Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅನಾಥರ ಬಗ್ಗೆ ಕಾಳಜಿ ವಹಿಸುವುದು

    ವಿಧವೆಯರು ಹಾಗೂ ತಂದೆ-ತಾಯಿಯರಿಲ್ಲದ ಅನಾಥರಿಗೆ ನಾವು ಇತರೆಲ್ಲರಿಗಿಂತಹೆಚ್ಚಾದ ಪ್ರೀತಿ ಮತ್ತು ಅನುಕಂಪ ತೋರಿಸಬೇಕು. ಅವರಿಗೆ ದೇವರು ವಿಶೇಷವಾದಗಮನ ನೀಡುತ್ತಾನೆ. ಕ್ರೈಸ್ತರು ಅಂತವರಿಗೆ ಸಹಾಯ ಮಾಡುವ ಹಂಗಿನಲ್ಲಿದ್ದಾರೆ.“ಸಂಕಟದಲ್ಲಿ ಬಿದ್ದ ದಿಕ್ಕಿಲ್ಲದವರನ್ನೂ, ವಿಧವೆಯರನ್ನೂ ಪರಾಮರಿಸಿ ತನಗೆ ಪ್ರಪಂಚದದೋಷವು ಹತ್ತದಂತೆ ನೋಡಿಕೊಂಡಿರುವುದೇ ತಂದೆಯಾದ ದೇವರ ಸನ್ನಿಧಾನದಲ್ಲಿಶುದ್ಧವೂ ನಿರ್ಮಲವೂ ಆದ ಭಕ್ತಿ” (ಯಾಕೋಬನು 1:27).KanCCh 351.2

    ದೇವರ ನಿತ್ಯನಿತ್ಯವಾದ ವಾಗ್ದಾನದಲ್ಲಿ ಭರವಸವಿಟ್ಟು, ನಂಬಿಕೆಯಿಂದ ಜೀವಿಸಿದ್ದಅನೇಕ ತಂದೆಯರು ಮರಣಹೊಂದಿದ್ದಾರೆ. ದುಃಖದಲ್ಲಿರುವ ಇಂತಹ ಕುಟುಂಬದವರಅಗತ್ಯಗಳನ್ನು ದೇವರು ಹೇಗೆ ಪೂರೈಸುವನು? ಪರಲೋಕದಿಂದ ಅವರಿಗೆ ಮನ್ನಸುರಿಸಿ ಅದ್ಭುತವನ್ನು ಆತನು ಮಾಡುವುದಿಲ್ಲ. ಪ್ರವಾದಿಯಾದ ಎಲೀಯನಿಗೆ ಕಾಗೆಗಳಮೂಲಕ ಆಹಾರ ಕೊಟ್ಟಂತೆ ಅವರಿಗೆ ಕೊಡುವುದಿಲ್ಲ. ಆದರೆ ಮಾನವರ ಹೃದಯಗಳಲ್ಲಿ,ಒಂದು ಅದ್ಭುತಮಾಡಿ ಅವರು ಸ್ವಾರ್ಥ ಬಿಟ್ಟು ಉದಾರತೆಯಿಂದ ದಿಕ್ಕಿಲ್ಲದ ಅನಾಥರು,ವಿಧವೆಯರಿಗೆ ಸಹಾಯ ಮಾಡುವಂತೆ ಪ್ರೇರಿಸುತ್ತಾನೆ. ದುಃಖಿತರಾದವರನ್ನು ತನ್ನಜನರ ಕೈಗೆ ಒಪ್ಪಿಸಿ ಅವರ ಪ್ರೀತಿಯನ್ನು ದೇವರು ಪರೀಕ್ಷಿಸುತ್ತಾನೆ.KanCCh 351.3

    ದೇವರ ಪ್ರೀತಿರಸವು ಯಾರಲ್ಲಿ ಧಾರಾಳವಾಗಿ ಸುರಿಸಲ್ಪಡುವುದೋ, ಅವರು ತಮ್ಮಹೃದಯ ಮತ್ತು ಮನೆಗಳಲ್ಲಿ ಇಂತಹ ಮಕ್ಕಳಿಗೆ ಆಶ್ರಯ ನೀಡಬೇಕು. ದೊಡ್ಡಅನಾಥಾಶ್ರಮಗಳಲ್ಲಿ ಅನಾಥರಿಗೆ ಆಶ್ರಯ ನೀಡುವುದು ಉತ್ತಮವಾದ ವ್ಯವಸ್ಥೆಯಲ್ಲ.ಅನಾಥ ಮಕ್ಕಳಿಗೆ ಯಾವ ಸಂಬಂಧಿಗಳೂ ಇಲ್ಲದಿದ್ದಲ್ಲಿ, ಸಭಾ ಸದಸ್ಯರು ಇಂತವರನ್ನುದತ್ತು ತೆಗೆದುಕೊಳ್ಳಬೇಕು ಅಥವಾ ಇತರರ ಮನೆಗಳಲ್ಲಿ ಅವರಿಗೆ ವಾಸಿಸಲು ವ್ಯವಸ್ಥೆಮಾಡಬೇಕು.KanCCh 351.4

    ಕ್ರಿಸ್ತನು ಇಂತಹ ಅನಾಥಮಕ್ಕಳ ಬಗ್ಗೆ ವಿಶೇಷ ಆಸಕ್ತಿವಹಿಸುತ್ತಾನೆ. ಅಂತವರನ್ನುನಿರ್ಲಕ್ಷಿಸುವುದು ದೇವರಿಗೆವಿರುದ್ಧವಾಗಿ ಪಾಪ ಮಾಡಿದಂತೆ. ಕ್ರಿಸ್ತನ ಹೆಸರಿನಲ್ಲಿಅಂತವರಿಗೆ ಮಾಡುವ ಕರುಣೆಯ ಒಂದೊಂದು ಕಾರ್ಯವನ್ನು ಆತನು ತನಗೇಮಾಡಿದಂತೆಂದು ಭಾವಿಸಿ ಅಂಗೀಕರಿಸುತ್ತಾನೆ.KanCCh 352.1

    *****