್ತು ಯಾವ ಪಾಪಿಯೂ ಕ್ರಿಸ್ತನನ್ನು ಅಂಗೀಕರಿಸುವುದಿಲ್ಲ. ಇದಕ್ಕೆ ವಿರುದ್ಧವಾಗಿ ನಾವು ಕ್ರಿಸ್ತನೊಂದಿಗೆ ನೆಲೆಗೊಂಡು, ಪವಿತ್ರಾತ್ಮನ ವರಗಳನ್ನು ಹೊಂದಿಕೊಂಡಿದ್ದಲ್ಲಿ. ಆತನ ಅತ್ಯಂತ ಅಶಿಕ್ಷಿತನೂ, ಅಜ್ಞಾನಿಯೂ ಆದ ಶಿಷ್ಯನು ಜನರ ಹೃದಯಗಳಲ್ಲಿ ಪರಿವರ್ತನೆ ತರುವ ಸಾಮರ್ಥ್ಯಹೊಂದಿರುವನು. ದೇವರು ಈ ವಿಶ್ವಕ್ಕೆ ಅತ್ಯುನ್ನತ ಪ್ರಭಾವ ಬೀರಬಲ್ಲ ಸಾಧನವನ್ನಾಗಿ ಅವರನ್ನು ಮಾಡುವನು.KanCCh 96.2

    ದೇವರಮೇಲಿದ್ದ ಆಸಕ್ತಿ ಹಾಗೂ ಅತ್ಯುತ್ಸಾಹದಿಂದ ಶಿಷ್ಯರು ಮಹಾಶಕ್ತಿಯಿಂದ ಸತ್ಯಕ್ಕೆ ಸಾಕ್ಷಿಗಳಾದರು. ಅದೇರೀತಿಯಾದ ಉತ್ಸಾಹವು ವಿಮೋಚಕನಾದ ಕ್ರಿಸ್ತನ ಪ್ರೀತಿ ಹಾಗೂ ಆತನ ಶಿಲುಬೆಯಮೇಲಿನ ತ್ಯಾಗವನ್ನು ಇತರರಿಗೆ ತಿಳಿಸುವಂತ ದೃಢನಿರ್ಧಾರ ಮಾಡಲು ನಮ್ಮ ಹೃದಯಗಳನ್ನೂ ಸಹ ಪ್ರೇರಿಸಬೇಕಲ್ಲವೇ? ಮನಃಪೂರ್ವಕವಾಗಿ ಯಥಾರ್ಥತೆಯಿಂದ ಮಾಡಿದ ಪ್ರಾರ್ಥನೆಗೆ ಉತ್ತರವಾಗಿ ಇಂದು ದೇವರಾತ್ಮನು ಇಳಿದುಬಂದು ತನ್ನ ಸೇವೆ ಮಾಡಲು ಅವರನ್ನು ತನ್ನ ಶಕ್ತಿಯಿಂದ ತುಂಬಿಸಬೇಕಲ್ಲವೇ? ಹಾಗಿದ್ದ ಮೆಲೆ ಕ್ರೈಸ್ತಸಭೆಯು ಯಾಕೆ ಅಷ್ಟೊಂದು ಬಲಹೀನವೂ, ಉತ್ಸಾಹರಹಿತವೂ, ನಿರ್ಜೀವವೂ ಆಗಿದೆ?KanCCh 96.3

