Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ತಾಯಿಯ ಕಾರ್ಯದ ಪಾವಿತ್ರ್ಯತೆ

    ದೇವರು ಆದಿಯಲ್ಲಿಯೇ ಹೆಂಡತಿಯು ಗಂಡನೊಂದಿಗೆ ಸರಿಸಮಾನಳಾಗಿರುವಂತೆ ರೂಪಿಸಿರುವುದರಿಂದ, ಆ ಸ್ಥಾನದಲ್ಲಿ ಆಕೆಯು ತನ್ನ ಕಾರ್ಯನಿರ್ವಹಿಸಬೇಕು. ಹೆಸರಿಗೆ ಮಾತ್ರವಲ್ಲ, ಬದಲಾಗಿ ಆ ಪದಕ್ಕೆ ಎಲ್ಲಾ ವಿಧದಲ್ಲಿಯೂ ಯೋಗ್ಯರಾಗಿರುವಂತ ತಾಯಂದಿರ ಅಗತ್ಯ ಜಗತ್ತಿಗಿದೆ. ಮಹಿಳೆಯರ ವಿಶಿಷ್ಟವಾದ ಕರ್ತವ್ಯಗಳು ಪುರುಷರಿಗಿಂತಲೂ ಹೆಚ್ಚು ಪಾವಿತ್ರ್ಯವೂ, ಪರಿಶುದ್ಧವೂ ಆಗಿದೆಯೆಂದು ಧೈರ್ಯವಾಗಿ ಹೇಳಬಹುದು. ಸ್ತ್ರೀ ತನ್ನ ಕೆಲಸದ ಪಾವಿತ್ರ್ಯತೆಯನ್ನು ಅರಿತುಕೊಂಡು, ದೇವರ ಭಯ ಮತ್ತು ಬಲದಿಂದ ಜೀವಮಾನ ಪರ್ಯಂತರವಾದ ತನ್ನ ಸೇವೆಯನ್ನು ನಿರ್ವಹಿಸಬೇಕು. ಆಕೆಯು ತನ್ನ ಮಕ್ಕಳನ್ನು ಈ ಲೋಕದಲ್ಲಿ ಉಪಯುಕ್ತರನ್ನಾಗಿ ಮಾತ್ರವಲ್ಲದೆ, ಮುಂದೆ ಬರಲಿರುವ ಪರಲೋಕಕ್ಕೆ ಯೋಗ್ಯರನ್ನಾಗಿ ಮಾಡುವಂತ ಶಿಕ್ಷಣ ಕೊಡಬೇಕು.KanCCh 163.2

    ಹೆಂಡತಿಯೂ, ತಾಯಿಯೂ ಆದ ಮಹಿಳೆ ತನ್ನ ಶಕ್ತಿ ಸಾಮರ್ಥ್ಯಗಳನ್ನು ಉಪಯೋಗಿಸದೆ, ಸಂಪೂರ್ಣವಾಗಿ ತನ್ನ ಗಂಡನ ಮೇಲೆ ಆತುಕೊಳ್ಳಬಾರದು. ಆಕೆಯು ತನ್ನ ಸ್ವತಂತ್ರ ವ್ಯಕ್ತಿತ್ವವನ್ನು ಕಾಪಾಡಿಕೊಳ್ಳಬೇಕು. ತಾನು ತನ್ನ ಗಂಡನಿಗೆ ಸರಿಸಮಾನವಾಗಿರುವೆನೆಂದು ಹೆಂಡತಿಯು ಅರಿತುಕೊಂಡು, ಆಕೆಯು ತನ್ನ ಕರ್ತವ್ಯವನ್ನು ಹಾಗೂ ಪುರುಷನು ತನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಹೆಂಡತಿಯು ತನ್ನ ಮಕ್ಕಳನ್ನು ಎಲ್ಲಾ ವಿಧದಲ್ಲಿಯೂ ಬೆಳೆಸುವ ಕಾರ್ಯ ಶ್ರೇಷ್ಠವೂ ಹಾಗೂ ಉನ್ನತವೂ ಆಗಿದೆ.KanCCh 163.3

