Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
 • Results
 • Related
 • Featured
No results found for: "".
 • Weighted Relevancy
 • Content Sequence
 • Relevancy
 • Earliest First
 • Latest First

  ಬುದ್ಧಿವಾದ ನಿರಾಕರಿಸಿದವರ ವಿಷಯದಲ್ಲಿ ಕ್ರೈಸ್ತಸಭೆಯ ಕರ್ತವ್ಯ

  ಒಬ್ಬ ವ್ಯಕ್ತಿಯು ತಪ್ಪು ಮಾಡಿದಾಗ, ಅವನನ್ನು ಸರಿಪಡಿಸಲು ಸಭೆಯು ಕ್ರಿಸ್ತನುಮತ್ತಾಯ 18ನೇ ಅಧ್ಯಾಯದಲ್ಲಿ ತಿಳಿಸಿರುವ ಸಲಹೆಗಳನ್ನು ಪ್ರಾಮಾಣಿಕತೆಯಿಂದಅನುಸರಿಸಬೇಕು. ಅದಕ್ಕೆ ಮೊದಲು ಅವನನ್ನು ಸಭೆಯ ಸದಸ್ಯತ್ವದಿಂದತೆಗೆದುಹಾಕಬೇಕೆಂದು ಯಾವ ಅಧಿಕಾರಿಯೂ ಸಲಹೆ ನೀಡುವುದಾಗಲಿ, ಅಥವಾಸಭಾಪಾಲನಾಸಮಿತಿಯು ಶಿಫಾರಸು ನೀಡುವುದಾಗಲಿ ಅಥವಾ ಬಹುಮತದಿಂದಸಭೆಯು ನಿರ್ಧರಿಸುವುದಾಗಲಿ ಮಾಡಬಾರದು. ಮತ್ತಾಯ 18:15-17ನೇ ವಚನಗಳಲ್ಲಿಕ್ರಿಸ್ತನು ತಿಳಿಸಿರುವ ಸಲಹಾಸೂಚನೆಗಳನ್ನು ತಪ್ಪು ಮಾಡಿದವನ ವಿಷಯದಲ್ಲಿ ಅನುಸರಿಸಿದಾಗ,ಸಭೆಯು ದೇವರ ಮುಂದೆ ನಿರಪರಾಧಿಯಾಗುತ್ತದೆ. ಪಾಪವು ಏನೆಂದು ತಿಳಿಯಪಡಿಸಿಅದು ಹೆಚ್ಚಾಗಿ ಹರಡದಂತೆ, ಅದನ್ನು ತೆಗೆದುಹಾಕಬೇಕು. ಸಭೆಯು ಕ್ರಿಸ್ತನ ನೀತಿಯೆಂಬವಸ್ತ್ರಧರಿಸಿಕೊಂಡು ನಿಷ್ಕಳಂಕ ಕನೈಯಂತೆ ದೇವರ ಮುಂದೆ ನಿಲ್ಲುವುದಕ್ಕಾಗಿ, ಸಭೆಯ ಪರಿಶುದ್ಧತೆಯನ್ನು ಕಾಪಾಡಬೇಕು.KanCCh 326.1

