Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
 • Results
 • Related
 • Featured
No results found for: "".
 • Weighted Relevancy
 • Content Sequence
 • Relevancy
 • Earliest First
 • Latest First

  ಅಧ್ಯಾಯ-53 — ವೈದ್ಯಕೀಯ ಸೇವೆ

  ವೈದ್ಯಕೀಯ ಸೇವೆಯು ಸುವಾರ್ತಾಸೇವೆಗೆ ಮಾರ್ಗದರ್ಶಕವಾಗಿದ್ದು, ಅದರ ಮೂಲಕಈ ಕಾಲದ ಸತ್ಯವು ಅನೇಕ ಮನೆಗಳಿಗೆ ಪ್ರವೇಶ ದೊರಕಿಸುತ್ತದೆ. ದೇವಜನರು ಇತರರಆತ್ಮ ಹಾಗೂ ಶರೀರದ ಅಗತ್ಯಗಳಿಗೆ ಸೇವೆ ಮಾಡುವುದನ್ನು ಕಲಿಯಬೇಕಾಗಿದೆ. ಆದುದರಿಂದಅವರು ಯಥಾರ್ಥವಾದ ವೈದ್ಯಕೀಯ ಸುವಾರ್ತಾಸೇವಕರಾಗಿರಬೇಕು. ನಮ್ಮ ಕೆಲಸಗಾರರುಪ್ರಾಮಾಣಿಕವಾದ ನಿಸ್ವಾರ್ಥ ಸೇವೆಮಾಡಬೇಕಾಗಿದೆ. ಕಾರ್ಯರೂಪದ ಸೇವೆಯಿಂದಅವರು ಜ್ಞಾನ ಹಾಗೂ ಅನುಭವ ಪಡೆದುಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ.ಅವರು ತಮ್ಮ ವೈದ್ಯಕೀಯ ಸೇವೆಯ ನಿಮಿತ್ತ ಮನೆಮನೆಗಳಿಗೆ ಹೋಗುವಾಗ, ಅನೇಕರಮನಸ್ಸಿನಲ್ಲಿ ಒಳ್ಳೆಯ ಪರಿಣಾಮ ಬೀರುತ್ತಾರೆ. ಬೇರೆಯಾವುದೇ ಮಾರ್ಗದಿಂದ ಸುವಾರ್ತಾಸಂದೇಶ ತಿಳಿಸಲಾರದವರಿಗೆ, ವೈದ್ಯಕೀಯ ಸೇವೆಯ ಮೂಲಕ ತಿಳಿಸಬಹುದು. ಆರೋಗ್ಯಸುಧಾರಣಾ ತತ್ವಗಳನ್ನು ಕಾರ್ಯರೂಪದಲ್ಲಿ ನಾವು ತೋರಿಸಿದಾಗ, ನಮ್ಮ ಸುವಾರ್ತಾಸೇವೆಗೆಇತರರ ಮನಸ್ಸಿನಲ್ಲಿರುವ ವಿರೋಧತೆ ಹಾಗೂ ಪೂರ್ವಗ್ರಹಪೀಡಿತ ದ್ವೇಷವನ್ನುತೆಗೆದುಹಾಕಬಹುದು. ಇಂದಿನ ಕಾಲಕ್ಕೆ ನೀಡಬೇಕಾದ ಸತ್ಯಸಂದೇಶವನ್ನುವೈದ್ಯಕೀಯಸೇವೆಯ ಮೂಲಕ ಸಾರುವವರನ್ನು ಮಹಾವೈದ್ಯನು ಹಾಗೂ ವೈದ್ಯಕೀಯಸುವಾರ್ತಾಸೇವೆಯ ಮೂಲಕರ್ತನಾದ ಕ್ರಿಸ್ತನು ಆಶೀರ್ವದಿಸುವನು.KanCCh 385.1