    ಸಿಂಹಾಸನದಲ್ಲಿ ಕುಳಿತಿರುವ ರಾಜನಿಗೆ ತಾಯಿಗಿಂತಲೂ ಉನ್ನತವಾದ ಕಾರ್ಯವಿರುವುದಿಲ್ಲ. ತಾಯಿ ತನ್ನ ಕುಟುಂಬದ ರಾಣಿಯಾಗಿದ್ದಾಳೆ. ತನ್ನ ಮಕ್ಕಳು ಉನ್ನತವಾದ ನಿತ್ಯಜೀವಕ್ಕೆ ಬಾಧ್ಯರಾಗಿರುವಂತೆ ಅವರ ಗುಣಸ್ವಭಾವ ರೂಪಿಸುವಂತೆ ಮಾಡುವ ಸಾಮರ್ಥ್ಯ ಆಕೆಗಿದೆ. ಈ ಕಾರ್ಯದ ಮೂಲಕ ಅವಳು ಮಾಡುವ ಈ ದೇವರ ಸೇವೆ ದೇವದೂತರ ಸೇವೆಗಿಂತಲೂ ಉನ್ನತವಾಗಿದೆ. ತನ್ನ ಕರ್ತವ್ಯದಶ್ರೇಷ್ಠತೆಯನ್ನು ತಾಯಿ ಅರಿತುಕೊಂಡಾಗ, ಅವಳಿಗೆ ಧೈರ್ಯವುಂಟಾಗುವುದು. ಆಕೆಯು ನನ್ನ ಕರ್ತವ್ಯದ ಮೌಲ್ಯವನ್ನು ಮನವರಿಕೆ ಮಾಡಿಕೊಂಡು, ಸೈತಾನನ ಶೋಧನೆಗಳನ್ನು ಎದುರಿಸುವುದಕ್ಕೆ ದೇವರು ಕೊಡುವ ಆಯುಧಗಳನ್ನು ಧರಿಸಿಕೊಳ್ಳಲಿ. ತಾಯಿ ಮಾಡುವ ಕಾರ್ಯವು ಈ ಸಮಯಕ್ಕೆ ಮಾತ್ರವಲ್ಲದೆ, ನಿತ್ಯತ್ವಕ್ಕೂ ಫಲಕೊಡುವುದು.KanCCh 163.4

    ಪುರುಷನು ಹೊರಗೆ ಕೆಲಸ ಮಾಡುತ್ತಿದ್ದು, ಹೆಂಡತಿಯು ಮನೆಯಲ್ಲಿ ಮಕ್ಕಳ ಲಾಲನೆ ಪಾಲನೆ ಮಾಡುತ್ತಿದ್ದಲ್ಲಿ, ಆಕೆಯು ಹೆಂಡತಿ ಮತ್ತು ತಾಯಿಯಾಗಿ ಬಹಳ ಶ್ರೇಷ್ಠವಾದ ಹಾಗೂ ಪ್ರಾಮುಖ್ಯವಾದ ಕಾರ್ಯನಿರ್ವಹಿಸುತ್ತಾಳೆ. ಆಕೆ ತನ್ನ ಗಂಡನ ಸ್ಥಾನದಲ್ಲಿದ್ದು ಮಕ್ಕಳಿಗೆ ತಂದೆಯೂ ಆಗಿರುತ್ತಾಳೆ. ಮನೆಯಲ್ಲಿ ಕೆಲಸ ಮಾಡುವ ಮಹಿಳೆಯರು ಹೊರಗೆ ದುಡಿಯುವ ಗಂಡನಿಗಿಂತ ಹೆಚ್ಚಾಗಿ ಮನೆಯ ಭಾರ ಗೊತ್ತಿರುವುದರಿಂದ ಉದ್ವೇಗಕ್ಕೆ ಬೇಗನೆ ಒಳಗಾಗುತ್ತಾಳೆ. ಮನೆಯಲ್ಲಿ ಕೆಲಸ ಮಾಡುವ ಹೆಂಡತಿಯ ಕಾರ್ಯವು ಬಹಳ ಗೌರವವಾದದ್ದು ಹಾಗೂ ಪ್ರಾಮುಖ್ಯವಾದದ್ದು ಆಗಿದೆ. ಹೊರಗೆ ದುಡಿಯುವ ಗಂಡನು ಇತರರಿಂದ ಗೌರವ ಪಡೆದುಕೊಳ್ಳಬಹುದು. ಆದರೆ ಮನೆಯಲ್ಲಿ ಶ್ರಮಿಸುವ ಹೆಂಡತಿಗೆ ಇಲ್ಲಿ ಯಾವ ಹೊಗಳಿಕೆಯೂ ದೊರೆಯುವುದಿಲ್ಲ. ಆದರೆ ಆಕೆ ತನ್ನ ಕುಟುಂಬಕ್ಕಾಗಿ ಶಕ್ತಿಮೀರಿ ಆಸಕ್ತಿಯಿಂದ ದುಡಿದು, ಮಕ್ಕಳ ಗುಣನಡತೆಯನ್ನು ಕ್ರಿಸ್ತನ ಮಾದರಿಯಲ್ಲಿ ರೂಪಿಸಲು ಪ್ರಯತ್ನಿಸುವಾಗ, ಅದನ್ನು ದಾಖಲಿಸುವ ದೇವದೂತನು ಆಕೆಯ ಹೆಸರನ್ನು ಜಗತ್ತಿನಲ್ಲಿ ದೇವರ ಸೇವೆಮಾಡಿದ ಸೇವಕರಲ್ಲಿ ಅತ್ಯಂತ ಶ್ರೇಷ್ಠಳು ಎಂದು ಬರೆಯುತ್ತಾನೆ. ದೇವರು ಮನುಷ್ಯರಂತೆ ಸಂಕುಚಿತ ದೃಷ್ಟಿಯಿಂದ ಆಕೆಯ ಕಾರ್ಯವನ್ನು ನೋಡುವುದಿಲ್ಲ.KanCCh 164.1