  ಪಾಪ ಮಾಡಿದವನು ಪಶ್ಚಾತ್ತಾಪಪಟ್ಟು ಕ್ರಿಸ್ತನ ಶಿಕ್ಷೆಗೆ (ಅಂದರೆ ಸಭಾಪಾಲನಾಸಮಿತಿ ತೆಗೆದುಕೊಳ್ಳುವ ಕ್ರಮಕ್ಕೆ) ಒಪ್ಪಿಕೊಂಡಲ್ಲಿ, ಅವನಿಗೆ ಮತ್ತೊಂದು ಅವಕಾಶನೀಡಬೇಕು. ಅವನು ಸಭೆ ಬಿಟ್ಟುಹೋದರೂ, ಅವನು ಪಶ್ಚಾತ್ತಾಪಪಟ್ಟು ಸಭೆಗೆ ಬರುವಂತೆದೇವರಸೇವಕರು ಪ್ರಾಮಾಣಿಕವಾದ ಪ್ರಯತ್ನ ಮಾಡಬೇಕು. ಅವನು ಮಾಡಿದ ಪಾಪವುಎಷ್ಟೇ ದೊಡ್ಡದಾಗಿರಲಿ, ಅವನು ಪವಿತ್ರಾತ್ಮನ ಮಾತಿಗೆ ಕಿವಿಗೊಟ್ಟು, ತನ್ನ ಪಾಪಗಳನ್ನುಒಪ್ಪಿಕೊಂಡು ಅರಿಕೆ ಮಾಡಿ, ಪಶ್ಚಾತ್ತಾಪ ಪಡುತ್ತಿದ್ದಾನೆಂದು ತಿಳಿದುಬಂದಾಗ, ಅವನನ್ನುಸಭೆಯು ಕ್ಷಮಿಸಿ, ತಿರುಗಿ ಸಭಾಸದಸ್ಯನನ್ನಾಗಿ ಸೇರಿಸಿಕೊಳ್ಳಬೇಕು. ಸಭಾಪಾಲನಾ ಸಮಿತಿಯಸದಸ್ಯರು ಒಂದು ವೇಳೆ ನಾವು ತಪ್ಪು ಮಾಡಿ ಅವನ ಸ್ಥಾನದಲ್ಲಿದ್ದರೆ, ತಮ್ಮನ್ನು ಸಭೆಯುಯಾವರೀತಿ ನಡೆಸಿಕೊಳ್ಳಬೇಕೆಂದು ಅಪೇಕ್ಷಿಸುತ್ತಿದ್ದಾರೋ, ಅದೇ ರೀತಿ ತಪ್ಪು ಮಾಡಿದಸಹೋದರನ ವಿಷಯದಲ್ಲಿಯೂ ನಡೆದುಕೊಳ್ಳಬೇಕು. ಅವನನ್ನು ಸರಿಯಾದ ಮಾರ್ಗದಲ್ಲಿನಡೆಯುವಂತೆ ಉತ್ತೇಜಿಸಬೇಕು.KanCCh 326.2

  “ಭೂಲೋಕದಲ್ಲಿ ನೀವು ಏನೇನು ಕಟ್ಟುತ್ತೀರೋ, ಅದು ಪರಲೋಕದಲ್ಲಿಯೂಕಟ್ಟಿರುವುದು; ಮತ್ತು ಭೂಲೋಕದಲ್ಲಿ ನೀವು ಏನನ್ನು ಬಿಚ್ಚುತ್ತೀರೋ, ಅದುಪರಲೋಕದಲ್ಲಿಯೂ ಬಿಚ್ಚಿರುವುದು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ” ಎಂದುಕ್ರಿಸ್ತನು ಹೇಳುತ್ತಾನೆ (ಮತ್ತಾಯ 18:18).KanCCh 326.3