  ಶಾರೀರಿಕ ಸ್ವಸ್ಥತೆಯು ಸುವಾರ್ತೆಯ ಆದೇಶದೊಂದಿಗೆ ನಿಕಟ ಸಂಬಂಧ ಹೊಂದಿದೆ.ಕ್ರಿಸ್ತನು ತನ್ನ ಶಿಷ್ಯರನ್ನು ಮೊದಲ ಬಾರಿಗೆ ಸುವಾರ್ತೆ ಸಾರಬೇಕೆಂಬ ಆದೇಶ ನೀಡಿದಾಗ“ಪರಲೋಕ ರಾಜ್ಯವು ಸಮೀಪವಾಯಿತೆಂದು ಸಾರಿ ಹೇಳುತ್ತಾ ಹೋಗಿರಿ. ರೋಗಿಗಳನ್ನುಸ್ವಚ್ಛಮಾಡಿರಿ, ಸತ್ತವರನ್ನು ಬದುಕಿಸಿರಿ, ಕುಷ್ಠ ಹತ್ತಿದವರನ್ನು ಶುದ್ಧಮಾಡಿರಿ, ಉಚಿತವಾಗಿಹೊಂದಿದ್ದೀರಿ, ಉಚಿತವಾಗಿ ಕೊಡಿರಿ“ಎಂದು ಹೇಳಿದನು (ಮತ್ತಾಯ 10:7,8).KanCCh 385.2

  ಸ್ವತಃ ಕ್ರಿಸ್ತನು ನೀಡಿದ ಈ ಆದೇಶವನ್ನು ಬದಲಾಯಿಸುವ ಅಥವಾ ತಿದ್ದುಪಾಡುಮಾಡುವ ಅಗತ್ಯವಿಲ್ಲ. ಸತ್ಯವನ್ನು ಪರಿಚಯಿಸುವ ಕ್ರಿಸ್ತನ ಮಾರ್ಗವುಅತ್ಯುತ್ತಮವಾಗಿರುವುದರಿಂದ ಅದನ್ನು ಯಾವುದೇ ರೀತಿಯಲ್ಲಿ ಸುಧಾರಿಸಲಾಗದು.ರಕ್ಷಕನಾದ ಯೇಸುವು ತನ್ನ ಶಿಷ್ಯರಿಗೆ ಸ್ವತಃ ಕಾರ್ಯರೂಪದಲ್ಲಿ ಮಾಡಿ ತೋರಿಸಿದ್ದಲ್ಲದೆ,ಸತ್ಯದಲ್ಲಿ ಜನರು ಯಾವ ರೀತಿ ಸಂತೋಷಗೊಳಿಸುವುದಕ್ಕೆ ಕಾರ್ಯ ಮಾಡಬೇಕೆಂದುಬೋಧಿಸಿದನು. ಆತನು ತುಳಿತಕ್ಕೆ ಒಳಗಾದವರು, ಪಾಪದ ಭಾರ ಹೊತ್ತು ನರಳುತ್ತಿರುವವರುಹಾಗೂ ಬಳಲಿ ಬೇಸರಗೊಂಡವರಿಗೆ ಅನುಕಂಪ ತೋರಿಸಿದನು. ಆತನು ಹಸಿದವರಿಗೆಆಹಾರ ನೀಡಿ ರೋಗಿಗಳನ್ನು ಗುಣಪಡಿಸಿದನು. ಕ್ರಿಸ್ತನು ನಿರಂತರವಾಗಿ ಎಲ್ಲರಿಗೂಒಳ್ಳೆಯದನ್ನೇ ಮಾಡಿದನು. ತನ್ನ ಒಳ್ಳೆಯಕಾರ್ಯಗಳು, ಕರುಣೆ ಹಾಗೂ ಪ್ರೀತಿಪೂರಿತಮಾತುಗಳಿಂದ ಸುವಾರ್ತೆಯ ಯಥಾರ್ಥಸತ್ಯವನ್ನು ಜನರಿಗೆ ಅರ್ಥಪಡಿಸಿಕೊಟ್ಟನು.KanCCh 385.3