    ಜಗತ್ತಿನಲ್ಲಿ ಭ್ರಷ್ಟಗೊಳಿಸುವ ವಿಷಯಗಳು, ವಸ್ತುಗಳು ತುಂಬಿಕೊಂಡಿವೆ. ಆಧುನಿಕ ಫ್ಯಾಷನ್ ಮತ್ತು ಸಂಪ್ರದಾಯ, ಆಚರಣೆಗಳು ಯೌವನಸ್ಥರ ಮೇಲೆ ಬಲವಾದ ಪರಿಣಾಮ ಬೀರುತ್ತವೆ. ಒಂದು ವೇಳೆ ಕೈಸ್ತಳಾದ ತಾಯಿ ತನ್ನ ಮಕ್ಕಳನ್ನು ದೇವರ ಭಯಭಕ್ತಿಯಲ್ಲಿ ಬೆಳೆಯುವಂತೆ ಮಾರ್ಗದರ್ಶನ, ಸಲಹೆ ನೀಡುವುದರಲ್ಲಿ ವಿಫಲಳಾದರೆ, ಆಕೆಯ ಮಕ್ಕಳು ಸಹಜವಾಗಿಯೇ ಒಳ್ಳೆಯದನ್ನು ಬಿಟ್ಟು ಕೆಟ್ಟ ದಾರಿಯನ್ನು ಆರಿಸಿಕೊಳ್ಳುತ್ತಾರೆ. ಪ್ರತಿಯೊಬ್ಬ ತಾಯಿ ದೇವರಲ್ಲಿ “ನನ್ನ ಮಗುವನ್ನು ನಿಮ್ಮ ಮಾರ್ಗದಲ್ಲಿ ಬೆಳೆಸಲು ನನಗೆ ತಿಳುವಳಿಕೆ ಕೊಡು, ಮತ್ತು ಅವರಿಗೆ ನಾವೇನು ಮಾಡಬೇಕು?” ಎಂದು ಬೇಡಿಕೊಳ್ಳಬೇಕು. ದೇವರು ತನ್ನ ಪರಿಶುದ್ಧ ಗ್ರಂಥದಲ್ಲಿ ಕೊಟ್ಟಿರುವ ಸಲಹೆ, ಸೂಚನೆಗಳಿಗೆ ತಾಯಿ ಮೊದಲು ಗಮನಕೊಡಲಿ. ಅನಂತರ ಅಗತ್ಯಕ್ಕೂ ಹಾಗೂ ಸಂದರ್ಭಕ್ಕೆ ತಕ್ಕಂತೆ ಆಕೆಗೆ ವಿವೇಕ ಕೊಡಲ್ಪಡುವುದು.KanCCh 164.2

    ನನ್ನ ಸಮಯವು ಅತ್ಯಮೂಲ್ಯವಾದದ್ದೆಂದು ಪ್ರತಿಯೊಬ್ಬ ತಾಯಿ ಭಾವಿಸಿಕೊಳ್ಳಲಿ. ಆಕೆಯ ಕಾರ್ಯ ನ್ಯಾಯತೀರ್ಪಿನ ಗಂಭೀರ ದಿನದಲ್ಲಿ ಪರೀಕ್ಷೆಗೊಳಲ್ಪಡುವುದು. ಆಗ ತಮ್ಮ ಮಕ್ಕಳನ್ನು ದೇವರ ಭಯಭಕ್ತಿಯಲ್ಲಿ ಮತ್ತು ಸರಿಯಾದ ಮಾರ್ಗದಲ್ಲಿ ನಡೆಸಬೇಕಾದ ಕರ್ತವ್ಯದಲ್ಲಿ ತಂದೆ-ತಾಯಿಯರು ವಿಫಲರಾಗಿದ್ದಾರೆಂದು ಕಂಡುಬರುವುದು. ಲೋಕದಲ್ಲಿ ತಮ್ಮ ಪರಿಶುದ್ಧತೆ, ಸತ್ಯ ಮತ್ತು ಮೇಧಾವಿತನದಿಂದ ಆಶೀರ್ವಾದಕರವಾಗಿರುವ ಅನೇಕರು ತಮ್ಮ ಯಶಸ್ಸಿಗೆ ತನ್ನ ಕ್ರೈಸ್ತತಾಯಿಯು ಮಾಡಿದ ಅವಿರತ ಪ್ರಾರ್ಥನೆಯೇ ಕಾರಣವೆಂದು ಹೇಳುವರು.KanCCh 164.3