  ಕ್ರಿಸ್ತನು ತಿಳಿಸಿದ ಈ ಮಾತು ಎಲ್ಲಾ ಕಾಲಕ್ಕೂ ಅನ್ವಯಿಸುತ್ತದೆ. ಕ್ರಿಸ್ತನ ಸ್ಥಾನದಲ್ಲಿಕ್ರಮತೆಗೆದುಕೊಳ್ಳುವ ಅಧಿಕಾರ ಸಭೆಗೆ ಕೊಡಲ್ಪಟ್ಟಿದೆ. ತನ್ನ ಜನರಲ್ಲಿ ಶಿಸ್ತು ಕ್ರಮವನ್ನುಕಾಪಾಡಲು ಇದು ದೇವರು ಕೊಟ್ಟ ಸಾಧನವಾಗಿದೆ. ಸಭೆಯ ಕಟ್ಟುಪಾಡು, ಆತ್ಮಿಕ ಬೆಳವಣಿಗೆ ಹಾಗೂ ಪರಿಶುದ್ಧತೆಗೆ ಸಂಬಂಧಪಟ್ಟ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲುದೇವರು ಕ್ರೈಸ್ತಸಭೆಗೆ ಅಧಿಕಾರ ಕೊಟ್ಟಿದ್ದಾನೆ. ಅಯೋಗ್ಯರು ಹಾಗೂ ಕ್ರೈಸ್ತಧರ್ಮಕ್ಕೆವಿರುದ್ಧವಾದ ಸ್ವಭಾವದಿಂದ ಸತ್ಯಕ್ಕೆ ಅಗೌರವ ತರುವಂತವರನ್ನು ಸಭೆಯಿಂದತೆಗೆದುಹಾಕುವ ಜವಾಬ್ದಾರಿ ಕ್ರೈಸ್ತ ಸಭೆಗೆ ಕೊಡಲ್ಪಟ್ಟಿದೆ. ದೇವರ ವಾಕ್ಯದಲ್ಲಿ ಕೊಡಲ್ಪಟ್ಟಿರುವಸಲಹಾ ಸೂಚನೆಗಳ ಪ್ರಕಾರ ಸಭೆಯು ತೆಗೆದುಕೊಳ್ಳುವ ಯಾವುದೇ ಕ್ರಮಕ್ಕೂ, ಪರಲೋಕದಒಪ್ಪಿಗೆ ಇರುತ್ತದೆ. ಗಂಭೀರವಾದ ಸಮಸ್ಯೆಯ ಪ್ರಕರಣಗಳು ಪರಿಹಾರಕ್ಕಾಗಿ ಸಭೆಯಮುಂದೆ ಬರುತ್ತವೆ. ದೇವಜನರಿಗೆ ಮಾರ್ಗದರ್ಶನ ನೀಡಲು ದೇವರಿಂದ ಪ್ರತಿಷ್ಠಿಸಲ್ಪಟ್ಟಿರುವಬೋಧಕರು, ತೆಗೆದುಕೊಂಡ ಕ್ರಮದ ಬಗ್ಗೆ ಸಭೆಗೆ ತಿಳಿಸಿ ಹೇಳಬೇಕು. ಇದರಿಂದಸಭಾಪಾಲನಾ ಸಮಿತಿಯು ತೆಗೆದುಕೊಂಡ ನಿರ್ಣಯದಲ್ಲಿ ಎಲ್ಲರ ಸಹಮತವಿರುವುದು.KanCCh 326.4

  ತಪ್ಪು ಮಾಡಿದವರ ವಿಷಯದಲ್ಲಿ ತನ್ನ ಹಿಂಬಾಲಕರು ಬಹಳ ಎಚ್ಚರಿಕೆಯಿಂದನಡೆದುಕೊಳ್ಳಬೇಕೆಂದು ದೇವರು ಬಯಸುತ್ತಾನೆ. ಅವರನ್ನು ದೇವರ ವಾಕ್ಯದಿಂದಉತ್ತೇಜಿಸಿ ಬಲಪಡಿಸಬೇಕು, ಹಾಗೂ ಮನಸ್ಸಿನ ನೋವನ್ನು ಹೋಗಲಾಡಿಸಬೇಕು.ಆದರೆ ಅಂತವರನ್ನು ಸರಿದಾರಿಗೆ ತರುವುದಕ್ಕೆ ಸಭೆಯು ಕ್ರಮ ತೆಗೆದುಕೊಳ್ಳುವುದಕ್ಕೆನಿರ್ಲಕ್ಷ್ಯ ತೋರಬಾರದು. ಈ ಲೋಕದ ಸಭೆಯ ದೇವಜನರು ಪರಲೋಕದಲ್ಲಿರುವಸಭೆಯೊಂದಿಗೆ ಅನ್ನೋನ್ಯತೆ ಹೊಂದುವುದಕ್ಕಾಗಿ ಸಿದ್ಧತೆ ಮಾಡಿಕೊಳ್ಳಬೇಕು. ಕ್ರಿಸ್ತನೊಂದಿಗೆಇಲ್ಲಿ ಸಾಮರಸ್ಯ, ಐಕ್ಯತೆಯಿಂದ ಜೀವಿಸುವವರು, ವಿಮೋಚಿಸಲ್ಪಟ್ಟ ದೇವಜನರೊಂದಿಗೆಪರಲೋಕದಲ್ಲಿಯೂ ಯುಗಯುಗಾಂತರಗಳವರೆಗೂ ಜೀವಿಸುವ ನಿರೀಕ್ಷೆಹೊಂದಿರಬಹುದು.KanCCh 327.1