  ಮಾನವರ ಪರವಾಗಿ ಕ್ರಿಸ್ತನು ಮಾಡುವ ಸೇವೆಯು ಇನ್ನೂ ಮುಕ್ತಾಯವಾಗಿಲ್ಲ.ಅದುಇಂದಿನವರೆಗೂ ಮುಂದುವರಿಯುತ್ತಿದೆ. ಇದೇರೀತಿಯಲ್ಲಿ ಆತನ ರಾಯಭಾರಿಗಳಾದನಾವು ಸುವಾರ್ತೆಯನ್ನು ಸಾರಬೇಕು ಹಾಗೂ ನಾಶವಾಗುತ್ತಿರುವವರಿಗೆ ಮತ್ತು ಸತ್ಯದಿಂದದೂರವಾಗಿರುವವರಿಗೆ ಆತನ ಅನುಕಂಪವೂರಿತ ಪ್ರೀತಿಯನ್ನು ತೋರಿಸಬೇಕು. ಸಹಾಯದಅಗತ್ಯವಿರುವವರಿಗೆ ನಿಸ್ವಾರ್ಥವಾದ ಆಸಕ್ತಿಯಿಂದ ಸುವಾರ್ತೆಯ ಸತ್ಯವನ್ನುಕಾರ್ಯರೂಪದಲ್ಲಿ ತೋರಿಸಬೇಕು. ಈ ಸೇವೆಯಲ್ಲಿ ಸಂದೇಶ ಕೊಡುವುದಕ್ಕಿಂತಲೂಹೆಚ್ಚಿನ ಕಾರ್ಯವಿದೆ. ತನ್ನ ಹೆಸರಿನಲ್ಲಿ ಮುಂದೆ ಹೋಗುವವರಿಗೆ ದೇವರು ಲೋಕಕ್ಕೆಸುವಾರ್ತೆ ಸಾರಬೇಕೆಂಬ ಆದೇಶ ನೀಡಿದ್ದಾನೆ. ಅವರು ಕ್ರಿಸ್ತನೊಂದಿಗೆಜೊತೆ ಕೆಲಸಗಾರರಾಗಿದ್ದು, ಪಾಪದಿಂದ ನಾಶವಾಗುತ್ತಿರುವವರಿಗೆ ಆತನ ಅನುಕಂಪ,ಕರುಣಾಪೂರಿತ ಪ್ರೀತಿಯನ್ನು ತೋರಿಸಬೇಕಾಗಿದೆ. ಇಂದಿನ ಕಾಲದ ಸತ್ಯವನ್ನುತಿಳಿದವರಿಗಲ್ಲ, ಬದಲಾಗಿ ಕರುಣೆಯ ಸಂದೇಶವನ್ನು ಎಂದೂ ಕೇಳಿರದ ಜನರನ್ನುಎಚ್ಚರಿಸಬೇಕಾಗಿದೆ. ಈ ಉದ್ದೇಶಕ್ಕಾಗಿ ದೇವರು ಸಾವಿರಾರು ಜನರು ತನಗಾಗಿಸೇವೆಮಾಡಬೇಕೆಂದು ಕರೆಯುತ್ತಾನೆ. ನಾಶವಾಗುತ್ತಿರುವ ಜನರಿಗಾಗಿ ಪ್ರಾಮಾಣಿಕವಾಗಿಹಾಗೂ ಉತ್ಕಟವಾಗಿ ಹಾರೈಸುವ ಹೃದಯದಿಂದ ಸೇವೆ ಮಾಡಬೇಕು. ವೈದ್ಯಕೀಯಸೇವೆ ಮಾಡಬೇಕು. ಈ ರೀತಿಯಾಗಿ ಜನರ ಹೃದಯಗಳಿಗೆ ಪ್ರವೇಶ ಪಡೆದುಕೊಳ್ಳಬಹುದು.ಆಗ ಸತ್ಯವನ್ನು ಇನ್ನೂ ಹೆಚ್ಚು ನಿರ್ಣಾಯಕವಾಗಿ ಸಾರಲು ಮಾರ್ಗಸಿದ್ಧವಾಗುತ್ತದೆ.KanCCh 386.1