    ಪವಿತ್ರಾತ್ಮನು ನಮ್ಮ ಸಭೆಯ ಸದಸ್ಯರ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡಲ್ಲಿ, ಅವರ ಮಾತು, ಸ್ವಭಾವ, ಸೇವೆ ಮತ್ತು ಆತ್ಮೀಕ ಜೀವಿತದಲ್ಲಿ ಉನ್ನತಮಟ್ಟವು ಕಂಡುಬರುವುದು. ಸಭಿಕರು ಜೀವಜಲದಿಂದ ಚೈತನ್ಯ ಹೊಂದುವರು. ಕ್ರಿಸ್ತನೆಂಬ ಯಜಮಾನನ ಕೆಳಗೆ ಸೇವೆಮಾಡುವವರು ತಮ್ಮ ನಡೆನುಡಿ ಕ್ರಿಯೆಗಳಲ್ಲಿ ಕ್ರಿಸ್ತನನ್ನು ಪ್ರತಿಫಲಿಸುವರು. ಅಲ್ಲದೆ ಕ್ರಿಸ್ತನಸುವಾರ್ತೆಯನ್ನು ಲೋಕದ ಕಟ್ಟಕಡೆಯವರೆಗೂ ಸಾರಬೇಕಾದ ಕಾರ್ಯವನ್ನು ಶೀಘ್ರವಾಗಿ ಮುಕ್ತಾಯ ಮಾಡಲು ಪರಸ್ಪರ ಉತ್ತೇಜಿಸುವರು. ಅವರಲ್ಲಿ ಐಕ್ಯತೆ ಮತ್ತು ಪ್ರೀತಿಯು ಹೆಚ್ಚಾಗುವುದು. ಇದರಿಂದ ಅವರು ಪಾಪಿಗಳನ್ನು ರಕ್ಷಿಸಲು ದೇವರು ತನ್ನ ಮಗನನ್ನು ಪ್ರಾಣಕೊಡಲು ಈ ಲೋಕಕ್ಕೆ ಕಳುಹಿಸಿದನು ಎಂಬ ಸಾಕ್ಷಿಯನ್ನು ಸಾರುವರು. ದೈವೀಕಸತ್ಯವು ಉನ್ನತಸ್ಥಾನಕ್ಕೇರಿಸಲ್ಪಡುವುದು ಮತ್ತು ಈ ಸತ್ಯವು ಉರಿಯುವ ದೀಪದಂತೆ ಹೊಳೆದಾಗ, ಅದನ್ನು ನಾವು ಇನ್ನೂ ಹೆಚ್ಚು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳುವೆವು.KanCCh 96.4

    ದೇವಜನರು ಯಾವ ಪ್ರಯತ್ನವನ್ನೂ ಮಾಡದೆ, ಪವಿತ್ರಾತ್ಮನು ನಮ್ಮ ಪಾಪಗಳನ್ನು ತೆಗೆದುಹಾಕಿ, ತಪ್ಪುಗಳನ್ನು ಸರಿಪಡಿಸುವನೆಂದು ಕಾದುಕೊಂಡಿದ್ದಲ್ಲಿ ಹಾಗೂ ನಮ್ಮ ಆತ್ಮ ಪ್ರಾಣಗಳ ಅಶುದ್ಧತೆಯನ್ನು ಶುದ್ಧಿಗೊಳಿಸುವನೆಂದು ಆತನ ಮೇಲೆ ಆತುಕೊಂಡು ಮೂರನೇ ದೂತನ ವರ್ತಮಾನ ಸಾರಲು ತಮ್ಮನ್ನು ಯೋಗ್ಯರನ್ನಾಗಿ ಮಾಡುತ್ತಾನೆಂದು ತಿಳಿದುಕೊಂಡಿದ್ದಲ್ಲಿ, ಅವರಲ್ಲಿ ಪವಿತ್ರಾತ್ಮನ ಶಕ್ತಿಯ ಕೊರತೆ ಕಂಡುಬರುವುದು. ದೇವರು ಹೇಳಿರುವಂತೆ ತಮ್ಮ ಅಶುದ್ಧತೆಯನ್ನು ಪರಿಹರಿಸಿಕೊಂಡು, ದೇವರ ಭಯಭಕ್ತಿಯಲ್ಲಿ ಪರಿಪೂರ್ಣ ಪರಿಶುದ್ಧರಾಗಿ ತಮ್ಮನ್ನು ಆತನ ಸೇವೆಗಾಗಿ ಸಿದ್ಧಪಡಿಸಿಕೊಂಡಿರುವವರಿಗೆ ಮಾತ್ರ - ದೇವರ ಶಕ್ತಿಯು ಕೊಡಲ್ಪಡುವುದು ಅಥವಾ ಪವಿತ್ರಾತ್ಮನ ವರವು ಸುರಿಸಲ್ಪಡುವುದು. KanCCh 97.1

    *****